AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಗೆದ್ದಿರೋದು ವ್ಯಾಸಲೀನ್​ನಿಂದ..! ಪಾಕ್ ಕ್ರಿಕೆಟಿಗನ ಗಂಭೀರ ಆರೋಪ

Shabbir Ahmed: ಪಾಕಿಸ್ತಾನದ ಮಾಜಿ ಬಲಗೈ ವೇಗಿ ಶಬ್ಬಿರ್ ಅಹ್ಮದ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಕಾರಣ ಅವರು ಟೀಮ್ ಇಂಡಿಯಾ ವಿರುದ್ಧ ಮಾಡಿದ ಆರೋಪ. ಪಾಕಿಸ್ತಾನ್ ಪರ 10 ಟೆಸ್ಟ್, 32 ಏಕದಿನ ಮತ್ತು ಒಂದು ಟಿ20 ಪಂದ್ಯಗಳನ್ನಾಡಿರುವ ಶಬ್ಬಿರ್ ಅಹ್ಮದ್ ಬಾಲಿಶ ಹೇಳಿಕೆಯೊಂದಿಗೆ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

ಟೀಮ್ ಇಂಡಿಯಾ ಗೆದ್ದಿರೋದು ವ್ಯಾಸಲೀನ್​ನಿಂದ..! ಪಾಕ್ ಕ್ರಿಕೆಟಿಗನ ಗಂಭೀರ ಆರೋಪ
Team India - Vaseline
ಝಾಹಿರ್ ಯೂಸುಫ್
|

Updated on: Aug 07, 2025 | 8:03 AM

Share

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿರುವುದು ವ್ಯಾಸಲೀನ್ ಬಳಸಿ… ಇಂತಹದೊಂದು ಗಂಭೀರ ಆರೋಪ ಮಾಡಿರುವುದು ಪಾಕಿಸ್ತಾನ್ ತಂಡದ ಮಾಜಿ ಆಟಗಾರ ಶಬ್ಬಿರ್ ಅಹ್ಮದ್. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಭಾರತದ ವೇಗಿಗಳು ಯಶಸ್ಸು ಸಾಧಿಸಲು ಚೆಂಡಿನ ಮೇಲೆ ವ್ಯಾಸಲೀನ್ ಬಳಸಿದ್ದಾರೆ. ಹೀಗಾಗಿ ಅದರ ಬಗ್ಗೆ ತನಿಖೆ ನಡೆಯಬೇಕೆಂದು ಪಾಕ್ ಮಾಜಿ ವೇಗಿ ಆಗ್ರಹಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಈ ನಿರ್ಣಾಯಕ ಪಂದ್ಯದಲ್ಲಿ ಭಾರತವು ವ್ಯಾಸಲೀನ್ ಬಳಸಿದೆ. ಹೀಗಾಗಿಯೇ  80+ ಓವರ್‌ಗಳ ನಂತರವೂ ಚೆಂಡು ಹೊಸದರಂತೆ ಹೊಳೆಯುತ್ತಿತ್ತು. ಅಂಪೈರ್ಚೆಂಡನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ವ್ಯಾಸಲೀನ್ ಬಳಸಿ ಟೀಮ್ ಇಂಡಿಯಾ ತನ್ನ ಅನುಕೂಲಕ್ಕೆ ತಕ್ಕಂತೆ ಚೆಂಡನ್ನು ಬಳಸಿಕೊಂಡಿತ್ತು. ಇದರಿಂದಾಗಿ ಇಂಗ್ಲೆಂಡ್ ತಂಡವು 6 ರನ್​ಗಳಿಂದ ಸೋಲಬೇಕಾಯಿತು ಎಂದು ಶಬ್ಬಿರ್ ಅಹ್ಮದ್ ಹೇಳಿದ್ದಾರೆ.

