IND vs ENG: ‘ತಂಡಕ್ಕಾಗಿ ಎಲ್ಲವನ್ನೂ ಪಣಕ್ಕಿಡುವ’; ಸಿರಾಜ್ರನ್ನು ಹಾಡಿಹೊಗಳಿದ ಕಿಂಗ್ ಕೊಹ್ಲಿ
India vs England Test Series: ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು 6 ರನ್‌ಗಳಿಂದ ಗೆದ್ದು ಸರಣಿಯನ್ನು 2-2ಕ್ಕೆ ಸಮಬಲಗೊಳಿಸಿತು. ಮೊಹಮ್ಮದ್ ಸಿರಾಜ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಮತ್ತು ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್ ಅವರ ಬ್ಯಾಟಿಂಗ್ ಈ ಗೆಲುವಿಗೆ ಕಾರಣ. ವಿರಾಟ್ ಕೊಹ್ಲಿ ಮತ್ತು ಜೈ ಶಾ ಅವರು ಈ ವಿಜಯವನ್ನು ಶ್ಲಾಘಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ (Team India) ಯಾರೂ ನಿರೀಕ್ಷಿಸದ ಪ್ರದರ್ಶನ ನೀಡಿ ಸರಣಿಯನ್ನು ಸಮಬಲಗೊಳಿಸುವದರೊಂದಿಗೆ ಪ್ರವಾಸಕ್ಕೆ ವಿದಾಯ ಹೇಳಿದೆ. ಓವಲ್‌ನಲ್ಲಿ (Oval Test) ನಡೆದ ಕೊನೆಯ ಟೆಸ್ಟ್ ಪಂದ್ಯವನ್ನು 6 ರನ್‌ಗಳಿಂದ ಗೆದ್ದುಕೊಳ್ಳುವ ಮೂಲಕ ಗಿಲ್ ಪಡೆ ಸರಣಿಯನ್ನು 2-2 ರಿಂದ ಡ್ರಾದಲ್ಲಿ ಕೊನೆಗೊಳಿಸಿತು. ಟೀಂ ಇಂಡಿಯಾದ ಈ ಗೆಲುವು ಆಟಗಾರರು ಮಾತ್ರವಲ್ಲದೆ ಪ್ರತಿಯೊಬ್ಬ ಭಾರತೀಯ ಅಭಿಮಾನಿಯನ್ನು ಸಂತಸದ ಅಲೆಯಲ್ಲಿ ತೇಲುವಂತೆ ಮಾಡಿದೆ. ತಂಡದ ಈ ಪ್ರದರ್ಶನವನ್ನು ಇಡೀ ವಿಶ್ವ ಕ್ರಿಕೆಟ್ ಗುಣಗಾನ ಮಾಡುತ್ತಿದೆ. ಈ ನಡುವೆ ತಂಡ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕೂಡ ತಂಡದ ಹೋರಾಟದ ಮನೋಭಾವವನ್ನು ಶ್ಲಾಘಿಸಿದ್ದು, ವಿಶೇಷವಾಗಿ ಮೊಹಮ್ಮದ್ ಸಿರಾಜ್ (Mohammed Siraj) ಅವರನ್ನು ಹಾಡಿ ಹೊಗಳಿದ್ದಾರೆ.
ಓವಲ್ ಟೆಸ್ಟ್ ಪಂದ್ಯದ ಕೊನೆಯ ದಿನದಂದು, ಟೀಂ ಇಂಡಿಯಾ ಇಂಗ್ಲೆಂಡ್‌ನ ಉಳಿದ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿತು. ಈ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸತತ ಎರಡನೇ ಗೆಲುವು ದಾಖಲಿಸಿತು. ಈ ಗೆಲುವಿನ ಆಧಾರದ ಮೇಲೆ, ಭಾರತ ತಂಡ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಓವಲ್ ಟೆಸ್ಟ್‌ನ ಈ ಗೆಲುವು ಕೂಡ ವಿಶೇಷವಾಗಿತ್ತು ಏಕೆಂದರೆ ಸೋಲಿನ ಪರಿಸ್ಥಿತಿಯಲ್ಲಿದ್ದ ಟೀಂ ಇಂಡಿಯಾ ಪುಟಿದೆದ್ದು, ಇಂಗ್ಲೆಂಡ್ ಪರ ವಾಲಿದ್ದ ಜಯವನ್ನು ಕಸಿದುಕೊಂಡಿತು. ಈ ಸ್ಮರಣೀಯ ಗೆಲುವಿನ ಶ್ರೇಯ ಮೊಹಮ್ಮದ್ ಸಿರಾಜ್ ಅವರಿಗೆ ಸಲ್ಲಬೇಕು. ಸಿರಾಜ್ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿಕೊಂಡರು.
ಸಿರಾಜ್ ಬಗ್ಗೆ ಕೊಹ್ಲಿ ಹೇಳಿದ್ದೇನು?
