IND vs BAN: ಆಡಿರುವ 30 ಇನ್ನಿಂಗ್ಸ್​ಗಳ ಪೈಕಿ 23 ಇನ್ನಿಂಗ್ಸ್​ ಗಳಲ್ಲಿ ಖಾತೆಯನ್ನೇ ತೆರೆದಿಲ್ಲ ಈ ಬಾಂಗ್ಲಾ ಆಟಗಾರ..!

IND vs BAN: ಶೂನ್ಯ ಸುತ್ತುವುದನ್ನೇ ಕಾಯಕ ಮಾಡಿಕೊಂಡಿರುವ ಇಬಾದತ್ ಬ್ಯಾಟಿಂಗ್‌ಗೆ ಬಂದಾಗಲೆಲ್ಲಾ ಪ್ರತಿಯೊಬ್ಬರೂ ಅವರ ಮೊದಲ ರನ್‌ಗಾಗಿ ಕುತೂಹಲದಿಂದ ಕಾಯುತ್ತಾರೆ.

IND vs BAN: ಆಡಿರುವ 30 ಇನ್ನಿಂಗ್ಸ್​ಗಳ ಪೈಕಿ 23 ಇನ್ನಿಂಗ್ಸ್​ ಗಳಲ್ಲಿ ಖಾತೆಯನ್ನೇ ತೆರೆದಿಲ್ಲ ಈ ಬಾಂಗ್ಲಾ ಆಟಗಾರ..!
ಬಾಂಗ್ಲಾ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Dec 05, 2022 | 11:48 AM

ಅಂತಾರಾಷ್ಟ್ರೀಯ ಕ್ರಿಕೆಟ್ (International Cricket) ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭದ ಮಾತಲ್ಲ. ಕೆಲವು ಬಾರಿ ಲೆಜೆಂಡರಿ ಬ್ಯಾಟ್ಸ್​ಮನ್​ಗಳೇ ರನ್ ಗಳಿಸಲು ಕಷ್ಟಪಡುತ್ತಾರೆ. ಕ್ರಿಕೆಟ್​ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್​ನಿಂದ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಅದೇಷ್ಟೋ ಬ್ಯಾಟ್ಸ್​ಮನ್​ಗಳು ಖಾತೆ ತೆರೆಯದೆ ಹಲವು ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಇವರಲ್ಲಿ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli), ಹಿಟ್​ಮ್ಯಾನ್ ರೋಹಿತ್, ಕ್ಯಾಪ್ಟನ್ ಕೂಲ್ ದೋನಿ (MS Dhoni), ಕನ್ನಡಿಗ ರಾಹುಲ್ (kl Rahul) ಸಹ ಸೇರಿದ್ದಾರೆ. ಇವರೆಲ್ಲರೂ ಶೂನ್ಯ ಸುತ್ತುವ ವಿಚಾರದಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿದ್ದರೂ, ಮಿಕ್ಕ ಸಮಯದಲ್ಲಿ ಗೆಲುವಿನ ಇನ್ನಿಂಗ್ಸ್ ಆಡಿ, ತಮ್ಮ ಶೂನ್ಯ ಸಾಧನೆಯನ್ನು ಮರೆಯುವಂತೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಬೌಲರ್ ಇದ್ದಾನೆ. ಆತ ಇದುವರೆಗೆ ಆಡಿರುವ 30 ಇನ್ನಿಂಗ್ಸ್​ಗಳಲ್ಲಿ ಬರೋಬ್ಬರಿ 23 ಇನ್ನಿಂಗ್ಸ್​ಗಳಲ್ಲಿ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡಿದ್ದಾನೆ. ಆ ಆಟಗಾರ ಮತ್ತ್ಯಾರು ಅಲ್ಲ, ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣನಾದ ಬಾಂಗ್ಲಾ ಬೌಲರ್ ಇಬಾದತ್ ಹೊಸೈನ್ (Ebadot Hossain).

ಮೀರ್​ಪುರದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ 1 ವಿಕೆಟ್‌ನಿಂದ ರೋಚಕ ಜಯ ದಾಖಲಿಸಿತು. ಆದರೆ, ಈ ಪಂದ್ಯದಲ್ಲಿ ಆರಂಭದಿಂದ ಅಂತ್ಯದವರೆಗೂ ಸಾಕಷ್ಟು ಡ್ರಾಮಾ ನಡೆಯಿತು. ಟೀಂ ಇಂಡಿಯಾ ನೀಡಿದ್ದ 187 ರನ್​ಗಳ ಅಲ್ಪ ಟಾರ್ಗೆಟ್ ಬೆನ್ನಟ್ಟಿದ ಬಾಂಗ್ಲಾ ತಂಡ ಕೂಡ ಒಂದು ಹಂತದಲ್ಲಿ ಸೋಲುವ ಭೀತಿಯಲ್ಲಿತ್ತು. 130 ರನ್​ ಗಳಿಸುವಷ್ಟರಲ್ಲೇ ತಂಡದ ಪ್ರಮುಖ ಆಟಗಾರರು ಪೆವಿಲಿಯನ್ ಸೇರಿಕೊಂಡಿದ್ದರು. ಈ ವೇಳೆ ಬಾಂಗ್ಲಾ ಇನ್ನಿಂಗ್ಸ್​ನ 39ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಇಬಾದತ್ ಹೊಸೈನ್ ಕೂಡ ಮೂರು ಎಸೆತಗಳನ್ನು ಆಡಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಈ ಮೂಲಕ ತನ್ನ ಹೆಸರಿಗೆ ಬೇಡದ ವಿಶೇಷ ದಾಖಲೆ ಬರೆದುಕೊಂಡರು.

