Ashes: ಹೀನಾಯ ಸೋಲಿನ ಬಳಿಕ ಇಂಗ್ಲೆಂಡ್‌ಗೆ ಭಾರೀ ದಂಡದ ಬರೆ! ಟ್ರಾವಿಸ್ ಹೆಡ್ ಜೇಬಿಗೂ ಕತ್ತರಿ ಹಾಕಿದ ಐಸಿಸಿ
Ashes: ಐಸಿಸಿ ಇಂಗ್ಲೆಂಡ್‌ಗೆ ಶೇಕಡಾ 100 ಪಂದ್ಯ ಶುಲ್ಕವನ್ನು ವಿಧಿಸಿರುವ ಕಾರಣ ಅವರು ಈ ಪಂದ್ಯದ ಶುಲ್ಕವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಐದು ಪಾಯಿಂಟ್‌ಗಳ ದಂಡವನ್ನೂ ವಿಧಿಸಿದ್ದಾರೆ.

ಆಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಸೋಲನುಭವಿಸಬೇಕಾಯಿತು.ಈ ಪಂದ್ಯದ ಸೋಲು ಇಂಗ್ಲೆಂಡ್‌ಗೆ ತಲೆನೋವಾಗಿರುವುದು ಮಾತ್ರವಲ್ಲದೆ ಮತ್ತೊಂದು ಮುಖಭಂಗ ಅನುಭವಿಸಿದೆ. ಈ ದೊಡ್ಡ ಹೊಡೆತ ಇಂಗ್ಲೆಂಡ್‌ಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಹೋಗುವುದು ತುಂಬಾ ಕಷ್ಟಕರವೆಂದು ತೋರುತ್ತದೆ. ಐಸಿಸಿ ಇಂಗ್ಲೆಂಡ್‌ಗೆ ಶೇಕಡಾ 100 ಪಂದ್ಯ ಶುಲ್ಕವನ್ನು ವಿಧಿಸಿರುವ ಕಾರಣ ಅವರು ಈ ಪಂದ್ಯದ ಶುಲ್ಕವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಐದು ಪಾಯಿಂಟ್‌ಗಳ ದಂಡವನ್ನೂ ವಿಧಿಸಿದ್ದಾರೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಇಂಗ್ಲೆಂಡ್‌ಗೆ ದಂಡ ಬಿದ್ದಿರುವುದಕ್ಕೆ ಕಾರಣ. ಈ ಪಂದ್ಯದಲ್ಲಿ ಇಂಗ್ಲೆಂಡ್ ನಿಗದಿತ ಮಿತಿಯೊಳಗೆ ಓವರ್‌ಗಳನ್ನು ಪೂರ್ಣಗೊಳಿಸಲಿಲ್ಲ, ಇದರಿಂದಾಗಿ ನಿಧಾನಗತಿಯ ಓವರ್ ರೇಟ್‌ಗಾಗಿ ICC ಇಡೀ ಇಂಗ್ಲೆಂಡ್ ತಂಡಕ್ಕೆ 100 ಪ್ರತಿಶತ ದಂಡವನ್ನು ವಿಧಿಸಿದೆ.
