Team India: ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ?, ಎಲ್ಲಿ?: ಇಲ್ಲಿದೆ ಸಂಪೂರ್ಣ ಮಾಹಿತಿ
Indian Cricket Team Schedule: ಸದ್ಯದಲ್ಲೇ ಮುಂದಿನ ಸವಾಲಿಗೆ ಟೀಮ್ ಇಂಡಿಯಾ ಸಜ್ಜಾಗಬೇಕಿದ್ದು ಎರಡು ಬಲಿಷ್ಠ ತಂಡಗಳ ವಿರುದ್ಧ ಸೆಣೆಸಾಡಲಿದೆ. ಮೊದಲಿಗೆ ಆಸ್ಟ್ರೇಲಿಯಾ ತಂಡ ಭಾರತ (India vs Australia) ಪ್ರವಾಸ ಬೆಳೆಸಿದರೆ ಇದಾದ ಬಳಿಕ ದಕ್ಷಿಣ ಆಫ್ರಿಕಾ ತಂಡ ಕೂಡ ಭಾರತ (India vs South Africa) ಪ್ರವಾಸ ಕೈಗೊಳ್ಳಲಿದೆ.
ಭಾರತ ಕ್ರಿಕೆಟ್ ತಂಡ ಏಷ್ಯಾಕಪ್ 2022 (Asia Cup 2022) ರಿಂದ ಹೊರಬಿದ್ದ ಬಳಿಕ ತವರಿಗೆ ಮರಳಿದ್ದು ಆಟಗಾರರು ವಿಶ್ರಾಂತಿಯಲ್ಲಿದ್ದಾರೆ. ಸದ್ಯದಲ್ಲೇ ಮುಂದಿನ ಸವಾಲಿಗೆ ಟೀಮ್ ಇಂಡಿಯಾ ಸಜ್ಜಾಗಬೇಕಿದ್ದು ಎರಡು ಬಲಿಷ್ಠ ತಂಡಗಳ ವಿರುದ್ಧ ಸೆಣೆಸಾಡಲಿದೆ. ಭಾರತ ತನ್ನ ಮುಂದಿನ ಸರಣಿಯನ್ನು ತವರಿನಲ್ಲೇ ಆಡಲಿದೆ. ಮೊದಲಿಗೆ ಆಸ್ಟ್ರೇಲಿಯಾ ತಂಡ ಭಾರತ (India vs Australia) ಪ್ರವಾಸ ಬೆಳೆಸಿದರೆ ಇದಾದ ಬಳಿಕ ದಕ್ಷಿಣ ಆಫ್ರಿಕಾ ತಂಡ ಕೂಡ ಭಾರತ (India vs South Africa) ಪ್ರವಾಸ ಕೈಗೊಳ್ಳಲಿದೆ. ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ಗೂ ಮುನ್ನ ಭಾರತಕ್ಕೆ ಸಜ್ಜಾಗಲು ಈ ಎರಡು ಸರಣಿಗಳು ಮಾತ್ರ ಉಳಿದಿವೆ. ಹಾಗಾದರೆ ಈ ಸರಣಿಗಳು ಯಾವಾಗ ಆರಂಭ?, ಪಂದ್ಯ ಎಲ್ಲಿ ನಡೆಯಲಿದೆ ಎಂಬುದನ್ನು ನೋಡೋಣ.
ಭಾರತ vs ಆಸ್ಟ್ರೇಲಿಯಾ:
ಟೀಮ್ ಇಂಡಿಯಾ ಮೊದಲಿಗೆ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಮೊದಲ ಪಂದ್ಯ ಸೆಪ್ಟಂಬರ್ 20 ರಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಆಯೋಜಿಸಲಾಗದೆ. ದ್ವಿತೀಯ ಟಿ20 ಸೆ. 23 ಹಾಗೂ ಅಂತಿಮ ಪಂದ್ಯ ಸೆ. 25 ರಂದು ಕ್ರಮವಾಗಿ ನಾಗ್ಪುರ ಮತ್ತು ಹೈದರಾಬಾದ್ನಲ್ಲಿ ನಡೆಯಲಿದೆ. ಈ ಎಲ್ಲ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಸಂಜೆ 7:30ಕ್ಕೆ ಶುರುವಾಗಲಿದೆ.
