ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ (India Vs West Indies) ಮೂರು ಮಾದರಿಯ ವಿದೇಶಿ ಸರಣಿಗಾಗಿ ಬಿಸಿಸಿಐ (BCCI) ಟೆಸ್ಟ್ ಹಾಗೂ ಏಕದಿನ ತಂಡವನ್ನು ಪ್ರಕಟಿಸಿದೆ. ಅದರಲ್ಲೂ ಟೆಸ್ಟ್ ಸರಣಿಗೆ ಹಲವು ಹೊಸ ಮುಖಗಳಿಗೆ ಆಧ್ಯತೆ ನೀಡಿರುವ ಆಯ್ಕೆ ಮಂಡಳಿ ಕಳಪೆ ಫಾರ್ಮ್ನಲ್ಲಿರುವ ಆಟಗಾರರಿಗೆ ತಂಡದಿಂದ ಕೋಕ್ ನೀಡಿದೆ. ಅಂತಹ ಆಟಗಾರರಲ್ಲಿ ಚೇತೇಶ್ವರ್ ಪೂಜಾರ ಹಾಗೂ ವೇಗಿ ಉಮೇಶ್ ಯಾದವ್ ( Cheteshwar Pujara and Umesh Yadav) ಸೇರಿದ್ದಾರೆ. ಹಾಗೇಯೇ ಮೊದಲೇ ಊಹಿಸಿದಂತೆ, ಇನ್-ಫಾರ್ಮ್ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಮತ್ತು ರುತುರ್ರಾಜ್ ಗಾಯಕ್ವಾಡ್ ( Yashasvi Jaiswal and Ruturraj Gaikwad) ಟೀಂ ಇಂಡಿಯಾಕ್ಕೆ ಎಂಟ್ರಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ 16 ಸದಸ್ಯರ ಟೆಸ್ಟ್ ತಂಡದಲ್ಲಿ ಸರ್ಫರಾಜ್ ಖಾನ್ (Sarfaraz Khan) ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಕೆರಳಿಸಿದೆ.
ನಿರೀಕ್ಷೆಯಂತೆ ಆಯ್ಕೆ ಮಂಡಳಿ ಮುಂದಿನ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ ಅನ್ನು ಗಮನದಲ್ಲಿಟ್ಟುಕೊಂಡು ಈ ತಂಡವನ್ನು ಆಯ್ಕೆ ಮಾಡಿದೆ. ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಜಿಂಕ್ಯ ರಹಾನೆಯನ್ನು ತಂಡದ ಉಪನಾಯಕನಾಗಿ ಆಯ್ಕೆ ಮಾಡಿದೆ. ಆದರೆ ತಂಡದ ಆಯ್ಕೆಗೂ ಮುನ್ನ ಈ ಬಾರಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಪ್ರಮುಖ ಆಟಗಾರರಲ್ಲಿ ಪ್ರಮುಖರಾಗಿದ್ದ ಸರ್ಫರಾಜ್ ಖಾನ್ಗೆ ಬಿಸಿಸಿಐ ಮತ್ತೊಮ್ಮೆ ಅನ್ಯಾಯ ಮಾಡಿದೆ.
IND vs WI: ತಂಡದಿಂದಲೇ ಹೊರಬಿದ್ದಿದ್ದ ರಹಾನೆ ಇದೀಗ ಟೀಂ ಇಂಡಿಯಾದ ಉಪನಾಯಕ..!