ಈ ಬಗ್ಗೆ ಐಸಿಸಿ ಹೇಳಿಕೆ ನೀಡಿ ಮಾಹಿತಿ ನೀಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ನಿಯಮಗಳ ಪ್ರಕಾರ, ನಿಗದಿತ ಮಿತಿಗಿಂತ ತಂಡವು ಒಂದು ಓವರ್‌ಗಿಂತ ಹಿಂದೆ ಇದ್ದರೆ, ಆ ತಂಡದ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಐಸಿಸಿ ಹೇಳಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ನಿಗಧಿತ ಸಮಯಕ್ಕೆ ಎಷ್ಟು ಓವರ್ ಎಸೆಯಬೇಕಿತ್ತೊ ಅಷ್ಟು ಓವರ್‌ಗಳನ್ನು ಎಸೆಯಲಾಗಲಿಲ್ಲ. ಆದ್ದರಿಂದ ಐದು ಪಾಯಿಂಟ್ ಪೆನಾಲ್ಟಿಯೊಂದಿಗೆ ಪಂದ್ಯದ ಶುಲ್ಕದ ಶೇಕಡಾ 100 ರಷ್ಟು ದಂಡವನ್ನು ವಿಧಿಸಿತು. ಇದು ಇಂಗ್ಲೆಂಡ್‌ನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯ ಸ್ಥಾನದ ಮೇಲೆ ಪರಿಣಾಮ ಬೀರಿದೆ. ಎಂಟು ತಂಡಗಳ ಪಟ್ಟಿಯಲ್ಲಿ ಇಂಗ್ಲೆಂಡ್ ಏಳನೇ ಸ್ಥಾನದಲ್ಲಿದೆ. ಅವರ ಖಾತೆಯಲ್ಲಿ ಒಟ್ಟು ಏಳು ಪೆನಾಲ್ಟಿ ಓವರ್‌ಗಳಿವೆ. ಎರಡು ಸರಣಿಗಳ ನಂತರ, ಇಂಗ್ಲೆಂಡ್ ಈಗ ಅವರ ಖಾತೆಯಲ್ಲಿ ಒಂಬತ್ತು ಅಂಕಗಳನ್ನು ಹೊಂದಿದೆ. ಇಂಗ್ಲೆಂಡ್ ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್ ಇದೆ, ಅವರ ಸ್ಕೋರ್ ಶೇಕಡಾ 16. ವೆಸ್ಟ್ ಇಂಡೀಸ್ 25, ಭಾರತ 58, ಪಾಕಿಸ್ತಾನ 75. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ 100% ಅಂಕ ಹೊಂದಿವೆ.
ಟ್ರಾವಿಸ್ ಹೆಡ್‌ಗೂ ಬರೆ ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆಲ್ಲುವಲ್ಲಿ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಪ್ರಮುಖ ಪಾತ್ರವಹಿಸಿದರು. ಹೆಡ್ 148 ಎಸೆತಗಳಲ್ಲಿ 152 ರನ್‌ಗಳ ಇನಿಂಗ್ಸ್ ಆಡಿದರು. ಆದರೆ ಐಸಿಸಿ ಅವರ ಜೇಬಿಗೂ ಕತ್ತರಿ ಹಾಕಿದೆ. ಅಸಭ್ಯ ಭಾಷೆ ಬಳಸಿದ್ದಕ್ಕಾಗಿ ಹೆಡ್‌ಗೆ ಪಂದ್ಯದ ಶುಲ್ಕದ ಶೇಕಡಾ 15 ರಷ್ಟು ದಂಡ ವಿಧಿಸಲಾಗಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.3 ಅನ್ನು ಉಲ್ಲಂಘಿಸಿದ್ದಕ್ಕಾಗಿ ಹೆಡ್ ತಪ್ಪಿತಸ್ಥರೆಂದು ಕಂಡುಬಂದಿದ್ದಾರೆ. ಇದು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಸಭ್ಯ ಭಾಷೆ ಬಳಸುವುದನ್ನು ಒಳಗೊಂಡಿರುತ್ತದೆ. ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್‌ನ 77 ನೇ ಓವರ್‌ನಲ್ಲಿ, ಇಂಗ್ಲೆಂಡ್ ಬೌಲರ್ ಬೆನ್ ಸ್ಟೋಕ್ಸ್ ಅವರ ಬಾಲ್ ಅನ್ನು ಹೆಡ್ ತಪ್ಪಿಸಿಕೊಂಡರು. ಆಗ ಅವರು ಕೆಟ್ಟ ಪದ ಬಳಸಿದರು. ಹೆಡ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಅವರನ್ನು ವಿಚಾರಣೆಗೆ ಒಳಪಡಿಸಲಿಲ್ಲ.
Published On - 5:03 pm, Sat, 11 December 21
