
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಇಂದು ರಾಂಚಿಯಲ್ಲಿ ಆರಂಭವಾಗಿದೆ. ಮೂರುವರೆ ವರ್ಷಗಳ ನಂತರ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಭಾರತದ ಮೊದಲ ಟಿ20 ಪಂದ್ಯ ಇದಾಗಿದೆ. ಕಳೆದ ಬಾರಿ ಈ ಮೈದಾನದಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಿತು. ಆದ್ದರಿಂದ, ಈ ಬಾರಿ, ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡವು ಜಾಗರೂಕರಾಗಿ ಆಡಬೇಕಾಗಿದೆ. ಆದಾಗ್ಯೂ, ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದಿರುವ ಭಾರತ ತಂಡ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಸತತ ಎರಡನೇ ಪಂದ್ಯವನ್ನು ಗೆಲ್ಲುವ ಇರಾದೆಯಲ್ಲಿದೆ. ಇತ್ತ ವೆಸ್ಟ್ ಇಂಡೀಸ್ ಸರಣಿ ಸಮಬಲಗೊಳಿಸಲು ಪ್ರಯತ್ನಿಸಲಿದೆ.
ಈ ಪಂದ್ಯದ ಟಾಸ್ ಕೂಡ ನಡೆದಿದ್ದು, ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡಲಿದೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ವೆಸ್ಟ್ ಇಂಡೀಸ್ ತನ್ನ ಪ್ಲೇಯಿಂಗ್ 11 ರಲ್ಲಿ ಒಂದು ಬದಲಾವಣೆ ಮಾಡಿದೆ. ಇತ್ತ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂದರೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಬೆಂಚ್ ಕಾಯಬೇಕಾಗಿದೆ.
🚨 Toss 🚨
West Indies have won the toss and elected to field first in Ranchi.
Updates ▶️ https://t.co/mZlyaWZsoe
#TeamIndia | #INDvWI | @mflone_ https://t.co/0KxGk6XkDf
— BCCI (@BCCI) October 9, 2026
ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಮಯಾಂಕ್ ಯಾದವ್.
#TeamIndia go unchanged for the 2️⃣nd #INDvWI T20I.
Updates ▶️ https://t.co/mZlyaWZsoe
@mflone_ https://t.co/kdBDrGZ5en
— BCCI (@BCCI) October 9, 2026
ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ನಾಯಕ), ಕಮಿಲ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ರೋಸ್ಟನ್ ಚೇಸ್, ರೊಮಾರಿಯೋ ಶೆಫರ್ಡ್, ಗುಡಾಕೇಶ್ ಮೋಟಿ, ಶಮರ್ ಸ್ಪ್ರಿಂಗರ್, ಅಕೇಲ್ ಹೋಸೇನ್, ಶಮರ್ ಜೋಸೆಫ್.
Published On - 6:46 pm, Fri, 9 October 26