ಇದನ್ನೂ ಓದಿ: IND vs BAN: ಕ್ಯಾಚ್ ಡ್ರಾಪ್, ಬ್ಯಾಟಿಂಗ್ ವೈಫಲ್ಯ, ದುಬಾರಿ ಓವರ್; ಭಾರತದ ಸೋಲಿಗೆ ಪ್ರಮುಖ ಕಾರಣಗಳಿವು..!

ಶೂನ್ಯ ಸಂಪಾದನೆಯೇ ಈ ಆಟಗಾರನ ಹೆಗ್ಗುರುತು

ಶೂನ್ಯ ಸುತ್ತುವುದನ್ನೇ ಕಾಯಕ ಮಾಡಿಕೊಂಡಿರುವ ಇಬಾದತ್ ಬ್ಯಾಟಿಂಗ್‌ಗೆ ಬಂದಾಗಲೆಲ್ಲಾ ಪ್ರತಿಯೊಬ್ಬರೂ ಅವರ ಮೊದಲ ರನ್‌ಗಾಗಿ ಕುತೂಹಲದಿಂದ ಕಾಯುತ್ತಾರೆ. ದುರದೃಷ್ಟವಶಾತ್, ಹೆಚ್ಚಿನ ಸಂದರ್ಭಗಳಲ್ಲಿ ಪ್ರೇಕ್ಷಕರನ್ನು ಮತ್ತು ತಂಡವನ್ನು ನಿರಾಶೆಗೊಳಿಸುವುದು ಇಬಾದತ್​ಗೆ ಅಭ್ಯಾಸವಾಗಿಬಿಟ್ಟಿದೆ. ಇಬಾದತ್ ಇದುವರೆಗೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಒಟ್ಟು 30 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ಗಾಗಿ ಕ್ರೀಸ್‌ಗೆ ಕಾಲಿಟ್ಟಿದ್ದಾರೆ. ಅದರಲ್ಲಿ ಅವರು ಕೇವಲ 33 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

ಈ 30 ಇನ್ನಿಂಗ್ಸ್‌ಗಳಲ್ಲಿ 23 ಬಾರಿ (21 ಟೆಸ್ಟ್, 2 ಏಕದಿನ ಪಂದ್ಯ) ಇಬಾದತ್ ಅವರ ಬ್ಯಾಟ್‌ನಿಂದ ಯಾವುದೇ ರನ್ ಬಂದಿಲ್ಲ.ಈ 30 ಇನ್ನಿಂಗ್ಸ್​ಗಳಲ್ಲಿ 9 ಬಾರಿ (8 ಟೆಸ್ಟ್, 1 ಏಕದಿನ ಪಂದ್ಯ) ಖಾತೆ ತೆರೆಯದೆ ಔಟಾದರೆ, ಮಿಕ್ಕ 14 ಇನ್ನಿಂಗ್ಸ್‌ಗಳಲ್ಲಿ ಇಬಾದತ್ ಯಾವುದೇ ರನ್​ಗಳಿಸದೆ ಅಜೇಯರಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಬೌಲಿಂಗ್​ನಲ್ಲಿ ಇಬಾದತ್ ಕರಾಮತ್ತು

ಆದಾಗ್ಯೂ, ಇಬಾದತ್‌ ಬ್ಯಾಟಿಂಗ್‌ನಲ್ಲಿ ಯಾವುದೇ ಮ್ಯಾಜಿಕ್ ಮಾಡದೆ ಇರಬಹುದು. ಆದರೆ ಈ 28ರ ಹರೆಯದ ವೇಗದ ಬೌಲರ್ ಇದುವರೆಗಿನ ತನ್ನ ಕಡಿಮೆ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಭಾರತ ವಿರುದ್ಧದ ಮೀರ್‌ಪುರ ಏಕದಿನ ಪಂದ್ಯದಲ್ಲಿ 9 ಓವರ್‌ಗಳಲ್ಲಿ 4 ದೊಡ್ಡ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಂ ಇಂಡಿಯಾವನ್ನು ಕೇವಲ 186 ರನ್ ಗಳಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಅದೇ ರೀತಿ ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ತಲ್ಲಣ ಸೃಷ್ಟಿಸಿ ಬಾಂಗ್ಲಾದೇಶಕ್ಕೆ ಮೊದಲ ಬಾರಿಗೆ ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಗೆಲುವು ತಂದುಕೊಟ್ಟಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:44 am, Mon, 5 December 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್