AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಬೆಳಿಗ್ಗೆ ಎದ್ದ ಕೂಡಲೇ ಈ ಎಮೋಜಿಯನ್ನು ಡೌನ್​ಲೌಡ್ ಮಾಡಿಕೊಂಡೆ; ಗೆಲುವಿನ ಬಳಿಕ ಸಿರಾಜ್ ಹೇಳಿದ್ದೇನು?

Mohammed Siraj: ಓವಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ದಾಳಿ ಅತ್ಯುತ್ತಮವಾಗಿತ್ತು. ಅವರು ಎರಡು ಇನ್ನಿಂಗ್ಸ್‌ಗಳಲ್ಲಿ 9 ವಿಕೆಟ್‌ಗಳನ್ನು ಪಡೆದು ಭಾರತಕ್ಕೆ ಗೆಲುವು ತಂದುಕೊಟ್ಟರು. ಸಿರಾಜ್ ಅವರ ನಿರ್ಣಾಯಕ ವಿಕೆಟ್‌ಗಳು ಮತ್ತು ಅವರ ಆತ್ಮವಿಶ್ವಾಸದಿಂದ ಕೂಡಿದ ಪ್ರದರ್ಶನ ಭಾರತೀಯ ತಂಡಕ್ಕೆ ಸರಣಿಯನ್ನು 2-2ರಿಂದ ಸಮಬಲಗೊಳಿಸಲು ಸಹಾಯ ಮಾಡಿತು. ಕ್ಯಾಚ್ ಕೈಚೆಲ್ಲಿದ್ದರೂ, ಸಿರಾಜ್ ತಮ್ಮ ಪ್ರದರ್ಶನದ ಬಗ್ಗೆ ತುಂಬಾ ಭಾವುಕರಾಗಿದ್ದರು.

IND vs ENG: ಬೆಳಿಗ್ಗೆ ಎದ್ದ ಕೂಡಲೇ ಈ ಎಮೋಜಿಯನ್ನು ಡೌನ್​ಲೌಡ್ ಮಾಡಿಕೊಂಡೆ; ಗೆಲುವಿನ ಬಳಿಕ ಸಿರಾಜ್ ಹೇಳಿದ್ದೇನು?
Mohammed Siraj
ಪೃಥ್ವಿಶಂಕರ
|

Updated on: Aug 04, 2025 | 7:28 PM

Share

ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಇಲ್ಲದೆಯೇ ಟೀಂ ಇಂಡಿಯಾ (Team India) ಓವಲ್ ಟೆಸ್ಟ್ ಪಂದ್ಯಕ್ಕಿಳಿದಿತ್ತು. ಇಂತಹ ಪರಿಸ್ಥಿತಿಯಲ್ಲಿ ತಂಡದ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿ ಮೊಹಮ್ಮದ್ ಸಿರಾಜ್ (Mohammed Siraj ) ಹೆಗಲ ಮೇಲಿತ್ತು. ಈ ರೀತಿಯ ಜವಾಬ್ದಾರಿ ಪಡೆದಾಗ ಸಿರಾಜ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಈ ಹಿಂದೆಯೇ ಸಾಕಷ್ಟು ಭಾರಿ ಸಾಭೀತಾಗಿತ್ತು. ಆದರೆ ಓವಲ್ ಟೆಸ್ಟ್ (Oval Test) ಪಂದ್ಯ ಸಿರಾಜ್​ಗೆ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಸಿರಾಜ್​ಗೆ ಬೆಂಬಲವಾಗಿದಿದ್ದು, ಅನಾನುಭವಿಗಳಾದ ಆಕಾಶ್ ದೀಪ್ ಹಾಗೂ ಪ್ರಸಿದ್ಧ್ ಕೃಷ್ಣ. ಈ ಅನಾನುಭವಿಗಳನ್ನು ಕಟ್ಟಿಕೊಂಡು ದಾಳಿ ಮುಂದುವರೆಸಿದ ಸಿರಾಜ್, ಓವಲ್​ನಲ್ಲಿ ಇತಿಹಾಸ ಸೃಷ್ಟಿಸಿದರು. ಎರಡು ಇನ್ನಿಂಗ್ಸ್​ನಲ್ಲಿ 9 ವಿಕೆಟ್ ಕಬಳಿಸಿದ ಸಿರಾಜ್, ಈ ಪ್ರವಾಸವನ್ನು ಅತ್ಯಧಿಕ 23 ವಿಕೆಟ್​ಗಳೊಂದಿಗೆ ಕೊನೆಗೊಳಿಸಿದರು.

