AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಭಾರತ- ವಿಂಡೀಸ್ ನಡುವೆ ನಿರ್ಣಾಯಕ ಪಂದ್ಯ; ಗೆದ್ದವರಿಗೆ ಟಿ20 ಸರಣಿ

IND W vs WI W 3rd T20: ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಹಣಾಹಣಿ ನಾಳೆ ನಡೆಯಲಿದೆ. ಈಗಾಗಲೇ ಎರಡು ಪಂದ್ಯಗಳು ನಡೆದಿದ್ದು, ಉಭಯ ತಂಡಗಳು ತಲಾ ಒಂದು ಪಂದ್ಯ ಗೆದ್ದಿವೆ. ನಾಳಿನ ಪಂದ್ಯ ನವಿ ಮುಂಬೈನಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಸ್ಪೋರ್ಟ್ಸ್ 18 ಮತ್ತು ಜಿಯೋ ಸಿನಿಮಾದಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

IND vs WI: ಭಾರತ- ವಿಂಡೀಸ್ ನಡುವೆ ನಿರ್ಣಾಯಕ ಪಂದ್ಯ; ಗೆದ್ದವರಿಗೆ ಟಿ20 ಸರಣಿ
ಭಾರತ- ವೆಸ್ಟ್ ಇಂಡೀಸ್ ಮಹಿಳಾ ತಂಡಗಳು
ಪೃಥ್ವಿಶಂಕರ
|

Updated on: Dec 18, 2024 | 11:03 PM

Share

ಪ್ರಸ್ತುತ ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳು ಮುಗಿದಿದ್ದು ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಹೀಗಾಗಿ ನಾಳೆ ನಡೆಯಲ್ಲಿರುವ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಟಿ20 ಸರಣಿ ಸಿಗಲಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಜಯ ಸಾಧಿಸಿ 1-0 ಮುನ್ನಡೆ ಸಾಧಿಸಿತ್ತು. ಆದರೆ ವೆಸ್ಟ್ ಇಂಡೀಸ್ ಸರಣಿಯ ಎರಡನೇ ಪಂದ್ಯವನ್ನು ಗೆದ್ದು ಭಾರತ ತಂಡದ ಮುನ್ನಡೆಯನ್ನು 1-1 ರಲ್ಲಿ ಸಮಗೊಳಿಸಿತು. ಹೀಗಾಗಿ ನಾಳೆ ನಡೆಯುವ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

ಪಂದ್ಯದ ಬಗ್ಗೆ ಪೂರ್ಣ ವಿವರ ಇಲ್ಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 3ನೇ ಟಿ20 ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 3ನೇ ಟಿ20 ಪಂದ್ಯ ನಾಳೆ ಅಂದರೆ 19 ಡಿಸೆಂಬರ್ 2024 ರಂದು ನಡೆಯಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 3ನೇ ಟಿ20 ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮಹಿಳಾ ತಂಡ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡದ ನಡುವಿನ ಮೂರನೇ ಟಿ20 ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 3ನೇ ಟಿ20 ಪಂದ್ಯ ಯಾವಾಗ ಆರಂಭವಾಗಲಿದೆ?

ಭಾರತ ಮಹಿಳಾ ತಂಡ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡದ ನಡುವಿನ ಮೂರನೇ ಟಿ20 ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 3ನೇ ಟಿ20 ಪಂದ್ಯವನ್ನು ಟಿವಿಯಲ್ಲಿ ಎಲ್ಲಿ ವೀಕ್ಷಿಸಬಹುದು?

ಭಾರತ ಮಹಿಳಾ ತಂಡ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡದ ನಡುವಿನ ಮೂರನೇ ಟಿ20 ಪಂದ್ಯ ಭಾರತದಲ್ಲಿ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 3ನೇ ಟಿ20 ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?

ಭಾರತ ಮಹಿಳಾ ತಂಡ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡದ ನಡುವಿನ ಮೂರನೇ ಟಿ20 ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್​ನಲ್ಲಿ ವೀಕ್ಷಿಸಬಹುದು.

ಉಭಯ ತಂಡಗಳು

ಟಿ20 ಸರಣಿಗೆ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ನಂದಿನಿ ಕಶ್ಯಪ್, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಸಜ್ನಾ ಸಜೀವನ್, ರಾಘವಿ ಸಿಂಗ್ ಬಿಸ್ಟ್, ರೇಣುಕಾ ಸಿಂಗ್ ಠಾಕೂರ್ , ಪ್ರಿಯಾ ಮಿಶ್ರಾ, ಟೈಟಸ್ ಸಾಧು, ಸೈಮಾ ಠಾಕೋರ್, ಮಿನ್ನು ಮಣಿ ಮತ್ತು ರಾಧಾ ಯಾದವ್.

ವಿಂಡೀಸ್ ತಂಡ: ಹೇಲಿ ಮ್ಯಾಥ್ಯೂಸ್ (ನಾಯಕಿ), ಶೆಮೈನ್ ಕ್ಯಾಂಪ್‌ಬೆಲ್ಲೆ, ಆಲಿಯಾ ಅಲೀನ್, ಶಾಮಿಲಿಯಾ ಕೊನ್ನೆಲ್, ನೆರಿಸ್ಸಾ ಕ್ರಾಫ್ಟನ್, ಡಿಯಾಂಡ್ರಾ ಡಾಟಿನ್, ಅಫಿ ಫ್ಲೆಚರ್, ಶಬಿಕಾ ಗಜ್ನಾಬಿ, ಚಿನೆಲ್ಲೆ ಹೆನ್ರಿ, ಜೈದಾ ಜೇಮ್ಸ್, ಕಿಯಾನಾ ಜೋಸೆಫ್, ಮ್ಯಾಂಡಿ ಮಂಗ್ರು, ಅಶ್ಮಿನಿ ಮುನಿಸರ್, ಕರ್ಮಿನಾ ಮುನಿಸರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