AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಒಂದು ಎಸೆತದಲ್ಲಿ 10 ರನ್​ ನೀಡಿದ ಶ್ರೀಲಂಕಾ ಬೌಲರ್

Sri Lanka vs Pakistan: ವಿಶೇಷ ಎಂದರೆ ಇದು ಏಷ್ಯಾಕಪ್​ನಲ್ಲಿ​ ಮಾತ್ರವಲ್ಲದೆ, ಏಕದಿನ ಕ್ರಿಕೆಟ್​ ಇತಿಹಾಸದ ಅತ್ಯಂತ ದೀರ್ಘಾವಧಿಯ ಓವರ್ ಕೂಡ​ ಆಗಿದೆ.

Asia Cup 2022: ಒಂದು ಎಸೆತದಲ್ಲಿ 10 ರನ್​ ನೀಡಿದ ಶ್ರೀಲಂಕಾ ಬೌಲರ್
Dilshan Madushanka
TV9 Web
| Edited By: |

Updated on: Sep 12, 2022 | 10:53 AM

Share

ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ (Asia Cup 2022) ಫೈನಲ್​ನಲ್ಲಿ ಪಾಕಿಸ್ತಾನ್ (Pakistan vs Sri Lanka) ತಂಡವನ್ನು ಬಗ್ಗು ಬಡಿದು ಶ್ರೀಲಂಕಾ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ಚೇಸಿಂಗ್ ಪಿಚ್​ನಲ್ಲಿ ಬೌಲಿಂಗ್​ನಲ್ಲಿ ಪರಾಕ್ರಮ ಮೆರೆಯುವ ಮೂಲಕ ಲಂಕಾ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿರುವುದು ವಿಶೇಷ. ಆದರೆ ಬೌಲಿಂಗ್​​ನಲ್ಲಿ ಶ್ರೀಲಂಕಾ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ ಎಂಬುದು ಇಲ್ಲಿ ಮತ್ತೊಂದು ವಿಶೇಷ. ಅಂದರೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಭಾನುಕಾ ರಾಜಪಕ್ಸೆ (71) ಅವರ ಅಜೇಯ ಅರ್ಧಶತಕದ ನೆರವಿನಿಂದ 170 ರನ್​ ಕಲೆಹಾಕಿತು. 171 ರನ್​ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವು ಉತ್ತಮ ಆರಂಭ ಪಡೆದಿತ್ತು. ಅಂತಹದೊಂದು ಆರಂಭ ನೀಡಿದ್ದು ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕ. ಏಕೆಂದರೆ ಮೊದಲ ಓವರ್​ನ ಮೊದಲ ಎಸೆತವನ್ನೇ ಮಧುಶಂಕ ನೋಬಾಲ್ ಎಸೆದಿದ್ದರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ 2 ವೈಡ್ ಎಸೆದರು.

ಆನಂತರ ಮತ್ತೊಂದು ವೈಡ್+ಬೈಸ್ ರೀತಿಯಲ್ಲಿ ಫೋರ್​ ನೀಡಿದರು. ಆ ಬಳಿಕ ಇನ್ನೊಂದು ವೈಡ್ ಎಸೆದರು. ಅಂದರೆ ಮೊದಲ ಎಸೆತದ ಕೌಂಟ್ ಶುರುವಾಗುವ ಮುನ್ನ ಎಕ್ಸ್​ಟ್ರಾ ರನ್​ಗಳ ಮೂಲಕ ಮಧುಶಂಕ 9 ರನ್​ಗಳನ್ನು ನೀಡಿದ್ದರು. ಅತ್ತ ಒಂದು ಬಾಲ್ ಎದುರಿಸದೇ ಪಾಕಿಸ್ತಾನ್ ತಂಡವು ತನ್ನ ಖಾತೆಗೆ 9 ರನ್​ಗಳನ್ನು ಸೇರ್ಪಡೆಗೊಳಿಸಿತ್ತು. ಕೊನೆಗೂ ಸರಿಯಾದ ಎಸೆದ ಮೊದಲ ಎಸೆತದಲ್ಲಿ ಬಾಬರ್ ಆಜಂ 1 ರನ್ ಕಲೆಹಾಕಿದರು. ಅಂದರೆ ದಿಲ್ಶಾನ್ ಮಧುಶಂಕ ಮೊದಲ ಎಸೆತದ ಕೌಂಟ್ ಶರುವಾಗುಷ್ಟರಲ್ಲಿ 10 ರನ್​ಗಳನ್ನು ನೀಡಿದ್ದರು.  ಇದಾಗ್ಯೂ ಆ ಬಳಿಕ ಮಧುಶಂಕ 6 ಎಸೆತಗಳಲ್ಲಿ ನೀಡಿದ್ದು ಕೇವಲ 3 ರನ್​ ಮಾತ್ರ. ಅಂದರೆ ಮೊದಲ ಓವರ್​ನಲ್ಲೇ ಲಂಕಾ ಬೌಲರ್​ 11 ಎಸೆತಗಳನ್ನು ಎಸೆದಿದ್ದರು.