ಸಿರಾಜ್ ಮಾರಕ ದಾಳಿ

ವಾಸ್ತವವಾಗಿ ಐದನೇ ದಿನದಾಟದಲ್ಲಿ ಮೊದಲು ಬೌಲಿಂಗ್ ಮಾಡಿದ ಪ್ರಸಿದ್ಧ್ ಒಂದೇ ಓವರ್​ನಲ್ಲಿ 2 ಬ್ಯಾಕ್ ಟು ಬ್ಯಾಕ್ ಬೌಂಡರಿ ನೀಡಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಇಂತಹ ಸಂದರ್ಭದಲ್ಲಿ ದಾಳಿಗಿಳಿದ ಸಿರಾಜ್ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಕೇವಲ 2 ರನ್ ಗಳಿಸಿದ್ದ ಭರವಸೆಯ ಬ್ಯಾಟರ್ ಜೇಮೀ ಸ್ಮಿತ್, ಧ್ರುವ್ ಜುರೆಲ್​ಗೆ ಕ್ಯಾಚ್ ನೀಡಿದರು. ಆ ಬಳಿಕ ಜೇಮೀ ಓವರ್ಟನ್ ಅವರನ್ನು ಎಲ್ಬಿಡಬ್ಲ್ಯೂ ಖೆಡ್ಡಕ್ಕೆ ಕೆಡುವಿದ ಸಿರಾಜ್ ತಂಡದ ಗೆಲುವಿನ ಭರವಸೆಯನ್ನು ಹೆಚ್ಚಿಸಿದರು. ನಂತರ ಭಾರತದ ಗೆಲುವಿಗೆ ಅಡ್ಡ ಗೋಡೆಯಾಗಿ ನಿಂತಿದ್ದ ಗಸ್ ಅಟ್ಕಿನ್ಸನ್ ಅವರನ್ನು ಮೊಹಮ್ಮದ್ ಸಿರಾಜ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಇಂಗ್ಲೆಂಡ್ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ಈ ವಿಕೆಟ್ ಭಾರತಕ್ಕೆ ಓವಲ್ ಟೆಸ್ಟ್‌ನಲ್ಲಿ ಜಯ ತಂದುಕೊಟ್ಟಿದ್ದು, ಮಾತ್ರವಲ್ಲದೆ ಸರಣಿಯನ್ನು 2-2 ರಿಂದ ಸಮಬಲಗೊಳಿಸಿತು.