25 ವರ್ಷ ವಯಸ್ಸಿನ ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಜ್, ಕಳೆದ ಮೂರು ವರ್ಷಗಳಿಂದ ದೇಶೀಯ ಕ್ರಿಕೆಟ್ನಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಹೀಗಾಗಿ ಅವರನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುವ ನಿರೀಕ್ಷೆ ಇತ್ತು. ಈ ಮುಂಬೈ ಬ್ಯಾಟರ್ 27 ಪ್ರಥಮ ದರ್ಜೆ ಪಂದ್ಯಗಳಲ್ಲಿ 79.65 ಸರಾಸರಿಯಲ್ಲಿ 13 ಶತಕಗಳೊಂದಿಗೆ 3505 ರನ್ ಕಲೆ ಹಾಕಿದ್ದಾರೆ. ಆದರೆ ಇನ್ನೂ ಭಾರತದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯದೆ ಇರುವುದು ಯುವ ಕ್ರಿಕೆಟಿಗನಿಗೆ ಆಗುತ್ತಿರುವ ಅನ್ಯಾಯವನ್ನು ಎತ್ತಿ ತೋರಿಸಿದೆ. ಹೀಗಾಗಿ ತಂಡ ಪ್ರಕಟವಾದ ಬಳಿಕ ಬಿಸಿಸಿಐ ವಿರುದ್ಧ ಗುಡುಗಿರುವ ನೆಟ್ಟಿಗರು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಸರ್ಫರಾಜ್ ಖಾನ್ ತಂಡದಲ್ಲಿ ಆಯ್ಕೆಯಾಗದಿರುವ ಬಗ್ಗೆ ಆಯ್ಕೆ ಮಂಡಳಿಯನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿರುವ ನೆಟ್ಟಿಗರು, ಈ ಆಯ್ಕೆ ಮಂಡಳಿ ಕೇವಲ ಐಪಿಎಲ್ನಲ್ಲಿ ಮಿಂಚಿದವರಿಗೆ ಮಾತ್ರ ಅವಕಾಶ ನೀಡುತ್ತದೆ ಎಂದು ಟೀಕಿಸಿದ್ದಾರೆ. ಇನ್ನು ಕೆಲವರು ಅದ್ಭುತ ಪ್ರತಿಭೆಯನ್ನು ಬಿಸಿಸಿಐ ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅಂತಹ ಕೆಲವು ಟ್ವೀಟ್ಗಳು ಇಂತಿವೆ.
Selecting Ruturaj out of the blue when players like Abhimanyu Easwaran and Priyank Panchal are simply waiting for their chances but sadly they don’t play IPL, right? So, no PR for them. Also, where the hell is Sarfaraz Khan? How long He needs to wait just to get selected? https://t.co/vP3F4DoExO
— Aditya Saha (@Adityakrsaha) June 23, 2023
Meanwhile Sarfaraz Khan
– Highest Batting Average of 79.65 in First Class ( 2nd only to Don Bradman )
-Scored 900+ Runs in 2 Consecutive Ranji seasons.
That’s just complete Disregard to Domestic Cricket. When selection for Test is based on IPL.
How can selectors even sleep… https://t.co/LYG96tXniT pic.twitter.com/GkPdLWv9fh
— Cricpedia. (@_Cricpedia) June 23, 2023
First class average of some players
Sarfaraz Khan -78
Akshay wadkar -55
Abhimanyu easwaran -47
Rajat patidar -47
Sakib ul gani -79
Het patel -45
Rinku Singh -59Ruturaj gaikwad -40
Justice for deserving players like Sarfraz Khan
Play For Mumbai Indians & Csk You Get Selected pic.twitter.com/489y0nDdqR
— Fabrizio Romano (@teams_dream) June 23, 2023
This is not Done Yashasvi Jaiswal Selected Before Sarfaraz Khan in test Squad. Player getting Selected From IPL not Form Domestic Cricket. I Know Yashasvi Perform really well in Domestic Cricket in last One year but Sarfaraz Perform Consistently From last 3 years. pic.twitter.com/SSDbNpu91A
— Ayush Ranjan (@AyushRaGenius) June 23, 2023
BCCI should discontinue Ranji, Duleep Trophy, and Syed Mushtaq Ali Trophy.
As the selection is solely based on IPL performances for Tests, ODIs, and T20s. #SarfarazKhan
— Tarique Anwer (@tanwer_m) June 23, 2023
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕಟ್, ನವದೀಪ್ ಸೈನಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