U19 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೂರು ಎದುರಾಳಿಗಳು
ICC U19 World Cup 2026 schedule: ಕಿರಿಯರ ಏಕದಿನ ವಿಶ್ವಕಪ್ನ ವೇಳಾಪಟ್ಟಿ ಪ್ರಕಟವಾಗಿದೆ. ನಮೀಯಾ ಹಾಗೂ ಝಿಂಬಾಬ್ವೆಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಭಾರತ ತಂಡವು ತನ್ನ ಮೊದಲ ಸುತ್ತಿನಲ್ಲಿ ಮೂವರು ಎದುರಾಳಿಗಳನ್ನು ಎದುರಿಸಲಿದ್ದು, ಇದಾದ ಬಳಿಕ ಸೂಪರ್ ಸಿಕ್ಸ್ ಹಂತದ ಪಂದ್ಯಗಳು ನಡೆಯಲಿದೆ.

U19 Team India
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಂಬರುವ ಅಂಡರ್-19 ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯು ಜನವರಿ 15 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಫೆಬ್ರವರಿ 6, 2026 ರಂದು ನಡೆಯಲಿದೆ.
19 ವರ್ಷದೊಳಗಿನವರ ಪುರುಷರ ಏಕದಿನ ವಿಶ್ವಕಪ್ನಲ್ಲಿ 16 ತಂಡಗಳು ಕಣಕ್ಕಿಳಿಯಲಿದ್ದು, ಒಟ್ಟು 41 ಪಂದ್ಯಗಳು ನಡೆಯಲಿದೆ. ಭಾರತ ತಂಡವು ಮೊದಲ ಸುತ್ತಿನಲ್ಲಿ ಮೂರು ಎದುರಾಳಿಗಳನ್ನು ಎದುರಿಸಲಿದೆ. ಅದರಂತೆ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಯುಎಸ್ಎ ವಿರುದ್ಧ ಆಡಲಿದ್ದು, ಇದಾದ ಬಳಿಕ ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ತಂಡಗಳನ್ನು ಎದುರಿಸಲಿದೆ.
ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ಅಂಡರ್-19 ಏಕದಿನ ವಿಶ್ವಕಪ್ ವೇಳಾಪಟ್ಟಿ:
- ಜನವರಿ 15: ಯುಎಸ್ಎ vs ಭಾರತ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಜನವರಿ 15: ಝಿಂಬಾಬ್ವೆ vs ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 15: ಟಾಂಜಾನಿಯಾ vs ವೆಸ್ಟ್ ಇಂಡೀಸ್, ಎಚ್‌ಪಿ ಓವಲ್, ವಿಂಡ್‌ಹೋಕ್
- ಜನವರಿ 16: ಪಾಕಿಸ್ತಾನ್ vs ಇಂಗ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 16: ಆಸ್ಟ್ರೇಲಿಯಾ vs ಐರ್ಲೆಂಡ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
- ಜನವರಿ 16: ಅಫ್ಘಾನಿಸ್ತಾನ್ vs ಸೌತ್ ಆಫ್ರಿಕಾ, ಎಚ್‌ಪಿ ಓವಲ್, ವಿಂಡ್‌ಹೋಕ್
- ಜನವರಿ 17: ಭಾರತ vs ಬಾಂಗ್ಲಾದೇಶ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಜನವರಿ 17: ಜಪಾನ್ vs ಶ್ರೀಲಂಕಾ, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
- ಜನವರಿ 18: ನ್ಯೂಝಿಲೆಂಡ್ vs ಯುಎಸ್ಎ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಜನವರಿ 18: ಇಂಗ್ಲೆಂಡ್ vs ಝಿಂಬಾಬ್ವೆ, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 18: ವೆಸ್ಟ್ ಇಂಡೀಸ್ ವಿರುದ್ಧ ಅಫ್ಘಾನಿಸ್ತಾನ, ಎಚ್‌ಪಿ ಓವಲ್, ವಿಂಡ್‌ಹೋಕ್
- ಜನವರಿ 19: ಪಾಕಿಸ್ತಾನ vs ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 19: ಶ್ರೀಲಂಕಾ vs ಐರ್ಲೆಂಡ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
- ಜನವರಿ 19: ಸೌತ್ ಆಫ್ರಿಕಾ vs ಟಾಂಜಾನಿಯಾ, ಹೆಚ್ಪಿ ಓವಲ್, ವಿಂಡ್‌ಹೋಕ್