ಟೀಮ್ ಇಂಡಿಯಾ ವೇಗಿಗಳು ವ್ಯಾಸಲೀನ್ ಬಳಸುವ ಮೂಲಕ ಚೆಂಡಿನ ಒಂದು ಬದಿಯನ್ನು ಶೈನಿಂಗ್​ನಲ್ಲಿರಿಸಿದ್ದಾರೆ. ಇದರಿಂದ ಚೆಂಡು ಸ್ವಿಂಗ್ ಆಗಲು ನೆರವಾಗುತ್ತದೆ. ಅದರಂತೆ ಭಾರತೀಯ ವೇಗಿಗಳು ಅಂತಿಮ ದಿನದಾಟದಲ್ಲಿ ಯಶಸ್ಸು ಸಾಧಿಸಿದ್ದಾರೆ. ನನ್ನ ಪ್ರಕಾರ, ಓವಲ್ ಟೆಸ್ಟ್ ಪಂದ್ಯದಲ್ಲಿ ಬಳಸಲಾದ ಚೆಂಡನ್ನು ಲ್ಯಾಬ್​​ನಲ್ಲಿ ಟೆಸ್ಟ್ ಮಾಡಬೇಕು. ಈ ಮೂಲಕ ಭಾರತೀಯ ಬೌಲರ್​ಗಳು ವ್ಯಾಸಲೀನ್ ಬಳಸಿರುವುದನ್ನು ಪತ್ತೆ ಹಚ್ಚಬೇಕೆಂದು ಶಬ್ಬಿರ್ ಅಹ್ಮದ್ ಆಗ್ರಹಿಸಿದ್ದಾರೆ.

ಶಬ್ಬಿರ್ ಅಹ್ಮದ್ ಅವರ ಇಂತಹದೊಂದು ಆರೋಪಕ್ಕೆ ಮುಖ್ಯ ಕಾರಣ, ಟೀಮ್ ಇಂಡಿಯಾ ಕೊನೆಯ ದಿನದಾಟದಲ್ಲಿ ಮಾರಕ ದಾಳಿ ಸಂಘಟಿಸಿರುವುದು. 5ನೇ ದಿನದಂದು ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 35 ರನ್​ಗಳ ಅವಶ್ಯಕತೆಯಿದ್ದರೆ, ಭಾರತ ತಂಡಕ್ಕೆ 4 ವಿಕೆಟ್​ಗಳ ಅಗತ್ಯವಿತ್ತು. ಈ ವೇಳೆ ಕರಾರುವಾಕ್ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 3 ವಿಕೆಟ್ ಕಬಳಿಸಿ ಭಾರತ ತಂಡಕ್ಕೆ 6 ರನ್​ಗಳ ರೋಚಕ ಜಯ ತಂದುಕೊಟ್ಟಿದ್ದರು.

ಹೀಗೆ ರಣರೋಚಕ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದಿರುವುದನ್ನು ಪಾಕಿಸ್ತಾನ್ ತಂಡದ ಮಾಜಿ ವೇಗಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿಯೇ ಇದೀಗ ಟೀಮ್ ಇಂಡಿಯಾ ವೇಗಿಗಳ ವಿರುದ್ಧ ವ್ಯಾಸಲೀನ್ ಬಳಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪಕ್ಕೆ ಯಾವುದೇ ಹುರುಳಿಲ್ಲ ಎಂಬುದೇ ಸತ್ಯ.

ಏಕೆಂದರೆ ಈ ಹಿಂದೆ ಏಕದಿನ ವಿಶ್ವಕಪ್​ನಲ್ಲಿ ಭಾರತೀಯ ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿದಾಗ ಪಾಕಿಸ್ತಾನದ ಕೆಲ ಮಾಜಿ ಆಟಗಾರರು ಬಿಸಿಸಿಐ ಚೆಂಡಿನಲ್ಲಿ ಚಿಪ್ ಅಳವಡಿಸಿದೆ ಎಂದು ಆರೋಪಿಸಿದ್ದರು. ಇಂತಹ ಆರೋಪಗಳಿಗೆ ಖುದ್ದು ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಂ ಆಕ್ರೋಶ ವ್ಯಕ್ತಪಡಿಸಿ ಕ್ಲಾಸ್ ತೆಗೆದುಕೊಂಡಿದ್ದರು.

ಇದನ್ನೂ ಓದಿ: KL Rahul: ಭಾರತ ತಂಡದಿಂದ ಕೆಎಲ್ ರಾಹುಲ್ ಔಟ್

ಇದೀಗ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿನ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವ್ಯಾಸಲೀನ್ ಕತೆಯೊಂದಿಗೆ ಪಾಕಿಸ್ತಾನದ ಮಾಜಿ ವೇಗಿ ಶಬ್ಬಿರ್ ಅಹ್ಮದ್ ಮುಂದೆ ಬಂದಿದ್ದಾರೆ. ಇತ್ತ ಶಬ್ಬಿರ್ ಅಹ್ಮದ್ ಅವರ ಹೇಳಿಕೆಯು ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಗೆಪಾಟಲೀಗೀಡಾಗಿದ್ದು, ಪಾಕಿಸ್ತಾನದ ಮಾಜಿ ಆಟಗಾರನನ್ನು ಟ್ರೋಲ್ ಮಾಡಲಾಗುತ್ತಿದೆ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