IND vs NZ: ಕೊನೆಯ 2 ಓವರ್​ಗಳಲ್ಲಿ 3 ವಿಕೆಟ್; ದಿನದಾಟದಂತ್ಯದಲ್ಲಿ ಎಡವಿದ ಭಾರತ

India vs New Zealand Test: ಮುಂಬೈನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನದ ಆಟದಲ್ಲಿ ನ್ಯೂಜಿಲೆಂಡ್ ತಂಡ 235 ರನ್‌ಗಳಿಗೆ ಆಲೌಟ್ ಆಯಿತು. ಉತ್ತರವಾಗಿ ಬ್ಯಾಟ್ ಮಾಡಿದ ಭಾರತ ತಂಡ 4 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತು. ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ನಿರಾಶೆಗೊಳಿಸಿದರು. ಶುಭ್‌ಮನ್ ಗಿಲ್ ಮತ್ತು ರಿಷಬ್ ಪಂತ್ ಎರಡನೇ ದಿನಕ್ಕೆ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಭಾರತ ಇನ್ನೂ 149 ರನ್‌ ಹಿಂದಿದೆ.

IND vs NZ: ಕೊನೆಯ 2 ಓವರ್​ಗಳಲ್ಲಿ 3 ವಿಕೆಟ್; ದಿನದಾಟದಂತ್ಯದಲ್ಲಿ ಎಡವಿದ ಭಾರತ
ಭಾರತ- ನ್ಯೂಜಿಲೆಂಡ್
Follow us
|

Updated on:Nov 01, 2024 | 5:38 PM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮುಂಬೈನಲ್ಲಿ ಇಂದಿನಿಂದ ಆರಂಭವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 235 ರನ್​ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ ತಂಡ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 86 ರನ್‌ಗಳಿಸಿದೆ. ಟೀಂ ಇಂಡಿಯಾಕ್ಕೆ ಮತ್ತೊಮ್ಮೆ ಟಾಪ್ ಆರ್ಡರ್ ಕೈಕೊಟ್ಟಿದ್ದು, ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ತೀರ ಅಗ್ಗವಾಗಿ ತಮ್ಮ ವಿಕೆಟ್ ಒಪ್ಪಿಸಿದರು. ಪ್ರಸ್ತುತ ಕ್ರೀಸ್​ನಲ್ಲಿರುವ ಶುಭ್​ಮನ್ ಗಿಲ್ ಹಾಗೂ ರಿಷಬ್ ಪಂತ್ ಎರಡನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಉಚಿತವಾಗಿ ವಿಕೆಟ್ ನೀಡಿದ ಕೊಹ್ಲಿ

ಕಿವೀಸ್ ತಂಡವನ್ನು ಬೇಗನೇ ಆಲೌಟ್ ಮಾಡಿ ಮೂರನೇ ಸೆಷನ್​ನಲ್ಲೇ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಒಂದು ಹಂತದಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿತ್ತು. ಆದರೆ ಆ ಬಳಿಕ ಕೇವಲ 6 ರನ್ ಕಲೆಹಾಕುವಷ್ಟರಲ್ಲಿ ತಂಡದ ಮೂರು ವಿಕೆಟ್ ಪತನವಾದವು. ಮೊದಲು ಎಜಾಜ್ ಪಟೇಲ್, ಸತತ ಎರಡು ಎಸೆತಗಳಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಔಟ್ ಮಾಡಿದರು. ಆದಾದ ಬಳಿಕ ಬಂದ ವಿರಾಟ್ ಕೊಹ್ಲಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು.

ಕೊನೆಯಲ್ಲಿ ಎಡವಿದ ಭಾರತ

ಕೊಹ್ಲಿ ಕೇವಲ ನಾಲ್ಕು ರನ್ ಗಳಿಸಿ ಸುಸ್ತಾದರೆ, ಯಶಸ್ವಿ ಜೈಸ್ವಾಲ್ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದಿನದಾಟದಂತ್ಯದಲ್ಲಿ ಜೈಸ್ವಾಲ್ ರಿವರ್​ಸ್ವೀಪ್ ಹೊಡೆಯುವ ಯತ್ನ ಮಾಡುವ ಅಗತ್ಯವಿರಲಿಲ್ಲ. ಏಕೆಂದರೆ ಗಿಲ್ ಹಾಗೂ ಜೈಸ್ವಾಲ್ ನಡುವೆ ಅರ್ಧಶತಕದ ಜೊತೆಯಾವಿತ್ತು. ಹೀಗಾಗಿ ಈ ಇಬ್ಬರೇ ದಿನದಾಟವನ್ನು ಮುಗಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರೆ, ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಂತ್ತಾಗುತ್ತಿತ್ತು. ಆದರೆ ಜೈಸ್ವಾಲ್ ವಿಕೆಟ್ ಪತನದ ಬಳಿಕ ಇನ್ನೇರಡು ವಿಕೆಟ್​ಗಳು ನ್ಯೂಜಿಲೆಂಡ್​ಗೆ ಉಚಿತವಾಗಿ ಸಿಕ್ಕಂತ್ತಾಯಿತು. ಜೈಸ್ವಾಲ್ ವಿಕೆಟ್ ಬಳಿಕ ನೈಟ್​ ವಾಚ್​ಮನ್​ ಆಗಿ ಬಂದ ಸಿರಾಜ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದೀಗ ಮೊದಲ ದಿನದಾಟದಲ್ಲಿ ಪ್ರಮುಖ 4 ವಿಕೆಟ್​ ಕಳೆದುಕೊಂಡಿರುವ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಇನ್ನೂ ನ್ಯೂಜಿಲೆಂಡ್‌ಗಿಂತ 149 ​​ರನ್‌ ಹಿಂದಿದ್ದು, ಸಂಕಷ್ಟಕ್ಕೆ ಸಿಲುಕಿದೆ.

