
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಒಂದರ ಮೇಲೆ ಒಂದರಂತ ಆಘಾತಗಳು ಎದುರಾಗುತ್ತಿವೆ. ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ತಂಡಕ್ಕೆ ಇದೀಗ ಐಸಿಸಿ ಕೂಡ ದೊಡ್ಡ ಶಾಕ್ ನೀಡಿದೆ. ಇದರ ಫಲವಾಗಿ ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ನಿಂದ ಹೊರಬಿದ್ದದ್ದ ಪಾಕಿಸ್ತಾನ ತಂಡದಲ್ಲಿ ಅಳಿದುಳಿದಿದ್ದ ಅಂಕಗಳನ್ನು ಸಹ ಐಸಿಸಿ ದಂಡವಾಗಿ ಕಿತ್ತುಕೊಂಡಿದೆ. ಮಾತ್ರವಲ್ಲದೆ ಪಂದ್ಯದ ಶುಲ್ಕವನ್ನು ಸಹ ದಂಡವಾಗಿ ಕಟ್ಟಿಸಿಕೊಂಡಿದೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಪಾಕಿಸ್ತಾನ ತಂಡಕ್ಕೆ ಎರಡೆರಡು ಶಿಕ್ಷೆಗಳನ್ನು ವಿಧಿಸಲಾಗಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ನಿಗದಿಗಿಂತ 11 ಓವರ್‌ಗಳನ್ನು ಕಡಿಮೆ ಬೌಲಿಂಗ್ ಮಾಡಿದೆ. ಇದರ ಪರಿಣಾಮವಾಗಿ ಇಡೀ ತಂಡದ ಪಂದ್ಯ ಶುಲ್ಕದಲ್ಲಿ ಶೇ. 50 ರಷ್ಟು ಮೊತ್ತವನ್ನು ದಂಡದ ರೂಪದಲ್ಲಿ ಕಡಿತಗೊಳಿಸಲಾಗಿದೆ.
A look at the #WTC27 standings following Pakistan’s latest sanction.
Read more 👉 https://t.co/8Phz2w2Nmh pic.twitter.com/4HmvFLDEji
— ICC (@ICC) September 14, 2026
ಇದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 11 ಅಂಕಗಳನ್ನು ಕಡಿತಗೊಳಿಸಲಾಗಿದೆ. ಇದರ ಪರಿಣಾಮವಾಗಿ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕೆಳಕ್ಕೆ ಕುಸಿದಿದ್ದು, ಪ್ರಸ್ತುತ 4.63 ಪಾಯಿಂಟ್ ಶೇಕಡಾವಾರು ಪ್ರಮಾಣದೊಂದಿಗೆ 9 ನೇ ಸ್ಥಾನದಲ್ಲಿದೆ. ಕೊನೆಯ ಸ್ಥಾನ ಪಡೆಯುವುದನ್ನು ತಪ್ಪಿಸಲು, ಪಾಕಿಸ್ತಾನ ನವೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧದ ತವರು ಟೆಸ್ಟ್ ಸರಣಿಯನ್ನು ಗೆಲ್ಲಲೇಬೇಕಿದೆ.
ಒಂದಂಕಿ ದಾಟಲಿಲ್ಲ; ಇಂಗ್ಲೆಂಡ್ ನೆಲದಲ್ಲಿ ಹೀನಾಯ ದಾಖಲೆ ಬರೆದ ಪಾಕಿಸ್ತಾನ
ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಮಾತ್ರವಲ್ಲದೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿಯೂ ಕುಸಿತ ಕಂಡಿದೆ. ತಂಡವು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಕೇವಲ 71 ಅಂಕಗಳೊಂದಿಗೆ 9 ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ 126 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ, ನ್ಯೂಜಿಲೆಂಡ್ ಮೂರನೇ ಸ್ಥಾನ ಮತ್ತು ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಐದನೇ ಸ್ಥಾನದಲ್ಲಿದೆ.
Published On - 4:47 pm, Mon, 14 September 26