IND vs BAN: ಎರಡನೇ ಟೆಸ್ಟ್ ಪಂದ್ಯಕ್ಕೆ ಶಕೀಬ್ ಅಲ್ ಹಸನ್ ಡೌಟ್? ಸೆಲೆಕ್ಟರ್ ಹೇಳಿದ್ದೇನು?

IND vs BAN: ಶಕೀಬ್ ಅಲ್ ಹಸನ್ ಗಾಯದ ಸಮಸ್ಯೆಯ ನಡುವೆಯೂ ಚೆನ್ನೈ ಟೆಸ್ಟ್ ಆಡಿದ್ದರು. ವಾಸ್ತವವಾಗಿ ಕಳೆದ ಏಕದಿನ ವಿಶ್ವಕಪ್ ವೇಳೆ ಶಕೀಬ್ ಎಡಗೈ ಬೆರಳಿಗೆ ಗಾಯವಾಗಿತ್ತು. ಸರಣಿಯ ಮೊದಲ ಪಂದ್ಯದಲ್ಲೂ ಅವರು ಅದೇ ಬೆರಳಿನಲ್ಲಿ ಸಮಸ್ಯೆ ಅನುಭವಿಸಿದರು. ಇದಲ್ಲದೇ ಭುಜದ ಗಾಯದ ಸಮಸ್ಯೆಗೂ ಸಿಲುಕಿದ್ದರು. ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

IND vs BAN: ಎರಡನೇ ಟೆಸ್ಟ್ ಪಂದ್ಯಕ್ಕೆ ಶಕೀಬ್ ಅಲ್ ಹಸನ್ ಡೌಟ್? ಸೆಲೆಕ್ಟರ್ ಹೇಳಿದ್ದೇನು?
ಶಕೀಬ್ ಅಲ್ ಹಸನ್
Follow us
|

Updated on: Sep 23, 2024 | 5:38 PM

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಸೆಪ್ಟೆಂಬರ್ 27 ರಿಂದ ನಡೆಯಲಿದೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ. ಸರಣಿಯ ಮೊದಲ ಪಂದ್ಯ ಗೆದ್ದಿರುವ ಟೀಂ ಇಂಡಿಯಾ, ಕ್ಲಿಪ್ ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಇತ್ತ ಮೊದಲ ಪಂದ್ಯ ಸೋತಿರುವ ಬಾಂಗ್ಲಾದೇಶ ತಂಡವು ಸರಣಿಯನ್ನು ಡ್ರಾದಲ್ಲಿ ಕೊನೆಗೊಳಿಸುವ ಇರಾದೆಯಲ್ಲಿದೆ. ಆದರೆ ಮಹತ್ವದ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ತಂಡದ ಟೆನ್ಷನ್ ಹೆಚ್ಚಿದ್ದು, ತಂಡದ ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಕಾನ್ಪುರ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಶಕೀಬ್ ಅಲ್ ಹಸನ್​ಗೆ ಇಂಜುರಿ

ಶಕೀಬ್ ಅಲ್ ಹಸನ್ ಗಾಯದ ಸಮಸ್ಯೆಯ ನಡುವೆಯೂ ಚೆನ್ನೈ ಟೆಸ್ಟ್ ಆಡಿದ್ದರು. ವಾಸ್ತವವಾಗಿ ಕಳೆದ ಏಕದಿನ ವಿಶ್ವಕಪ್ ವೇಳೆ ಶಕೀಬ್ ಎಡಗೈ ಬೆರಳಿಗೆ ಗಾಯವಾಗಿತ್ತು. ಸರಣಿಯ ಮೊದಲ ಪಂದ್ಯದಲ್ಲೂ ಅವರು ಅದೇ ಬೆರಳಿನಲ್ಲಿ ಸಮಸ್ಯೆ ಅನುಭವಿಸಿದರು. ಇದಲ್ಲದೇ ಭುಜದ ಗಾಯದ ಸಮಸ್ಯೆಗೂ ಸಿಲುಕಿದ್ದರು. ಇಂತಹ ಪರಿಸ್ಥಿತಿಯಲ್ಲಿ ಶಕೀಬ್ ಅಲ್ ಹಸನ್ ಈಗ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಏತನ್ಮಧ್ಯೆ, ಬಾಂಗ್ಲಾದೇಶದ ಆಯ್ಕೆಗಾರ ಹನ್ನನ್ ಸರ್ಕಾರ್, ಶಕೀಬ್ ಅಲ್ ಹಸನ್ ಗಾಯದ ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ.

ಸೆಲೆಕ್ಟರ್ ಹೇಳಿದ್ದೇನು?

