Ravichandran Ashwin: ಕಡಿಮೆ ಟೆಸ್ಟ್​ಗಳಲ್ಲಿ 400 ವಿಕೆಟ್​ ಪಡೆದ 2ನೇ ಆಟಗಾರ ಅಶ್ವಿನ್ ಮುಡಿಗೆ ಮತ್ತೊಂದು ಗರಿ

Ravichandran Ashwin: ಇಂಗ್ಲೆಂಡ್‌ನ ಆರ್ಚರ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಟೆಸ್ಟ್‌ನಲ್ಲಿ 400 ವಿಕೆಟ್​ಗಳ ಗಡಿ ಮುಟ್ಟಿದರು. ಇದರೊಂದಿಗೆ ಅಶ್ವಿನ್ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 600 ವಿಕೆಟ್‌ಗಳನ್ನು ಪೂರೈಸಿದ್ದಾರೆ.

  • TV9 Web Team
  • Published On - 21:41 PM, 25 Feb 2021
Ravichandran Ashwin: ಕಡಿಮೆ ಟೆಸ್ಟ್​ಗಳಲ್ಲಿ 400 ವಿಕೆಟ್​ ಪಡೆದ 2ನೇ ಆಟಗಾರ ಅಶ್ವಿನ್ ಮುಡಿಗೆ ಮತ್ತೊಂದು ಗರಿ
ರವಿಚಂದ್ರನ್ ಅಶ್ವಿನ್

ಅಹಮದಾಬಾದ್‌: ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಂತಹ ಸಂದರ್ಭದಲ್ಲೂ ತಂಡಕ್ಕಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿರುವ ಆಟಗಾರನೆಂದು 3ನೇ ಟೆಸ್ಟ್​ನಲ್ಲೂ ಸಾಬೀತಾಗಿದೆ. ಇದರ ಜೊತೆಗೆ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ಇಂಗ್ಲೆಂಡ್ ವಿರುದ್ಧ ನಡೆದ ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿ ಈ ಆಟಗಾರ ಮತ್ತೊಂದು ಪ್ರಮುಖ ಸಾಧನೆ ಮಾಡಿದ್ದಾರೆ. ಅದೇನೆಂದರೆ, ಅಶ್ವಿನ್ ಟೆಸ್ಟ್‌ ಕ್ರಿಕೆಟ್‌ನಲ್ಲಿ 400 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ. ಇದರೊಂದಿಗೆ ಟೆಸ್ಟ್‌ನಲ್ಲಿ 400 ವಿಕೆಟ್ ಪಡೆದ ಭಾರತದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ನ ಆರ್ಚರ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ಟೆಸ್ಟ್‌ನಲ್ಲಿ 400 ವಿಕೆಟ್​ಗಳ ಗಡಿ ಮುಟ್ಟಿದರು. ಅಶ್ವಿನ್​ಗಿಂತ ಮೊದಲು ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ (619), ಕಪಿಲ್ ದೇವ್ (434) ಮತ್ತು ಹರ್ಭಜನ್ ಸಿಂಗ್ (417) ಈ ಸಾಧನೆ ಮಾಡಿದ್ದರು. ಇದರೊಂದಿಗೆ ಅಶ್ವಿನ್ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 600 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಮುರಳೀಧರನ್ ನಂತರ ವೇಗವಾಗಿ 400 ವಿಕೆಟ್ ಪಡೆದ ಅಶ್ವಿನ್​
400 ವಿಕೆಟ್ ಪಡೆಯುವ ವಿಷಯದಲ್ಲಿ ಅಶ್ವಿನ್ ಅನೇಕ ಅನುಭವಿಗಳನ್ನು ಹಿಂದಿಕ್ಕಿದ್ದಾರೆ. 400 ವಿಕೆಟ್ ಪಡೆದ ವಿಶ್ವದ ಎರಡನೇ ಅತಿ ವೇಗದ ಬೌಲರ್ ಎಂಬ ಹೆಗ್ಗಳಿಕೆ ಅಶ್ವಿನ್​ ಪಾಲಾಗಿದೆ. ಅಶ್ವಿನ್ ತಮ್ಮ 77ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಮುರಳೀಧರನ್ 72 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ನ್ಯೂಜಿಲೆಂಡ್‌ನ ಬೌಲರ್ ರಿಚರ್ಡ್ ಹ್ಯಾಡ್ಲಿಯ ದಾಖಲೆಯನ್ನು ಮುರಿಯುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದಾರೆ. 80 ಟೆಸ್ಟ್ ಪಂದ್ಯಗಳಲ್ಲಿ ಹ್ಯಾಡ್ಲಿ 400 ವಿಕೆಟ್ ಗಳಿಸಿದ್ದರು. ಹೆಡ್ಲಿಯೊಂದಿಗೆ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಸಹ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಶ್ರೀಲಂಕಾದ ರಂಗನಾ ಹೆರಾತ್ ಕೂಡ 84 ಟೆಸ್ಟ್ ಪಂದ್ಯಗಳಲ್ಲಿ 400 ವಿಕೆಟ್ ಪಡೆದಿದ್ದಾರೆ.

600 ವಿಕೆಟ್ ಪಡೆದ ಭಾರತದ ಐದನೇ ಬೌಲರ್..
ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ 600 ಅಂತರರಾಷ್ಟ್ರೀಯ ವಿಕೆಟ್​ಗಳನ್ನು ಪೂರೈಸಿದರು. ಈ ಸಾಧನೆ ಮಾಡಿದ ಭಾರತದ ಐದನೇ ಬೌಲರ್ ಎನಿಸಿಕೊಂಡರು. ಟೆಸ್ಟ್‌ನಲ್ಲಿ 400 ವಿಕೆಟ್‌ಗಳಲ್ಲದೆ ಅಶ್ವಿನ್, ಏಕದಿನ ಪಂದ್ಯಗಳಲ್ಲಿ 150 ವಿಕೆಟ್‌ ಮತ್ತು ಟಿ 20 ಯಲ್ಲಿ 52 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಶ್ವಿನ್​ಗು ಮೊದಲು ಅನಿಲ್ ಕುಂಬ್ಳೆ, ಕಪಿಲ್ ದೇವ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಅವರ ಹೆಸರುಗಳು ಈ ಪಟ್ಟಿಯಲ್ಲಿವೆ. ಮಾಜಿ ನಾಯಕ ಕುಂಬ್ಳೆ 956 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಇವರ ನಂತರ ಹರ್ಭಜನ್ 711 ಅಂತರರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಈ ಇಬ್ಬರ ನಂತರ 687 ವಿಕೆಟ್ ಪಡೆದ ವಿಶ್ವ ವಿಜೇತ ನಾಯಕ ಕಪಿಲ್ ದೇವ್ ಮತ್ತು 610 ವಿಕೆಟ್ ಪಡೆದ ಜಹೀರ್ ಖಾನ್ ಹೆಸರು ಸಹ ಇದೆ.

ಇದನ್ನೂ ಓದಿ: India vs England: 3ನೇ ಟೆಸ್ಟ್ ಗೆದ್ದ ಭಾರತ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಕನಸು​ ಇನ್ನೂ ಜೀವಂತ