ಟೀಂ ಇಂಡಿಯಾದ ಈ ಯಶಸ್ಸಿನ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಸುಮಾರು 3 ತಿಂಗಳ ಹಿಂದೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ವಿರಾಟ್, ಟೀಮ್ ಇಂಡಿಯಾದ ಹೋರಾಟದ ಮನೋಭಾವವನ್ನು ಶ್ಲಾಘಿಸಿದ್ದು, ಸಿರಾಜ್ ಅವರನ್ನು ಹಾಡಿ ಹೊಗಳಿದ್ದಾರೆ. ಕೊಹ್ಲಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, ‘ಟೀಂ ಇಂಡಿಯಾದ ಮಹಾನ್ ಗೆಲುವು. ಸಿರಾಜ್ ಮತ್ತು ಪ್ರಸಿದ್ಧ್ ಅವರ ಹೋರಾಟದ ಮನೋಭಾವ ಮತ್ತು ಧೈರ್ಯ ನಮಗೆ ಈ ಅದ್ಭುತ ವಿಜಯವನ್ನು ನೀಡಿತು. ತಂಡಕ್ಕಾಗಿ ಎಲ್ಲವನ್ನೂ ಪಣಕ್ಕಿಡುವ ಸಿರಾಜ್ ಅವರನ್ನು ನಾನು ಇಲ್ಲಿ ವಿಶೇಷವಾಗಿ ಸ್ಮರೀಸುತ್ತೇನೆ. ಸಿರಾಜ್ ಅವರ ಪ್ರದರ್ಶನದಿಂದ ನನಗೆ ತುಂಬಾ ಸಂತೋಷ ನೀಡಿದೆ’ ಎಂದು ಬರೆದುಕೊಂಡಿದ್ದಾರೆ.
Great win by team india. Resilience and determination from Siraj and Prasidh has given us this phenomenal victory. Special mention to Siraj who will put everything on the line for the team. Extremely happy for him ❤️@mdsirajofficial @prasidh43
— Virat Kohli (@imVkohli) August 4, 2025
IND vs ENG: 1113 ಎಸೆತಗಳು, 23 ವಿಕೆಟ್..! ಇಂಗ್ಲೆಂಡ್ ಪ್ರವಾಸದಲ್ಲಿ ಸಿರಾಜ್ ಅಬ್ಬರ ಹೀಗಿತ್ತು
ಜೈ ಶಾ ಶ್ಲಾಘನೆ
ಅಂದಹಾಗೆ ಕೊಹ್ಲಿ ಮಾತ್ರವಲ್ಲದೆ, ಐಸಿಸಿ ಅಧ್ಯಕ್ಷ ಮತ್ತು ಮಾಜಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಟೀಂ ಇಂಡಿಯಾದ ಗೆಲುವಿಗೆ ಅಭಿನಂದನೆ ಸಲ್ಲಿಸಿದರು. ಇದರ ಜೊತೆಗೆ ಇಂಗ್ಲೆಂಡ್ ತಂಡವನ್ನು ಸಹ ಹೊಗಳಿದರು. ‘ಆಟದ ಇತಿಹಾಸದಲ್ಲಿ ಅತ್ಯಂತ ರೋಮಾಂಚಕಾರಿ ಪಂದ್ಯಗಳಲ್ಲಿ ಒಂದನ್ನು ಓವಲ್‌ನಲ್ಲಿ ನೋಡಲಾಯಿತು. ಈ ಮೇರುಕೃತಿಗಾಗಿ ಭಾರತ ಮತ್ತು ಇಂಗ್ಲೆಂಡ್‌ಗೆ ನಮನಗಳು’ ಎಂದು ಜಯ್ ಶಾ ಬರೆದುಕೊಂಡಿದ್ದಾರೆ.
What the world witnessed today was pure Test cricket magic. The Oval delivered one of the most gripping contests in the history of the sport. Salute to both @BCCI (India) and @englandcricket for this masterpiece. pic.twitter.com/1VgkJY83Ee
— Jay Shah (@JayShah) August 4, 2025
ಹಾಗೆಯೇ 7 ಆಟಗಾರರನ್ನು ಹೊಗಳಿರುವ ಜಯ್ ಶಾ ತಮ್ಮ ಪೋಸ್ಟ್‌ನಲ್ಲಿ ಟೀಂ ಇಂಡಿಯಾದ ವಿಜಯದ ನಾಯಕ ಮೊಹಮ್ಮದ್ ಸಿರಾಜ್, ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್‌ಮನ್ ಗಿಲ್ ಅವರ ಬ್ಯಾಟಿಂಗ್ ಮತ್ತು ಅವರ ನಾಯಕತ್ವವನ್ನು ಹೊಗಳಿದ್ದಾರೆ. ಹಾಗೆಯೇ ರವೀಂದ್ರ ಜಡೇಜಾ ಅವರ ಆಲ್‌ರೌಂಡ್ ಪ್ರದರ್ಶನವನ್ನು ಉಲ್ಲೇಖಿಸಿದ್ದಾರೆ. ಇವರಲ್ಲದೆ ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ಅವರನ್ನು ಸಹ ಜಯ್ ಶಾ ಅಭಿನಂದಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:14 pm, Mon, 4 August 25
