IND vs BAN: 2ನೇ ದಿನದಾಟದಲ್ಲೂ ಬಾಂಗ್ಲಾದೇಶ ವಿರುದ್ಧ ಭಾರತದ್ದೇ ಪಾರುಪತ್ಯ
IND vs BAN: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 227 ರನ್‌ಗಳ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಇದೀಗ ಬಾಂಗ್ಲಾದೇಶಕ್ಕೆ ದೊಡ್ಡ ಟಾರ್ಗೆಟ್ ನೀಡಲು ಕಣ್ಣಿಟ್ಟಿದೆ. 2ನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 81 ರನ್ ಕಲೆಹಾಕಿದೆ. ಇದರೊಂದಿಗೆ ತಂಡದ ಮುನ್ನಡೆ 308 ರನ್ಗಳಿಗೇರಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 227 ರನ್‌ಗಳ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಇದೀಗ ಬಾಂಗ್ಲಾದೇಶಕ್ಕೆ ದೊಡ್ಡ ಟಾರ್ಗೆಟ್ ನೀಡಲು ಕಣ್ಣಿಟ್ಟಿದೆ. 2ನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 81 ರನ್ ಕಲೆಹಾಕಿದೆ. ಇದರೊಂದಿಗೆ ತಂಡದ ಮುನ್ನಡೆ 308 ರನ್ಗಳಿಗೇರಿದೆ.
ಬಾಂಗ್ಲಾದೇಶವನ್ನು 149 ರನ್‌ಗಳಿಗೆ ಆಲೌಟ್ ಮಾಡಿ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಮತ್ತೊಮ್ಮೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ಒಂದಂಕಿಗೆ ಸುಸ್ತಾದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಯಶಸ್ವಿ ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ 10 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಮತ್ತೊಮ್ಮೆ ನಿರಾಸೆ ಮೂಡಿಸಿದ ವಿರಾಟ್ ಕೊಹ್ಲಿ 17 ರನ್‌ಗಳಿಗೆ ಬ್ಯಾಟ್ ಎತ್ತಿಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ ಬೇಡದ ಶಾಟ್ ಆಡಲು ಹೋಗಿ ವಿಕೆಟ್ ಒಪ್ಪಿಸಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್‌ನಲ್ಲಿ ಔಟಿಲ್ಲದಿದ್ದರೂ, ತಾನು ಮಾಡಿಕೊಂಡ ಎಡವಟ್ಟಿನಿಂದಾಗಿ ವಿಕೆಟ್ ಕಳೆದುಕೊಂಡರು.
Stumps on Day 2 in Chennai!#TeamIndia move to 81/3 in the 2nd innings, lead by 308 runs 👌👌
See you tomorrow for Day 3 action 👋
Scorecard – https://t.co/jV4wK7BOKA#INDvBAN | @IDFCFIRSTBank pic.twitter.com/EmHtqyg9W3
— BCCI (@BCCI) September 20, 2024
2ನೇ ದಿನದಾಟದಲ್ಲೂ ಬಾರತದ್ದೇ ಪಾರುಪತ್ಯ
ಇನ್ನು ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ.. ಪ್ರವಾಸಿ ತಂಡ ಪೂರ್ಣ ದಿನವನ್ನು ಆಡಲಾಗದೆ, ಕೇವಲ ಮೂರನೇ ಸೆಷನ್ನಲ್ಲಿಯೇ ಆಲೌಟ್ ಆಯಿತು. ಮೊದಲ ದಿನದಂತೆಯೇ ಎರಡನೇ ದಿನದ ಆಟದಲ್ಲೂ ಭಾರತದ ಆಟಗಾರರು ಬಾಂಗ್ಲಾದೇಶದ ಮೇಲೆ ಪಾರುಪತ್ಯ ಸಾಧಿಸಿದರು. ಮೊದಲ ದಿನದ ಆಟದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಜಾದೂ ಕಂಡುಬಂದರೆ ಎರಡನೇ ದಿನ ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ಬೌಲರ್ಗಳ ಮ್ಯಾಜಿಕ್ ಕಂಡುಬಂದಿತು. ಇದರಿಂದಾಗಿ ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ 149 ರನ್‌ಗಳಿಗೆ ಕೊನೆಗೊಂಡಿತು.
ಬುಮ್ರಾ ಎದುರು ಕುಸಿದ ಬಾಂಗ್ಲಾ
ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ 11 ಓವರ್ಗಳಲ್ಲಿ 50 ರನ್ ನೀಡಿ 4 ವಿಕೆಟ್ ಪಡೆದರು. ಇದರೊಂದಿಗೆ ಬುಮ್ರಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 400 ವಿಕೆಟ್ ಪೂರೈಸಿದ ಸಾಧನೆಯನ್ನು ಮಾಡಿದರು. ಉಳಿದಂತೆ ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಬ್ಯಾಟಿಂಗ್ನಲ್ಲಿ ಶತಕ ಬಾರಿಸಿದ್ದ ಅಶ್ವಿನ್ಗೆ ಬೌಲಿಂಗ್ನಲ್ಲಿ ಮಾತ್ರ ಯಾವುದೇ ವಿಕೆಟ್ ಸಿಗಲಿಲ್ಲ.
ಭಾರತದ ಇನ್ನಿಂಗ್ ಹೀಗಿತ್ತು
ಇದಕ್ಕೂ ಮುನ್ನ ಟೀಂ ಇಂಡಿಯಾ 376 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ದಿನದ ಮೊದಲ ಸೆಷನ್‌ನಲ್ಲಿ ಟೀಂ ಇಂಡಿಯಾ ಕೇವಲ 37 ರನ್‌ಗಳಿಗೆ ತನ್ನ ಉಳಿದ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಪರ ರವಿಚಂದ್ರನ್ ಅಶ್ವಿನ್ 112 ರನ್ ಗಳಿಸಿ ಔಟಾದರೆ, ರವೀಂದ್ರ ಜಡೇಜಾ ಐದನೇ ಟೆಸ್ಟ್ ಶತಕ ವಂಚಿತರಾಗಿ 86 ರನ್ಗಳಿಸಿ ಔಟಾದರು. ಬಾಂಗ್ಲಾದೇಶ ಪರ ಹಸನ್ ಮಹಮೂದ್ 5 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Fri, 20 September 24