- ಜನವರಿ 20: ಬಾಂಗ್ಲಾದೇಶ್ vs ನ್ಯೂಝಿಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಜನವರಿ 20: ಆಸ್ಟ್ರೇಲಿಯಾ vs ಜಪಾನ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
- ಜನವರಿ 21: ಇಂಗ್ಲೆಂಡ್ vs ಸ್ಕಾಟ್ಲೆಂಡ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 21: ಅಫ್ಘಾನಿಸ್ತಾನ್ vs ತಾಂಜಾನಿಯಾ, ಎಚ್‌ಪಿ ಓವಲ್, ವಿಂಡ್‌ಹೋಕ್
- ಜನವರಿ 22: ಝಿಂಬಾಬ್ವೆ vs ಪಾಕಿಸ್ತಾನ್, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 22: ಐರ್ಲೆಂಡ್ vs ಜಪಾನ್, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
- ಜನವರಿ 22: ವೆಸ್ಟ್ ಇಂಡೀಸ್ vs ಸೌತ್ ಆಫ್ರಿಕಾ, ಎಚ್‌ಪಿ ಓವಲ್, ವಿಂಡ್‌ಹೋಕ್
- ಜನವರಿ 23: ಬಾಂಗ್ಲಾದೇಶ vs ಯುಎಸ್ಎ, ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 23: ಶ್ರೀಲಂಕಾ vs ಆಸ್ಟ್ರೇಲಿಯಾ, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
- ಜನವರಿ 24: ಭಾರತ vs ನ್ಯೂಝಿಲೆಂಡ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಜನವರಿ 24: ಸೂಪರ್ ಸಿಕ್ಸ್ ಎ4 v ಡಿ4, ಹೆಚ್ಪಿ ಓವಲ್, ವಿಂಡ್‌ಹೋಕ್
- ಜನವರಿ 25: ಸೂಪರ್ ಸಿಕ್ಸ್ ಎ1 vs ಡಿ3, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
- ಜನವರಿ 25: ಸೂಪರ್ ಸಿಕ್ಸ್ ಡಿ2 ವಿ ಎ3, ಎಚ್‌ಪಿ ಓವಲ್, ವಿಂಡ್‌ಹೋಕ್
- ಜನವರಿ 26: ಸೂಪರ್ ಸಿಕ್ಸ್ ಬಿ4 v ಸಿ4, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 26: ಸೂಪರ್ ಸಿಕ್ಸ್ ಸಿ1 ವಿ ಬಿ2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಜನವರಿ 26: ಸೂಪರ್ ಸಿಕ್ಸ್ ಡಿ1 ವಿ ಎ2, ನಮೀಬಿಯಾ ಕ್ರಿಕೆಟ್ ಮೈದಾನ, ವಿಂಡ್‌ಹೋಕ್
- ಜನವರಿ 27: ಸೂಪರ್ ಸಿಕ್ಸ್ ಸಿ2 ವಿ ಬಿ3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 27: ಸೂಪರ್ ಸಿಕ್ಸ್ ಸಿ3 ವಿ ಬಿ1, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಜನವರಿ 28: ಸೂಪರ್ ಸಿಕ್ಸ್, ಎ1 ವಿ ಡಿ2, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 29: ಸೂಪರ್ ಸಿಕ್ಸ್ ಡಿ3 ವಿ ಎ2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಜನವರಿ 30: ಸೂಪರ್ ಸಿಕ್ಸ್ ಡಿ1 ವಿರುದ್ಧ ಎ3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಜನವರಿ 30: ಸೂಪರ್ ಸಿಕ್ಸ್ ಬಿ3 ವಿ ಸಿ1, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಜನವರಿ 31: ಸೂಪರ್ ಸಿಕ್ಸ್ ಬಿ2 ವಿ ಸಿ3, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಫೆಬ್ರವರಿ 01: ಸೂಪರ್ ಸಿಕ್ಸ್ ಬಿ1 ವಿ ಸಿ2, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಫೆಬ್ರವರಿ 03: ಮೊದಲ ಸೆಮಿಫೈನಲ್, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್, ಬುಲವಾಯೊ
- ಫೆಬ್ರವರಿ 04: ಎರಡನೇ ಸೆಮಿಫೈನಲ್, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
- ಫೆಬ್ರವರಿ 06: ಫೈನಲ್, ಹರಾರೆ ಸ್ಪೋರ್ಟ್ಸ್ ಕ್ಲಬ್, ಹರಾರೆ
Published On - 9:32 am, Thu, 20 November 25
Follow Us