ಆನಂತರ ಕಂಬ್ಯಾಕ್ ಮಾಡಿದ್ದ  ಮಧುಶಂಕ 3 ಓವರ್​ಗಳಲ್ಲಿ 24 ರನ್ ಮಾತ್ರ ನೀಡಿದ್ದರು. ಇನ್ನು ಹಸರಂಗ, ಮಧುಶಾನ ಸೇರಿದಂತೆ ಲಂಕಾ ತಂಡದ ಉಳಿದ ಬೌಲರ್​ಗಳ ಸಾಂಘಿಕ ಪ್ರದರ್ಶನದಿಂದ ಶ್ರೀಲಂಕಾ ತಂಡವು ಪಾಕ್​ ತಂಡವನ್ನು 147 ರನ್​ಗಳಿಗೆ ಆಲೌಟ್ ಮಾಡಿ 23 ರನ್​ಗಳ ಜಯ ಸಾಧಿಸಿತು.

ಇದನ್ನೂ ಓದಿ
Image
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಏಷ್ಯಾಕಪ್​ನ ದುಬಾರಿ ಓವರ್:

ಅಂದಹಾಗೆ ದಿಲ್ಶಾನ್ ಮಧುಶಂಕ ಎಸೆದಿರುವುದು ಏಷ್ಯಾಕಪ್​ನ ಸುದೀರ್ಘ ಓವರ್​ ಅಲ್ಲ ಎಂಬುದು ವಿಶೇಷ. ಅಂದರೆ ಮಧುಶಂಕ ಒಂದೇ ಓವರ್​ನಲ್ಲಿ 11 ಎಸೆತಗಳನ್ನು ಎಸೆದಿದ್ದರೆ, ಏಷ್ಯಾಕಪ್​ನಲ್ಲಿ ಮತ್ತೋರ್ವ ವೇಗಿ ಒಂದೇ ಓವರ್​ನಲ್ಲಿ 17 ಎಸೆದ ಕೆಟ್ಟ ದಾಖಲೆ ಹೊಂದಿದ್ದಾರೆ.

2004 ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ​ ಬಾಂಗ್ಲಾದೇಶ್ ವಿರುದ್ದದ ಪಂದ್ಯದಲ್ಲಿ ಪಾಕಿಸ್ತಾನ್ ವೇಗಿ ಮೊಹಮ್ಮದ್ ಸಮಿ ಇಂತಹದೊಂದು ಹೀನಾಯ ದಾಖಲೆ ನಿರ್ಮಿಸಿದ್ದರು. ಅಂದು ಮೊಹಮ್ಮದ್ ಸಮಿ​ ಮೊದಲ ಬಾಲ್ ನೋಬಾಲ್ ಎಸೆದಿದ್ದರು. ಆ ಬಳಿಕ ವೈಡ್ ಎಸೆದರು. ಇದಾದ ಬಳಿಕ ಒಂದು ರನ್ ನೀಡಿದರು.

ಆ ಬಳಿಕ ಮತ್ತೆ ನೋ ಬಾಲ್ ಎಸೆದರು. ಇದರ ನಂತರ ಬ್ಯಾಕ್ ಟು ಬ್ಯಾಕ್ 2 ವೈಡ್ ಎಸೆದರು. ಆ ನಂತರ ಒಂದು ಡಾಟ್ ಬಾಲ್ ಮಾಡಿದರು. ಎಲ್ಲರೂ ಸಮಿ ಲಯಕ್ಕೆ ಮರಳಿದರೂ ಅಂದುಕೊಳ್ಳುವಷ್ಟರಲ್ಲಿ ಮತ್ತೆ ನೋ ಬಾಲ್ ಎಸೆದರು. ಇದಾದ ಬಳಿಕ ವೈಡ್ ಬಾಲ್ ಮಾಡಿದರು. ಹೀಗೆ ಅಂದು 7 ವೈಡ್​ಗಳು ಹಾಗೂ ನಾಲ್ಕು ನೋಬಾಲ್​ಗಳನ್ನು ಹೆಚ್ಚುವರಿಯಾಗಿ ನೀಡಿದ ಸಮಿ ಒಟ್ಟು 17 ಎಸೆತಗಳನ್ನು ಎಸೆದಿದ್ದರು. ಅಲ್ಲದೆ 22 ರನ್​ ನೀಡುವ ಮೂಲಕ ದುಬಾರಿ ಬೌಲರ್​ ಎನಿಸಿಕೊಂಡರು. ವಿಶೇಷ ಎಂದರೆ ಇದು ಏಷ್ಯಾಕಪ್​ನಲ್ಲಿ​ ಮಾತ್ರವಲ್ಲದೆ, ಏಕದಿನ ಕ್ರಿಕೆಟ್​ ಇತಿಹಾಸದ ಅತ್ಯಂತ ದೀರ್ಘಾವಧಿಯ ಓವರ್ ಕೂಡ​ ಆಗಿದೆ.

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​