IND vs WI 2nd T20 Cricket Live Score: ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್
India vs West Indies 2nd T20 Cricket Match Live Scorecard: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದು ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ.

LIVE NEWS & UPDATES
-
IND vs WI 2nd T20: ಸ್ಯಾಮ್ಸನ್ ಅರ್ಧಶತಕ
ಸಂಜು ಸ್ಯಾಮ್ಸನ್ ಅರ್ಧಶತಕ ಪೂರೈಸಿದ್ದಾರೆ. ಆರನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
-
IND vs WI 2nd T20: ಸ್ಯಾಮ್ಸನ್‌ಗೆ 2 ಜೀವದಾನ
ಸಂಜು ಸ್ಯಾಮ್ಸನ್‌ಗೆ ಎರಡು ಜೀವದಾನಗಳನ್ನು ನೀಡಲಾಗಿದೆ. ಮೊದಲನೆ ಕ್ಯಾಚನ್ನು ಮೂರನೇ ಓವರ್‌ನಲ್ಲಿ ಕಾಮಿಲ್ ಪೂರನ್ ಕೈಬಿಟ್ಟರೆ, ಮುಂದಿನದನ್ನು ಆರನೇ ಓವರ್‌ನಲ್ಲಿ ಗುಡಕೇಶ್ ಮೋತಿ ಕೈಬಿಟ್ಟರು.
-
-
IND vs WI 2nd T20: ಮೊದಲ ವಿಕೆಟ್ ಪತನ
ನಾಲ್ಕನೇ ಓವರ್‌ನಲ್ಲಿ ಭಾರತ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಸ್ಪಿನ್ನರ್ ರೋಸ್ಟನ್ ಚೇಸ್ ಆರಂಭಿಕ ಅಭಿಷೇಕ್ ಶರ್ಮಾ (20) ಅವರನ್ನು ಔಟ್ ಮಾಡಿದರು.
-
IND vs WI 2nd T20: ಭಾರತ ತಂಡ
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಮಯಾಂಕ್ ಯಾದವ್.
-
IND vs WI 2nd T20: ವೆಸ್ಟ್ ಇಂಡೀಸ್ ತಂಡ
ಶಾಯ್ ಹೋಪ್ (ನಾಯಕ), ಕಮಿಲ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್‌ಮನ್ ಪೊವೆಲ್, ಶೆರ್ಫೇನ್ ರುದರ್‌ಫೋರ್ಡ್, ರೋಸ್ಟನ್ ಚೇಸ್, ರೊಮಾರಿಯೋ ಶೆಫರ್ಡ್, ಗುಡಾಕೇಶ್ ಮೋಟಿ, ಶಮರ್ ಸ್ಪ್ರಿಂಗರ್, ಅಕೇಲ್ ಹೋಸೇನ್, ಶಮರ್ ಜೋಸೆಫ್.
-
-
IND vs WI 2nd T20: ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ಕೆ
ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದು ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣಲ್ಲಿ ನಡೆಯುತ್ತಿದೆ. ಲಕ್ನೋದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಆದ್ದರಿಂದ, ಶ್ರೇಯಸ್ ಪಡ ಇಂದಿನ ಪಂದ್ಯವನ್ನು ಗೆದ್ದು ಸರಣಿಯ ಮುನ್ನಡೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಏತನ್ಮಧ್ಯೆ, ವಿಂಡೀಸ್ ತಂಡ ಈ ಗೆಲುವಿನೊಂದಿಗೆ ಸಮಬಲ ಸಾಧಿಸಲು ಎದುರು ನೋಡುತ್ತಿದೆ.
Published On - Oct 09,2026 6:31 PM




