India vs South Africa 1st T20: ಮೋಡ ಕವಿದ ವಾತಾವರಣ: ಭಾರತ-ಸೌತ್ ಆಫ್ರಿಕಾ ಪಂದ್ಯ ನಡೆಯಲಿದ್ಯಾ?
India vs South Africa 1st T20: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಇನ್ನು ಪಂದ್ಯದ ಟಾಸ್ ಸಂಜೆ 6.30ಕ್ಕೆ ನಡೆಯಲಿದೆ.
ಭಾರತ-ಸೌತ್ ಆಫ್ರಿಕಾ (India vs South Africa 1st T20) ನಡುವಣ ಮೊದಲ ಟಿ20 ಪಂದ್ಯವು ತಿರುವನಂತಪುರಂದಲ್ಲಿನ ಗ್ರೀನ್ಫೀಲ್ಡ್ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆಯಲಿದೆ. ರಾತ್ರಿ 7 ಗಂಟೆಯಿಂದ ಶುರುವಾಗಲಿರುವ ಈ ಪಂದ್ಯಕ್ಕೆ ಇದೀಗ ಮಳೆಯ ಭೀತಿ ಎದುರಾಗಿದೆ. ಏಕೆಂದರೆ ಹವಾಮಾನ ವರದಿ ಪ್ರಕಾರ ತಿರುವನಂತಪುರಂದ ಸುತ್ತ ಮುತ್ತಲಿನಲ್ಲಿ ಮೋಡ ಕವಿದ ವಾತಾವಣರವಿದ್ದು, ಹೀಗಾಗಿ ಸಣ್ಣ ಪ್ರಯಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇದಾಗ್ಯೂ ಸೀಮಿತ ಓವರ್ಗಳಲ್ಲಿ ಪಂದ್ಯ ನಡೆಯುವುದು ಖಚಿತ ಎಂದೇ ಹೇಳಬಹುದು.
ಏಕೆಂದರೆ weather.com ವರದಿಗಳ ಪ್ರಕಾರ, ಸೆಪ್ಟೆಂಬರ್ 28 ರಂದು (ಬುಧವಾರ) ಭಾರತದ ತಿರುವನಂತಪುರಂ ನಗರದ ತಾಪಮಾನವು ಹಗಲಿನಲ್ಲಿ 30 ಸೆಲ್ಸಿಯಸ್ ಇರಲಿದೆ. ರಾತ್ರಿಯ ವೇಳೆ 25 ಸೆಲ್ಸಿಯಸ್ಗೆ ಇಳಿಯಲಿದೆ. ಇದಾಗ್ಯೂ ಹಗಲು ಮತ್ತು ರಾತ್ರಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಆದರೆ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆ ಪ್ರಮಾಣದಲ್ಲಿದೆ. ಮಳೆಯ ಸಾಧ್ಯತೆ ಹಗಲಿನಲ್ಲಿ 17% ಇದ್ದರೆ, ರಾತ್ರಿಯಲ್ಲಿ 21% ಇದೆ. ಹೀಗಾಗಿ ಮಳೆಯಾದರೂ ಸೀಮಿತ ಓವರ್ಗಳಲ್ಲಿ ಪಂದ್ಯವನ್ನು ಪೂರ್ಣಗೊಳಿಸಲು ಸಮಯವಕಾಶ ಇರಲಿದೆ. ಅದರಂತೆ ಭಾರತ-ಸೌತ್ ಆಫ್ರಿಕಾ ನಡುವಣ ಮೊದಲ ಟಿ20 ಪಂದ್ಯ ನಡೆಯುವುದು ಖಚಿತ ಎಂದೇ ಹೇಳಬಹುದು.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಇನ್ನು ಪಂದ್ಯದ ಟಾಸ್ ಸಂಜೆ 6.30ಕ್ಕೆ ನಡೆಯಲಿದೆ. ಈ ಸರಣಿಯ ಎಲ್ಲಾ ಪಂದ್ಯಗಳ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ, ಸ್ಟಾರ್ ನೆಟ್ವರ್ಕ್ ಚಾನೆಲ್ಗಳಲ್ಲಿ ನೇರ ಪ್ರಸಾರ ಇರಲಿದೆ.
ಭಾರತ-ಸೌತ್ ಆಫ್ರಿಕಾ ಟಿ20 ಸರಣಿಯ ವೇಳಾಪಟ್ಟಿ ಹೀಗಿದೆ:
- ಸೆಪ್ಟೆಂಬರ್ 28- ಮೊದಲ ಟಿ20 ಪಂದ್ಯ (ತಿರುವನಂತಪುರ)
- ಅಕ್ಟೋಬರ್ 2- 2ನೇ ಟಿ20 ಪಂದ್ಯ (ಗೌಹಾಟಿ)
- ಅಕ್ಟೋಬರ್ 4- 3ನೇ ಟಿ20 ಪಂದ್ಯ (ಇಂದೋರ್)
ಭಾರತ ಟಿ20 ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹಾರ್, ಶಹಬಾಜ್ ಅಹ್ಮದ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ ಟಿ20 ತಂಡ:
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಕ್ ನೋಕಿಯಾ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲಿ ರೊಸೊ, ತಬ್ರೇಝ್ ಶಂಸಿ, ಟ್ರಿಸ್ಟಾನ್ ಸ್ಟಬ್ಸ್.