ಕಿವೀಸ್ 235 ರನ್​ಗಳಿಗೆ ಆಲೌಟ್

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ನ ಮೊದಲ ಇನಿಂಗ್ಸ್ 235 ರನ್‌ಗಳಿಗೆ ಕೊನೆಗೊಂಡಿತು. ಕಿವೀಸ್ ಪರ ಡೆರಿಲ್ ಮಿಚೆಲ್ ಗರಿಷ್ಠ 82 ರನ್ ಗಳಿಸಿದರೆ, ವಿಲ್ ಯಂಗ್ 71 ರನ್​ಗಳ ಇನಿಂಗ್ಸ್ ಆಡಿದರು. ಭಾರತದ ಪರ ರವೀಂದ್ರ ಜಡೇಜಾ ಐದು ಮತ್ತು ವಾಷಿಂಗ್ಟನ್ ಸುಂದರ್ ನಾಲ್ಕು ವಿಕೆಟ್ ಪಡೆದರು. ಆಕಾಶ್ ದೀಪ್ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Fri, 1 November 24

ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ
ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ
ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!
ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!
ನನ್ನ ಮಗ ಮತ್ತು ನಿಖಿಲ್ ಕುಮಾರಸ್ವಾಮಿ ಇಬ್ಬರೂ ನನಗೆ ಒಂದೇ: ಜಮೀರ್ ಅಹ್ಮದ್
ನನ್ನ ಮಗ ಮತ್ತು ನಿಖಿಲ್ ಕುಮಾರಸ್ವಾಮಿ ಇಬ್ಬರೂ ನನಗೆ ಒಂದೇ: ಜಮೀರ್ ಅಹ್ಮದ್
ಭಟ್ಕಳ: ಮುಸ್ಲಿಂ ಜನಪ್ರತಿನಿಧಿಯಿಂದ ಭುವನೇಶ್ವರಿ ಭಾವಚಿತ್ರಕ್ಕೆ ಅಗೌರವ
ಭಟ್ಕಳ: ಮುಸ್ಲಿಂ ಜನಪ್ರತಿನಿಧಿಯಿಂದ ಭುವನೇಶ್ವರಿ ಭಾವಚಿತ್ರಕ್ಕೆ ಅಗೌರವ
ನಾಯಕನಾದವನು ಕಣ್ಣೀರು ಒರೆಸಬೇಕೇ ಹೊರತು ಹಾಕಬಾರದು: ಯೋಗೇಶ್ವರ್
ನಾಯಕನಾದವನು ಕಣ್ಣೀರು ಒರೆಸಬೇಕೇ ಹೊರತು ಹಾಕಬಾರದು: ಯೋಗೇಶ್ವರ್
ಕುಚಿಕು ಫ್ರೆಂಡ್ಸ್; ವೈರತ್ವ ಮರೆತು ಮುದ್ದಾಡುತ್ತಿರುವ ನಾಯಿ-ಕೋತಿ
ಕುಚಿಕು ಫ್ರೆಂಡ್ಸ್; ವೈರತ್ವ ಮರೆತು ಮುದ್ದಾಡುತ್ತಿರುವ ನಾಯಿ-ಕೋತಿ
ಸೋನಿಯ, ರಾಹುಲ್ ಗಾಂಧಿಯಾಗದ ಕೆಲಸವನ್ನು ಖರ್ಗೆ ಮಾಡಿದ್ದಾರೆ: ಸೋಮಣ್ಣ
ಸೋನಿಯ, ರಾಹುಲ್ ಗಾಂಧಿಯಾಗದ ಕೆಲಸವನ್ನು ಖರ್ಗೆ ಮಾಡಿದ್ದಾರೆ: ಸೋಮಣ್ಣ
ಅಮೆರಿಕದಲ್ಲಿ ದೀಪಾವಳಿ ಆಚರಿಸಿದ ಸಂಭ್ರಮಿಸಿದ ಕಮಲಾ ಹ್ಯಾರಿಸ್
ಅಮೆರಿಕದಲ್ಲಿ ದೀಪಾವಳಿ ಆಚರಿಸಿದ ಸಂಭ್ರಮಿಸಿದ ಕಮಲಾ ಹ್ಯಾರಿಸ್
ಕರ್ನಾಟಕದಂತೆ ಬೇರೆ ರಾಜ್ಯಕ್ಕೆ ತನ್ನ ಧ್ವಜ, ನಾಡಗೀತೆ ಇಲ್ಲ: ಶಿವಕುಮಾರ್
ಕರ್ನಾಟಕದಂತೆ ಬೇರೆ ರಾಜ್ಯಕ್ಕೆ ತನ್ನ ಧ್ವಜ, ನಾಡಗೀತೆ ಇಲ್ಲ: ಶಿವಕುಮಾರ್
ತಡವಾಗಿ ಆಗಮಿಸಿದ ಡಿಕೆ ಶಿವಕುಮಾರ್, ಅವರಿಗಾಗಿ ಕಾಯದ ಸಿದ್ದರಾಮಯ್ಯ
ತಡವಾಗಿ ಆಗಮಿಸಿದ ಡಿಕೆ ಶಿವಕುಮಾರ್, ಅವರಿಗಾಗಿ ಕಾಯದ ಸಿದ್ದರಾಮಯ್ಯ