ಪ್ರಸ್ತುತ ವಿಶ್ವ ಕ್ರಿಕೆಟ್ನಲ್ಲಿ ಶರ ವೇಗದಲ್ಲಿ ಬೆಳೆಯುತ್ತಿರುವ ಹೆಸರೆಂದರೆ ಅದು ಟೀಂ ಇಂಡಿಯಾದ (Team India) ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill). ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವ ಗಿಲ್ ಪ್ರತಿ ಪಂದ್ಯದಲ್ಲೂ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಕಳೆದ ಬಾಂಗ್ಲಾ ಸರಣಿಯಲ್ಲಿ ತಮ್ಮ ಎರಡನೇ ಏಕದಿನ ಶತಕ ಸಿಡಿಸಿ ಮಿಂಚಿದ್ದ ಗಿಲ್, ಇದೀಗ ನ್ಯೂಜಿಲೆಂಡ್ ವಿರುದ್ಧ (India Vs New Zealand) ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದರು. ಬಳಿಕ ನಡೆದ ಎರಡನೇ ಏಕದಿನ ಪಂದ್ಯದಲ್ಲಿಯೂ ಅಜೇಯ 40 ರನ್ ಗಳಿಸಿದ್ದ ಗಿಲ್, ಪಂದ್ಯ ವಿಜೇತ ಇನ್ನಿಂಗ್ಸ್ ಆಡಿದ್ದಾರೆ. ಹೀಗೆ ಪಂದ್ಯದಿಂದ ಪಂದ್ಯಕ್ಕೆ ತನ್ನ ಆಟದಲ್ಲಿ ಪಕ್ವತೆ ಪಡೆದುಕೊಳ್ಳುತ್ತಿರುವ ಗಿಲ್ ಆಟಕ್ಕೆ ಫಿದಾ ಆಗಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಲಿಟಲ್ ಮಾಸ್ಟರ್ ಖ್ಯಾತಿಯ ಸುನೀಲ್ ಗವಾಸ್ಕರ್ (Sunil Gavaskar) ಈ ಯುವ ಆಟಗಾರನಿಗೆ ಹೊಸ ಅಡ್ಡ ಹೆಸರೊಂದನ್ನು ಇಟ್ಟಿದ್ದಾರೆ.
ಕಿವೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ಮುಗಿದ ಬಳಿಕ ಶುಭ್ಮನ್ ಗಿಲ್ ಜೊತೆ ಸಂಭಾಷಣೆ ನಡೆಸಿದ ಮಾಜಿ ಅನುಭವಿ ಆಟಗಾರ ಸುನಿಲ್ ಗವಾಸ್ಕರ್ ಯುವ ಬ್ಯಾಟರ್ನ ಆಟವನ್ನು ಮನಸಾರೆ ಕೊಂಡಾಡಿದರು. ಬಳಿಕ ಶುಭ್ಮನ್ ಗಿಲ್ಗೆ ಹೊಸ ನಿಕ್ ನೇಮ್ ಇಟ್ಟಿರುವುದಾಗಿ ಹೇಳಿಕೊಂಡ ಗವಾಸ್ಕರ್, ‘ಗಿಲ್, ನಾನು ನಿಮಗೆ ಸ್ಮೂತ್‌ಮ್ಯಾನ್ ಗಿಲ್ ಎಂಬ ಹೊಸ ಅಡ್ಡಹೆಸರನ್ನು ಇಟ್ಟಿದ್ದೇನೆ. ಇದನ್ನು ನೀವು ಅನ್ಯತ ಭಾವಿಸುವುದಿಲ್ಲ ಎಂದು ನಾನು ಅಂದುಕೊಂಡಿದ್ದೇನೆ’ ಎಂದಿದ್ದಾರೆ.
Ranji Trophy 2023: ಶುಭ್ಮನ್ ಗಿಲ್ರಂತೆಯೇ ದ್ವಿಶತಕ ಸಿಡಿಸಿ ಮಿಂಚಿದ ಕನ್ನಡಿಗ ಮಯಾಂಕ್ ಅಗರ್ವಾಲ್..!
ಹೊಸ ನಿಕ್ ನೇಮ್ ಪಡೆದ ಗಿಲ್ ಕೂಡ ಸರ್, ನನ್ನಿಂದ ಯಾವುದೇ ಅಭ್ಯಂತರವಿಲ್ಲ ಎಂದು ಉತ್ತರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಗಿಲ್, ಕೇವಲ 19 ಇನ್ನಿಂಗ್ಸ್‌ಗಳಲ್ಲಿ 1000 ರನ್ ಪೂರೈಸಿದ್ದರು. ಇದರೊಂದಿಗೆ ಅತ್ಯಂತ ಕಡಿಮೆ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ ಅತ್ಯಂತ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಗಿಲ್ ಆಟವನ್ನು ಮನಸಾರೆ ಕೊಂಡಾಡಿರುವ ಪಾಕಿಸ್ತಾನದ ಮಾಜಿ ಆಟಗಾರ ಸಲ್ಮಾನ್ ಬಟ್, ಗಿಲ್ ಆಡುವುದನ್ನು ನೋಡಿದಾಗಿನಿಂದ ನಾನು ಅವರ ಅಭಿಮಾನಿಯಾಗಿದ್ದೇನೆ. ಅವರು ವಿಭಿನ್ನ ರೀತಿಯ ಕ್ರಿಕೆಟ್ ಆಡಿದ್ದಾರೆ. ಈ ವಯಸ್ಸಿನಲ್ಲಿ, ಕೆಲವೇ ಕೆಲವು ಆಟಗಾರರು ಈ ರೀತಿಯ ಪಂದ್ಯಗಳನ್ನು ಮುಗಿಸಲು ಸಾಧ್ಯವಾಗುತ್ತದೆ ಎಂದು ಬಟ್ ಹೇಳಿಕೊಂಡಿದ್ದಾರೆ.
ಇನ್ನು ಎರಡನೇ ಏಕದಿನ ಪಂದ್ಯದಲ್ಲಿ 8 ವಿಕೆಟ್ಗಳ ಅದ್ಧೂರಿ ಜಯ ಸಾಧಿಸಿರುವ ಟೀಂ ಇಂಡಿಯಾ ಇದೀಗ ಮೂರನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಈಗಾಗಲೇ 3 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ. ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನೂ ವಶಪಡಿಸಿಕೊಂಡಿದ್ದು, ಇದೀಗ ಜನವರಿ 24 ರಂದು ಇಂದೋರ್‌ನಲ್ಲಿ ನಡೆಯುವ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