ICC Awards 2023: ಐಸಿಸಿ ಪ್ರಶಸ್ತಿ: ನಾಮನಿರ್ದೇಶಿತ ಪಟ್ಟಿಯಲ್ಲಿ ಇಬ್ಬರು ಭಾರತೀಯರು

ICC Awards 2023: 2023 ರಲ್ಲಿ 17 ಟಿ20 ಇನಿಂಗ್ಸ್ ಆಡಿರುವ ಸೂರ್ಯಕುಮಾರ್ ಯಾದವ್ 155.95 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿ 48.86 ಸರಾಸರಿಯಲ್ಲಿ ಒಟ್ಟು 733 ರನ್​ ಕಲೆಹಾಕಿದ್ದಾರೆ. ಈ ಮೂಲಕ ಐಸಿಸಿ 2023ರ ಟಿ20 ಕ್ರಿಕೆಟಿಗ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ICC Awards 2023: ಐಸಿಸಿ ಪ್ರಶಸ್ತಿ: ನಾಮನಿರ್ದೇಶಿತ ಪಟ್ಟಿಯಲ್ಲಿ ಇಬ್ಬರು ಭಾರತೀಯರು
ICC Awards 2023
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jan 04, 2024 | 10:33 AM

ICC Awards 2023: ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ICC) ಕಳೆದ ವರ್ಷದ ಅತ್ಯುತ್ತಮ ಆಟಗಾರರ ಪ್ರಶಸ್ತಿಗಾಗಿ  ನಾಮನಿರ್ದೇಶಿತ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಮಾತ್ರ ಕಾಣಿಸಿಕೊಂಡಿದ್ದಾರೆ. ಮಿಸ್ಟರ್ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್ 2023 ರ ಅತ್ಯುತ್ತಮ ಟಿ20 ಕ್ರಿಕೆಟಿಗರ ನಾಮನಿರ್ದೇಶಿತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2023 ರಲ್ಲಿ 17 ಟಿ20 ಇನಿಂಗ್ಸ್ ಆಡಿರುವ ಸೂರ್ಯಕುಮಾರ್ ಯಾದವ್ 155.95 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿ 48.86 ಸರಾಸರಿಯಲ್ಲಿ ಒಟ್ಟು 733 ರನ್​ ಕಲೆಹಾಕಿದ್ದಾರೆ. ಈ ಮೂಲಕ ಐಸಿಸಿ 2023ರ ಟಿ20 ಕ್ರಿಕೆಟಿಗ ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಗೆಯೇ 11 ಇನಿಂಗ್ಸ್​ಗಳಲ್ಲಿ 515 ರನ್ ಬಾರಿಸಿರುವ ಝಿಂಬಾಬ್ವೆಯ ಸಿಕಂದರ್ ರಾಝ ಹಾಗೂ 19 ಇನಿಂಗ್ಸ್​ಗಳಲ್ಲಿ 576 ರನ್ ಕಲೆಹಾಕಿರುವ ನ್ಯೂಝಿಲೆಂಡ್​ನ ಮಾರ್ಕ್​ ಚಾಪ್ಮನ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಇವರೊಂದಿಗೆ 2023 ರಲ್ಲಿ ಟಿ20 ಕ್ರಿಕೆಟ್​ನಲ್ಲಿ 55 ವಿಕೆಟ್ ಕಬಳಿಸಿರುವ ಉಗಾಂಡದ ಅಲ್ಪೇಶ್ ರಾಮ್ಜಾನಿ ಕೂಡ ಟಿ20 ಕ್ರಿಕೆಟಿಗ ಪ್ರಶಸ್ತಿ ಪಟ್ಟಿಯಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.

ಹಾಗೆಯೇ ಉದಯೋನ್ಮುಖ ಆಟಗಾರರಿಗೆ ನೀಡಲಾಗುವ ಪ್ರಶಸ್ತಿ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದಾರೆ. ಈ ಪ್ರಶಸ್ತಿಗಳಿಗೆ ನಾಮನಿರ್ದೇಶಿತರಾಗಿರುವವರಿಗೆ ಕ್ರಿಕೆಟ್ ಅಭಿಮಾನಿಗಳು icc-cricket.com ಮೂಲಕ ವೋಟ್ ಮಾಡಬಹುದು. ಈ ಮೂಲಕ ಆಯಾ ವಿಭಾಗದಲ್ಲಿ ವಿಜೇತರಾದ ಕ್ರಿಕೆಟರುಗಳ ಹೆಸರುಗಳನ್ನು ಜನವರಿ 2024 ರಲ್ಲಿ ಘೋಷಿಸಲಾಗುತ್ತದೆ. ಟಿ20 ಕ್ರಿಕೆಟರ್ ಹಾಗೂ ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ICC ವರ್ಷದ ಪುರುಷ ಟಿ20 ಕ್ರಿಕೆಟಿಗ ಪ್ರಶಸ್ತಿ:

  1. ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್)
  2. ಅಲ್ಪೇಶ್ ರಾಮ್ಜಾನಿ (ಉಗಾಂಡ)
  3. ಸಿಕಂದರ್ ರಾಝ (ಝಿಂಬಾಬ್ವೆ)
  4. ಸೂರ್ಯಕುಮಾರ್ ಯಾದವ್ (ಭಾರತ)

ICC ವರ್ಷದ ಮಹಿಳಾ ಟಿ20 ಆಟಗಾರ್ತಿ:

  1. ಚಾಮರಿ ಅಟ್ಟಾಪಟ್ಟು (ಶ್ರೀಲಂಕಾ)
  2. ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್)
  3. ಹೇಲಿ ಮ್ಯಾಥ್ಯೂಸ್ (ವೆಸ್ಟ್ ಇಂಡೀಸ್)
  4. ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ)

ICC ವರ್ಷದ ಉದಯೋನ್ಮುಖ ಪುರುಷ ಕ್ರಿಕೆಟಿಗ:

  1. ಜೆರಾಲ್ಡ್ ಕೋಟ್ಝಿ (ಸೌತ್ ಆಫ್ರಿಕಾ)
  2. ಯಶಸ್ವಿ ಜೈಸ್ವಾಲ್ (ಭಾರತ)
  3. ದಿಲ್ಶನ್ ಮಧುಶಂಕ (ಶ್ರೀಲಂಕಾ)
  4. ರಚಿನ್ ರವೀಂದ್ರ (ನ್ಯೂಝಿಲೆಂಡ್)

ಇದನ್ನೂ ಓದಿ: Virat Kohli: ಪಾಕ್ ಕ್ರಿಕೆಟಿಗರನ್ನು ಹಿಂದಿಕ್ಕಿದ ಕಿಂಗ್ ಕೊಹ್ಲಿ

ICC ವರ್ಷದ ಉದಯೋನ್ಮುಖ ಮಹಿಳಾ ಆಟಗಾರ್ತಿ:

  1. ಮಾರುಫಾ ಅಕ್ತರ್ (ಬಾಂಗ್ಲಾದೇಶ್)
  2. ಲಾರೆನ್ ಬೆಲ್ (ಇಂಗ್ಲೆಂಡ್)
  3. ಡಾರ್ಸಿ ಕಾರ್ಟರ್ (ಸ್ಕಾಟ್ಲೆಂಡ್)
  4. ಫೋಬೆ ಲಿಚ್‌ಫೀಲ್ಡ್ (ಆಸ್ಟ್ರೇಲಿಯಾ)

Published On - 10:31 am, Thu, 4 January 24