ಭಾರತ vs ದಕ್ಷಿಣ ಆಫ್ರಿಕಾ:
ಹರಿಣಗಳ ವಿರುದ್ಧ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿ ಆಡಲಿದೆ. ಸೆ. 28ಕ್ಕೆ ತಿರುವನಂತಪುರಂನಲ್ಲಿ ಮೊದಲ ಟಿ20, ಅಕ್ಟೋಬರ್ 2 ಮತ್ತು ಅ. 4 ರಂದು ಕ್ರಮವಾಗಿ ಗುವಾಹಟಿ ಮತ್ತು ಇಂಧೋರ್ನಲ್ಲಿ ದ್ವಿತೀಯ ಮತ್ತು ತೃತೀಯ ಟಿ20 ಆಯೋಜಿಸಲಾಗಿದೆ. ಇನ್ನು ಮೊದಲ ಏಕದಿನ ಅ. 6, ಅ. 9 ಮತ್ತು ಅ. 11 ರಂದು ಲಖನೌ, ರಾಂಚಿ ಮತ್ತು ಡೆಲ್ಲಿಯಲ್ಲಿ ನಡೆಯಲಿದೆ. ಟಿ20 ಪಂದ್ಯ ಸಂಜೆ 7:30ಕ್ಕೆ ಶುರುವಾದರೆ, ಏಕದಿನ ಪಂದ್ಯ ಮಧ್ಯಾಹ್ನ 1:30ಕ್ಕೆ ಪ್ರಾರಂಭಗೊಳ್ಳಲಿದೆ.
ಬುಮ್ರಾ–ಹರ್ಷಲ್ ಫಿಟ್:
ಕಳೆದ ಕೆಲ ಸಮಯದಿಂದ ಇಂಜುರಿಯಿಂದಾಗ ಭಾರತ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಇದೀಗ ತಂಡಕ್ಕೆ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಬುಮ್ರಾ ಬೆನ್ನು ನೋವಿನಿಂದಾಗಿ ಏಷ್ಯಾಕಪ್ ಸೇರಿದಂತೆ ಹಿಂದಿನ ಸರಣಿಗಳಿಗೆ ಆಯ್ಕೆಯಾಗಿರಲಿಲ್ಲ. ಇತ್ತ ಹರ್ಷಲ್ ಕೂಡ ಪಕ್ಕೆಲುಬು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರಿಬ್ಬರು ಟಿ20 ವಿಶ್ವಕಪ್ ವೇಳೆಗೆ ಗುಣಮುಖರಾಗುವುದು ಅನುಮಾನ ಎನ್ನಲಾಗಿತ್ತು.
ಬುಮ್ರಾ ಹಾಗೂ ಹರ್ಷಲ್ಗೆ ಬೆಂಗಳೂರಿನ ಎನ್ಸಿಎ ಯಲ್ಲಿ ಫಿಟ್ನೆಸ್ ಟೆಸ್ಟ್ ನಡೆಸಬೇಕೆಂದು ಬಿಸಿಸಿಐ ಇವರಿಗೆ ತಿಳಿಸಿತ್ತು. ಇದೀಗ ಗಾಯದಿಂದ ಗುಣಮುಖರಾಗಿ ಫಿಟ್ನೆಸ್ ಟೆಸ್ಟ್ನಲ್ಲಿ ಇವರಿಬ್ಬರೂ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ಹರ್ಷಲ್ ಹಾಗೂ ಬುಮ್ರಾ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Published On - 11:46 am, Mon, 12 September 22