
ಮುಂಬರುವ ನ್ಯೂಝಿಲೆಂಡ್ ಎ ವಿರುದ್ಧದ ಸರಣಿಗಾಗಿ ಭಾರತ ‘ಎ’ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರನ್ನೊಳಗೊಂಡಿರುವ ಈ ತಂಡವನ್ನು ಧ್ರುವ್ ಜುರೆಲ್ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಭಾರತ ಟೆಸ್ಟ್ ತಂಡದ ಸ್ಟಾರ್ ಆಟಗಾರರಾದ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಸುದರ್ಶನ್ ಕಾಣಿಸಿಕೊಂಡಿರುವುದು ವಿಶೇಷ.
ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಅಲ್ಲಿನ ಪಿಚ್ ಹಾಗೂ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಮತ್ತು ಉತ್ತಮ ಅಭ್ಯಾಸ ಪಡೆಯಲು ಟೀಮ್ ಇಂಡಿಯಾ ಆಟಗಾರರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ನ್ಯೂಝಿಲೆಂಡ್ ಎ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಯಶಸ್ವಿ ಜೈಸ್ವಾಲ್, ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
15 ಸದಸ್ಯರ ಭಾರತ ‘ಎ’ ತಂಡಕ್ಕೆ ವಿಕೆಟ್‌ಕೀಪರ್ ಆಗಿ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಇತ್ತೀಚಿನ ಫಿಟ್ನೆಸ್ ಸಮಸ್ಯೆಗಳ ಕಾರಣದಿಂದಾಗಿ ಅವರ ಭಾಗವಹಿಸುವಿಕೆಯು ಸಂಪೂರ್ಣವಾಗಿ ಅವರ ಫಿಟ್ನೆಸ್ ಕ್ಲಿಯರೆನ್ಸ್ ಮೇಲೆ ಅವಲಂಬಿತವಾಗಿದೆ. ಅಂದರೆ ಸಂಪೂರ್ಣ ಫಿಟ್ ಆಗಿರುವುದು ದೃಢಪಟ್ಟರೆ ಮಾತ್ರ ನ್ಯೂಝಿಲೆಂಡ್‌ನಲ್ಲಿ ಪಂದ್ಯಗಳನ್ನು ಆಡಲಿದ್ದಾರೆ.
ಈ ಬಾರಿಯ ತಂಡದಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಯುವ ಆಟಗಾರರಾದ ರವಿಚಂದ್ರನ್ ಸ್ಮರಣ್ ಮತ್ತು ವಿದರ್ಭದ ಬ್ಯಾಟರ್ ಯಶ್ ರಾಥೋಡ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಇವರೊಂದಿಗೆ ಎಡಗೈ ವೇಗಿ ಮುಖೇಶ್ ಚೌಧರಿ ಕೂಡ ತಂಡಕ್ಕೆ ಮರಳಿದ್ದಾರೆ.
ಇನ್ನುಳಿದಂತೆ ಜಮ್ಮು-ಕಾಶ್ಮೀರದ ವೇಗಿ ಆಖಿಬ್ ನಬಿ, ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್‌ಗಳಾದ ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್ ಬೌಲಿಂಗ್ ವಿಭಾಗ ಮುನ್ನಡೆಸಲಿದ್ದಾರೆ. ಹಾಗೆಯೇ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಸ್ಪಿನ್ನರ್ ಮಾನವ್ ಸುತಾರ್ ಅವರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ. ಅದರಂತೆ ಭಾರತ ಎ ತಂಡ ಈ ಕೆಳಗಿನಂತಿದೆ…
ಭಾರತ ‘ಎ’ ತಂಡ: ಧ್ರುವ್ ಜುರೆಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವಿಚಂದ್ರನ್ ಸ್ಮರಣ್, ಯಶ್ ರಾಥೋಡ್, ರಿಷಭ್ ಪಂತ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಮಾನವ್ ಸುತಾರ್, ಆಕಾಶ್ ದೀಪ್, ಮುಖೇಶ್ ಕುಮಾರ್, ಅನ್ಶುಲ್ ಕಂಬೋಜ್, ಮುಖೇಶ್ ಚೌಧರಿ, ಆಖಿಬ್ ನಬಿ.
ಇದನ್ನೂ ಓದಿ: ಭಾರತ ಟಿ20 ತಂಡದಿಂದ ಐವರು ಔಟ್!
ಭಾರತ ‘ಎ’ ಮತ್ತು ನ್ಯೂಝಿಲೆಂಡ್ ‘ಎ’ ನಡುವೆ ಒಟ್ಟು ಮೂರು ಅನಧಿಕೃತ ಟೆಸ್ಟ್ (ಮಲ್ಟಿ-ಡೇ) ಪಂದ್ಯಗಳು ನಡೆಯಲಿದೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಿರಿಯರ ತಂಡಗಳು ಆಡುವ ಅಧಿಕೃತ ಟೆಸ್ಟ್ ಪಂದ್ಯಗಳು 5 ದಿನಗಳ ಕಾಲ ನಡೆಯುತ್ತವೆ. ಆದರೆ, ಭಾರತ ‘ಎ’ ಮತ್ತು ನ್ಯೂಝಿಲೆಂಡ್ ‘ಎ’ ನಡುವೆ ನಡೆಯುವ ಈ ಟೆಸ್ಟ್ ಪಂದ್ಯಗಳನ್ನು 4 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…