AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs LSG Playing XI: ಲಕ್ನೋ ಮೊದಲು ಬ್ಯಾಟಿಂಗ್‌; ಆರ್​ಸಿಬಿ ಪ್ಲೇಯಿಂಗ್ 11 ನಲ್ಲಿ ಕೊಹ್ಲಿ ಇಲ್ಲ..!

IPL Royal Challengers Bengaluru vs Lucknow Super Giants in Kannada Playing XI: ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಲಕ್ನೋ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇನ್ನು ಕಳೆದ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಿದ್ದಾರೆ.

RCB vs LSG Playing XI: ಲಕ್ನೋ ಮೊದಲು ಬ್ಯಾಟಿಂಗ್‌; ಆರ್​ಸಿಬಿ ಪ್ಲೇಯಿಂಗ್ 11 ನಲ್ಲಿ ಕೊಹ್ಲಿ ಇಲ್ಲ..!
Rajat
ಪೃಥ್ವಿಶಂಕರ
|

Updated on:Apr 15, 2026 | 7:14 PM

Share

ಐಪಿಎಲ್​ 2026 ರ (IPL 2026) 20ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಅವರ ನೆಲದಲ್ಲಿ 18 ರನ್​ಗಳಿಂದ ಮಣಿಸಿದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮತ್ತೆ ತನ್ನ ತವರು ನೆಲದಲ್ಲಿ ಕಣಕ್ಕಿಳಿದಿದೆ. ಮೊದಲ ಎರಡು ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಿದ್ದ ಆರ್​ಸಿಬಿ ಆ ಬಳಿಕ ಎದುರಾಳಿ ತಂಡಗಳ ತವರು ನೆಲದಲ್ಲಿ ಆಡಲು ಅಲ್ಲಿಗೆ ಪ್ರಯಾಣ ಬೆಳೆಸಿತ್ತು. ಇದೀಗ ಆರ್​ಸಿಬಿ (RCB) ತನ್ನ ಐದನೇ ಪಂದ್ಯವನ್ನು ತನ್ನ ತವರು ನೆಲದಲ್ಲಿ ಆಡುತ್ತಿದೆ. ಲೀಗ್​ನಲ್ಲಿ ಇದುವರೆಗೆ 4 ಪಂದ್ಯಗಳನ್ನಾಡಿರುವ ಆರ್​ಸಿಬಿ ಮೂರು ಪಂದ್ಯಗಳಲ್ಲಿ ಗೆದ್ದು, ಒಂದು ಪಂದ್ಯವನ್ನು ಸೋತಿದೆ. ಈ ಮೂಲಕ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮೇಲೇರುವ ಇರಾದೆಯಲ್ಲಿ ರಜತ್ ಪಡೆ ಇದೆ.

ಟಾಸ್ ಗೆದ್ದ ಆರ್​ಸಿಬಿ

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಲಕ್ನೋ ಮೊದಲು ಬ್ಯಾಟಿಂಗ್‌ ಮಾಡಲಿದೆ. ಇನ್ನು ಕಳೆದ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಿದ್ದಾರೆ. ಅಂದರೆ ಕೊಹ್ಲಿ ಬ್ಯಾಟಿಂಗ್‌ ಮಾತ್ರ ಮಾಡಲಿದ್ದಾರೆ. ಉಳಿದಂತೆ ಆರ್​ಸಿಬಿ ತಂಡದಲ್ಲಿ 1 ಬದಲಾವಣೆಯಾಗಿದ್ದು, ಜೆಕೋಬ್ ಡಫ್ಫಿ ಬದಲಿಗೆ ಜೋಸ್ ಹೇಜಲ್‌ವುಡ್ ತಂಡದಲ್ಲಿ ಆಡಲಿದ್ದಾರೆ. ಇತ್ತ ಲಕ್ನೋ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಮುಖಾಮುಖಿ ದಾಖಲೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಇದುವರೆಗೆ ಆರು ಪಂದ್ಯಗಳನ್ನು ಆಡಿವೆ. ಆರ್‌ಸಿಬಿ ಈ ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ಎರಡರಲ್ಲಿ ಗೆದ್ದಿದೆ. ಆದಾಗ್ಯೂ, ಎಂಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಎರಡೂ ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗೆದ್ದಿದೆ. ಹೀಗಾಗಿ ಈ ಪಂದ್ಯ ಆರ್‌ಸಿಬಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

RCB vs LSG IPL 2026 Live Score: ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ

ಆಡುವ ಹನ್ನೊಂದರ ಬಳಗ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ರಸಿಖ್ ಸಲಾಂ, ಮತ್ತು ಜೋಶ್ ಹ್ಯಾಜಲ್‌ವುಡ್.

ಇಂಪ್ಯಾಕ್ಟ್ ಪ್ಲೇಯರ್; ವಿರಾಟ್ ಕೊಹ್ಲಿ

ಲಕ್ನೋ ಪ್ಲೇಯಿಂಗ್ XI: ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ), ಆಯುಷ್ ಬಡೋನಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಮುಕುಲ್ ಚೌಧರಿ, ಮೊಹಮ್ಮದ್ ಶಮಿ, ಅವೇಶ್ ಖಾನ್, ದಿಗ್ವೇಶ್ ರಾಠಿ, ಪ್ರಿನ್ಸ್ ಯಾದವ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:09 pm, Wed, 15 April 26

Follow Us