ಬಿಲೀವ್ ಎಮೋಜಿಯನ್ನು ಡೌನ್​ಲೌಡ್ ಮಾಡಿದೆ

ಪಂದ್ಯ ವಿಜೇತ ಪ್ರದರ್ಶನ ನೀಡಿದ ಬಳಿಕ ಮಾತನಾಡಿದ ಸಿರಾಜ್ ತುಂಬಾ ಭಾವುಕರಾಗಿ ಕಾಣಿಸಿಕೊಂಡರು. ನಂತರ ಮಾತು ಮುಂದುವರೆಸಿದ ಸಿರಾಜ್, ‘ನಾನು ಬೆಳಿಗ್ಗೆ ಎದ್ದ ಕೂಡಲೇ ನನ್ನ ಫೋನ್​ನಿಂದ ಗೂಗಲ್ ಪರಿಶೀಲಿಸಿ ಬಿಲೀವ್ ಎಮೋಜಿಯನ್ನು ಡೌನ್​ಲೌಡ್ ಮಾಡಿ ಅದನ್ನು ನನ್ನ ವಾಲ್‌ಪೇಪರ್ ಮಾಡಿಕೊಂಡೆ, ನಂತರ ದೇಶಕ್ಕಾಗಿ ಇದನ್ನು ನಾನು ಮಾಡುತ್ತೇನೆ ಎಂದು ನನಗೆ ನಾನೇ ಹೇಳಿಕೊಂಡೆ. ನನಗೆ ಒಂದೇ ಒಂದು ಯೋಜನೆ ಇತ್ತು, ನಾನು ಸರಿಯಾದ ಜಾಗದಲ್ಲಿ ಚೆಂಡನ್ನು ಬೌಲ್ ಮಾಡಬೇಕು. ಈ ಯತ್ನದಲ್ಲಿ ನಾನು ವಿಕೆಟ್ ಪಡೆಯುತ್ತೇನೋ ಅಥವಾ ರನ್ ಕಳೆದುಕೊಳ್ಳುತ್ತೇನೋ ಅದು ಮುಖ್ಯವಾಗಿರಲಿಲ್ಲ ಎಂದರು.

IND vs ENG: ಕೊನೆಯ ವಿಕೆಟ್ ಉರುಳಿಸಿದ ಸಿರಾಜ್; ತಂಡದ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು ನೀವೇ ನೋಡಿ

ಬೌಂಡರಿ ಮುಟ್ಟುತ್ತೇನೆ ಎಂದು ಭಾವಿಸಿರಲಿಲ್ಲ

ನಂತರ ಬ್ರೂಕ್ ಕ್ಯಾಚ್ ಅನ್ನು ಕೈಚೆಲ್ಲಿದ ಬಗ್ಗೆ ಸಿರಾಜ್ ಬಳಿ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿರಾಜ್, ‘ನಾನು ಚೆಂಡನ್ನು ಹಿಡಿದಾಗ, ನಾನು ಬೌಂಡರಿ ಮುಟ್ಟುತ್ತೇನೆ ಎಂದು ಭಾವಿಸಿರಲಿಲ್ಲ. ಅದು ಪಂದ್ಯವನ್ನು ಬದಲಾಯಿಸುವ ಕ್ಷಣವಾಗಿತ್ತು. ನಾಲ್ಕನೇ ದಿನದಂದು ಹ್ಯಾರಿ ಬ್ರೂಕ್ ಕ್ಯಾಚ್ ಹಿಡಿದಿದ್ದರೆ ಪಂದ್ಯ ಈ ಹಂತಕ್ಕೆ ತಲುಪುತ್ತಿರಲಿಲ್ಲ. ನಾನು ಬ್ರೂಕ್ ಕ್ಯಾಚ್ ಹಿಡಿದಿದ್ದರೆ ಪಂದ್ಯ ಐದನೇ ದಿನ ತಲುಪುತ್ತಿರಲಿಲ್ಲ. ನಾನು ಮಾಡಿದ ತಪ್ಪು ನಿಜವಾಗಿಯೂ ನಮ್ಮ ತಂಡಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡಿತು. ಜೀವದಾನ ಸಿಕ್ಕ ಬಳಿಕ ಬ್ರೂಕ್ ಟಿ20 ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಆದರೆ ನಾನು ತಂಡವನ್ನು ಗೆಲ್ಲಿಸಬಲ್ಲೆ ಎಂದು ನಾನು ಯಾವಾಗಲೂ ನನ್ನ ಮೇಲೆ ನಂಬಿಕೆ ಇಟ್ಟಿದ್ದೆ. ಅಂತಿಮವಾಗಿ ನಾವು ಗೆದ್ದೆವು, ಅದು ಒಳ್ಳೆಯ ವಿಷಯ’ ಎಂದು ಸಿರಾಜ್ ಹೇಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?