ಸುದ್ದಿಗಾರರೊಂದಿಗೆ ಮಾತನಾಡಿದ ಬಾಂಗ್ಲಾದೇಶದ ಆಯ್ಕೆಗಾರ ಹನ್ನನ್ ಸರ್ಕಾರ್, ‘ಶಕೀಬ್ ನಮ್ಮ ಅತ್ಯುತ್ತಮ ಆಟಗಾರ. ಅವರು ಆಡುವ ಹನ್ನೊಂದರ ಬಳಗದಲ್ಲಿದ್ದಾಗ, ತಂಡದ ಸಂಯೋಜನೆಗಳನ್ನು ಮಾಡುವುದು ನಮಗೆ ಸುಲಭವಾಗುತ್ತದೆ. ಶಕೀಬ್ ಅವರು ಮೊದಲು ಬ್ಯಾಟಿಂಗ್ ಮಾಡಿದ ರೀತಿಗೆ ಹೋಲಿಸಿದರೆ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಹೆಚ್ಚಿನ ವಿಶ್ವಾಸವನ್ನು ತೋರಿಸಿದರು. ಅವರು ನಿರಾಳವಾಗಿ ಆಡಿದರು ಮತ್ತು ಒತ್ತಡವನ್ನು ನಿಭಾಯಿಸಿದರು. ಹೌದು, ಅವರು ದೊಡ್ಡ ಸ್ಕೋರ್ ಮಾಡಲಿಲ್ಲ, ಆದರೆ ಅವರು ಯಾವಾಗಲೂ ತಂಡದ ಸಮತೋಲನಕ್ಕೆ ಮುಖ್ಯವಾಗಿದ್ದಾರೆ.

ಮುಂದಿನ ಪಂದ್ಯಕ್ಕೆ ಶಕೀಬ್ ಅವರನ್ನು ಆಯ್ಕೆ ಮಾಡುವುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಇನ್ನು ಸಾಕಷ್ಟು ಸಮಯವಿದೆ. ಅಲ್ಲದೆ ಶಕೀಬ್ ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂದು ನಾವು ನೋಡುತ್ತೇವೆ. ಶಕೀಬ್ ಅವರಿಗೆ ಕೈ ನೋವಿದೆ ಎಂಬುದು ಚರ್ಚೆಯಾಗುತ್ತಿದೆ. ಆದರೆ ಪಂದ್ಯಕ್ಕೂ ಮೊದಲು ಈ ಚರ್ಚೆ ಇರಲಿಲ್ಲ. ನಾವು ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸುವ ಮೊದಲು ಅವರು 100 ಪರ್ಸೆಂಟ್ ಫಿಟ್ ಆಗಿದ್ದಾರೆ ಎಂದು ಫಿಸಿಯೊದಿಂದ ಕ್ಲಿಯರೆನ್ಸ್ ತೆಗೆದುಕೊಂಡಿದ್ದೇವೆ. ಶಕೀಬ್ ಅಂತಹ ಆಟಗಾರ ಎಂದರೆ ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ ಬ್ಯಾಟ್ಸ್‌ಮನ್ ಆಗಿ ಆಡಬಹುದು. ಅವರು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದರೆ, ಅದು ವಿಭಿನ್ನ ಸನ್ನಿವೇಶವಾಗಿದೆ. ಇನ್ನೆರಡು ದಿನಗಳ ಕಾಲ ಅವರನ್ನು ನಿಗಾ ಇಡಲಾಗುವುದು. ಇದರ ನಂತರ ನಾವು ಫಿಸಿಯೊ ಅವರಿಂದ ಖಚಿತತೆ ಪಡೆದ ಬಳಿಕ ಅವರ ಆಯ್ಕೆಯ ಬಗ್ಗೆ ತಿರ್ಮಾನಿಸಲಿದ್ದೇವೆ ಎಂದರು.

ಮೊದಲ ಟೆಸ್ಟ್‌ನಲ್ಲಿ ಶಕೀಬ್ ವಿಫಲ

ಶಕೀಬ್ ಅಲ್ ಹಸನ್‌ಗೆ ಚೆನ್ನೈ ಟೆಸ್ಟ್ ವಿಶೇಷವೇನು ಆಗಿರಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಕೇವಲ 8 ಓವರ್ ಬೌಲ್ ಮಾಡಿದ ಅವರು ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಅದೇ ಸಮಯದಲ್ಲಿ, ಬ್ಯಾಟಿಂಗ್‌ನಲ್ಲೂ ಅವರು ಕೇವಲ 32 ರನ್‌ಗಳ ಕೊಡುಗೆ ನೀಡಲು ಶಕ್ತರಾದರು. ಇದಾದ ಬಳಿಕ ಎರಡನೇ ಇನಿಂಗ್ಸ್​ನಲ್ಲಿ 13 ಓವರ್ ಬೌಲ್ ಮಾಡಿದ ಅವರು ಈ ಬಾರಿಯೂ ಯಾವುದೇ ವಿಕೆಟ್ ಪಡೆಯಲಿಲ್ಲ. ಪಂದ್ಯದ ಕೊನೆಯ ಇನಿಂಗ್ಸ್‌ನಲ್ಲಿ ಅವರು 25 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