IND vs SA: ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಖಚಿತ, ಆದರೆ ಆಟಗಾರರ ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ: ಬಿಸಿಸಿಐ
IND vs SA: ನಾವು ದಕ್ಷಿಣ ಆಫ್ರಿಕಾ ಜೊತೆ ನಿಲ್ಲುತ್ತೇವೆ. ಆದರೆ ಆಟಗಾರರ ಸುರಕ್ಷತೆಯಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಸ್ತುತ, ಪೂರ್ವನಿರ್ಧರಿತ ವೇಳಾಪಟ್ಟಿಯ ಪ್ರಕಾರ ನಾವು ಜೋಹಾನ್ಸ್‌ಬರ್ಗ್‌ಗೆ ಚಾರ್ಟರ್ಡ್ ವಿಮಾನದಲ್ಲಿ ಹೋಗಲು ಯೋಜಿಸಿದ್ದೇವೆ.

ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಕವಾಗಿ ಹರಡಿದೆ. ಹಲವು ದೇಶಗಳು ದಕ್ಷಿಣ ಆಫ್ರಿಕಾದಿಂದ ಬರುವ ವಿಮಾನಗಳನ್ನು ನಿಷೇಧಿಸಿವೆ. ಆದರೆ ಬಿಸಿಸಿಐನ ಇತ್ತೀಚಿನ ಹೇಳಿಕೆಯ ಪ್ರಕಾರ, ಅವರು ಇನ್ನೂ ಟೀಮ್ ಇಂಡಿಯಾವನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕಳುಹಿಸಲು ಸಿದ್ಧರಾಗಿದ್ದಾರೆ ಎಂಬುದಾಗಿದೆ. ಭಾರತ ಕ್ರಿಕೆಟ್ ಮಂಡಳಿ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಅವರು ದಕ್ಷಿಣ ಆಫ್ರಿಕಾ ಪ್ರವಾಸವು ಪೂರ್ವ ನಿರ್ಧರಿತ ವೇಳಾಪಟ್ಟಿಯಂತೆ ನಡೆಯಲಿದೆ ಎಂದಿದ್ದಾರೆ.
ಭಾರತವು ಮುಂಬೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಮತ್ತು ಕೊನೆಯ ಟೆಸ್ಟ್ ಅನ್ನು ಆಡಬೇಕಾಗಿದೆ, ನಂತರ ತಂಡವು ಡಿಸೆಂಬರ್ 8 ಅಥವಾ 9 ರಂದು ಚಾರ್ಟರ್ಡ್ ವಿಮಾನದಲ್ಲಿ ಜೋಹಾನ್ಸ್‌ಬರ್ಗ್‌ಗೆ ಹೊರಡಲಿದೆ. ಸೌತ್ ಆಫ್ರಿಕಾ ಸಿದ್ಧಪಡಿಸಿದ ಬಯೋ ಬಬಲ್ನಲ್ಲಿ ಆಟಗಾರರು ಸುರಕ್ಷಿತವಾಗಿರುತ್ತಾರೆ ಎಂದು ಧುಮಾಲ್ ವಿಶ್ವಾಸ ವ್ಯಕ್ತಪಡಿಸಿದರು. ಆಫ್ರಿಕಾ ಮೊದಲ ಟೆಸ್ಟ್ ಡಿಸೆಂಬರ್ 17 ರಿಂದ ಜೋಹಾನ್ಸ್ ಬರ್ಗ್ ನಲ್ಲಿ ನಡೆಯಲಿದೆ.
ಆಟಗಾರರ ಸುರಕ್ಷತೆ ವಿಚಾರದಲ್ಲಿ ರಾಜಿ ಇಲ್ಲ: ಬಿಸಿಸಿಐ ಧುಮಾಲ್ ಪಿಟಿಐ ಜೊತೆ ಮಾತನಾಡಿ, ನಾವು ದಕ್ಷಿಣ ಆಫ್ರಿಕಾ ಜೊತೆ ನಿಲ್ಲುತ್ತೇವೆ. ಆದರೆ ಆಟಗಾರರ ಸುರಕ್ಷತೆಯಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಸ್ತುತ, ಪೂರ್ವನಿರ್ಧರಿತ ವೇಳಾಪಟ್ಟಿಯ ಪ್ರಕಾರ ನಾವು ಜೋಹಾನ್ಸ್‌ಬರ್ಗ್‌ಗೆ ಚಾರ್ಟರ್ಡ್ ವಿಮಾನದಲ್ಲಿ ಹೋಗಲು ಯೋಜಿಸಿದ್ದೇವೆ. ಆಟಗಾರರು ಸುರಕ್ಷಿತ ಬಯೋಬಬಲ್ ವಾತಾವರಣದಲ್ಲಿರುತ್ತಾರೆ. “ನಾವು ಕ್ರಿಕೆಟ್ ದಕ್ಷಿಣ ಆಫ್ರಿಕಾ (CSA) ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸರಣಿಗೆ ಯಾವುದೇ ಅಡತಡೆಯಿಲ್ಲದಂತೆ ನಾವು ನೋಡಿಕೊಳ್ಳುತ್ತೇವೆ. ಆದರೆ ಪರಿಸ್ಥಿತಿ ಹದಗೆಟ್ಟರೆ ಮತ್ತು ಅದು ನಮ್ಮ ಆಟಗಾರರ ಸುರಕ್ಷತೆ ಮತ್ತು ಆರೋಗ್ಯವನ್ನು ಹದಗೆಡಿಸುವಂತ್ತಿದ್ದರೆ, ಆಗ ತೀರ್ಮಾನಕ್ಕೆ ಬರುತ್ತೇವೆ. ಹಾಗೆಯೇ ಅಂತಿಮವಾಗಿ ನಾವು ಭಾರತ ಸರ್ಕಾರದ ಸಲಹೆಯನ್ನು ಅನುಸರಿಸುತ್ತೇವೆ ಎಂದು ಹೇಳಿದರು.
ಪ್ರಪಂಚದಾದ್ಯಂತದ ಅನೇಕ ದೇಶಗಳು ಈಗಾಗಲೇ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ದಕ್ಷಿಣ ಆಫ್ರಿಕಾದಿಂದ ಪ್ರಯಾಣವನ್ನು ನಿಷೇಧಿಸಿವೆ ಆದರೆ ಭಾರತವು ಹಾಗೆ ಮಾಡಿಲ್ಲ. ಭಾರತ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಆದಾಗ್ಯೂ, ದಕ್ಷಿಣ ಆಫ್ರಿಕಾವನ್ನು ಅಪಾಯದಲ್ಲಿರುವ ದೇಶಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ಭಾರತ ಎ ತಂಡ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಆಡುವುದನ್ನು ಮುಂದುವರಿಸಲಿದೆ. ದಕ್ಷಿಣ ಆಫ್ರಿಕಾದ ವಿದೇಶಾಂಗ ಸಚಿವಾಲಯವು ಮುಂದಿನ ತಿಂಗಳು ಸರಣಿಗಾಗಿ ಭಾರತೀಯ ಹಿರಿಯ ಕ್ರಿಕೆಟ್ ತಂಡವು ಅಲ್ಲಿಗೆ ಆಗಮಿಸಿದಾಗ ಸಂಪೂರ್ಣವಾಗಿ ಸುರಕ್ಷಿತ ಬಯೋಬಬಲ್ ವಾತಾವರಣವನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದೆ. ಭಾರತ ಪ್ರವಾಸದಲ್ಲಿ ಮೂರು ಟೆಸ್ಟ್, ಮೂರು ODI ಮತ್ತು ನಾಲ್ಕು T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.
