Krunal Pandya: ಕೃನಾಲ್ ಪಾಂಡ್ಯ ಜೊತೆ 8 ಆಟಗಾರರು ನೇರ ಸಂಪರ್ಕ: ಆತಂಕದಲ್ಲಿ ಟೀಮ್ ಇಂಡಿಯಾ

India vs Sri Lanka 2nd T20I: ಈ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ ಪ್ರವಾಸ ಮುಗಿಸಿ ಹಿಂದಿರುಗಿದ ಶ್ರೀಲಂಕಾದ ಎಲ್ಲಾ ಆಟಗಾರರನ್ನು ಕೊರೋನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಈ ವೇಳೆ ಆಟಗಾರರ ಫಲಿತಾಂಶ ನೆಗೆಟಿವ್ ಬಂದರೂ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಹಾಗೂ ಸಿಬ್ಬಂದಿಯಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿತ್ತು.

Krunal Pandya: ಕೃನಾಲ್ ಪಾಂಡ್ಯ ಜೊತೆ 8 ಆಟಗಾರರು ನೇರ ಸಂಪರ್ಕ: ಆತಂಕದಲ್ಲಿ ಟೀಮ್ ಇಂಡಿಯಾ
krunal pandya
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jul 27, 2021 | 10:01 PM

ಭಾರತ-ಶ್ರೀಲಂಕಾ ನಡುವಿನ ಟಿ20 ಸರಣಿಗೆ ಕೋವಿಡ್ ಆತಂಕ ಎದುರಾಗಿದೆ. ಟೀಮ್ ಇಂಡಿಯಾದ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೋವಿಡ್ ಪಾಸಿಟಿವ್ ಆಗಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆಯಬೇಕಿದ್ದ 2ನೇ ಟಿ20 ಪಂದ್ಯವನ್ನು ಮುಂದೂಡಲಾಗಿದೆ. ಅಷ್ಟೇ ಅಲ್ಲದೆ ಉಭಯ ತಂಡಗಳ ಆಟಗಾರರನ್ನು ಐಸೋಲೇಷನ್​ಗೆ ಒಳಪಡಿಸಲಾಗಿದೆ. ಪಂದ್ಯಕ್ಕೂ ಮುನ್ನ ನಡೆಸಿದ ರ್ಯಾಪಿಡ್ ಅ್ಯಂಟಿ ಜೆನ್ ಟೆಸ್ಟ್​ನಲ್ಲಿ ಕೃನಾಲ್ ಪಾಂಡ್ಯ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.

ಇದೀಗ ಟೀಮ್ ಇಂಡಿಯಾದ ಎಲ್ಲಾ ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಅದರಲ್ಲೂ 8 ಆಟಗಾರರು ಕೃನಾಲ್ ಪಾಂಡ್ಯ ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದರು ಎಂಬುದನ್ನು ಬಿಸಿಸಿಐ ದೃಢಪಡಿಸಿದೆ. ಹೀಗಾಗಿ ಈ ಆಟಗಾರರ ಮೇಲೆ ತೀವ್ರ ನಿಗಾ ಇಡಲಾಗಿದೆ. ಒಂದು ವೇಳೆ ಈ ಆಟಗಾರರಲ್ಲೂ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಸರಣಿಯು ರದ್ದಾಗುವ ಸಾಧ್ಯತೆಯಿದೆ ಹೆಚ್ಚಿದೆ.

ಸದ್ಯ ಆಟಗಾರರನ್ನು ಕೋವಿಡ್-19 ಟೆಸ್ಟ್​ಗೆ ಒಳಪಡಿಸಲಾಗಿದ್ದು, ಆರ್‌ಟಿ-ಪಿಸಿಆರ್ ಪರೀಕ್ಷೆಗಳಲ್ಲಿ ಆಟಗಾರರ ಕೊರೋನಾ ಫಲಿತಾಂಶ ನೆಗೆಟಿವ್ ಬಂದರೆ ಸರಣಿಯ ಉಳಿದಿರುವ ಎರಡು ಪಂದ್ಯಗಳನ್ನು ಬುಧವಾರ ಮತ್ತು ಗುರುವಾರ ಬ್ಯಾಕ್ ಟು ಬ್ಯಾಕ್ ಆಡಿಸಲು ನಿರ್ಧರಿಸಲಾಗಿದೆ.

ಇತ್ತ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಕೃನಾಲ್ ಪಾಂಡ್ಯ ಜೊತೆ ನೇರ ಸಂಪರ್ಕ ಹೊಂದಿದ್ದರು. ಇದೀಗ ಇಂಗ್ಲೆಂಡ್​ ಸರಣಿಗೆ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್ ಹಾಗೂ ಪೃಥ್ವಿ ಶಾ ಅವರಲ್ಲೂ ಆತಂಕ ಎದುರಾಗಿದೆ. ಅದರಲ್ಲೂ ಚೊಚ್ಚಲ ಬಾರಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್ ಚಿಂತೆಗೀಡಾಗಿದ್ದಾರೆ.

ಈ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ ಪ್ರವಾಸ ಮುಗಿಸಿ ಹಿಂದಿರುಗಿದ ಶ್ರೀಲಂಕಾದ ಎಲ್ಲಾ ಆಟಗಾರರನ್ನು ಕೊರೋನಾ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಈ ವೇಳೆ ಆಟಗಾರರ ಫಲಿತಾಂಶ ನೆಗೆಟಿವ್ ಬಂದರೂ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಹಾಗೂ ಸಿಬ್ಬಂದಿಯಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿತ್ತು. ಇದೇ ಕಾರಣದಿಂದ ಭಾರತ, ಶ್ರೀಲಂಕಾ ಸರಣಿ ವೇಳಾಪಟ್ಟಿಯನ್ನು ಬದಲಿಸಲಾಗಿತ್ತು. ಅದರಂತೆ ಜುಲೈ 13 ರಿಂದ ಶುರುವಾಗಬೇಕಿದ್ದ ಸರಣಿಯನ್ನು ಜುಲೈ 18 ರಿಂದ ಪ್ರಾರಂಭಿಸಲಾಗಿತ್ತು. ಇದೀಗ ಮತ್ತೊಮ್ಮೆ ಕೊರೋನಾಂತಕ ಎದುರಾಗಿದ್ದು, ಉಳಿದ 2 ಪಂದ್ಯಗಳನ್ನು ಆಡಲಿದೆಯಾ ಕಾದು ನೋಡಬೇಕಿದೆ.

ಟೀಮ್ ಇಂಡಿಯಾ ಸಂಪೂರ್ಣ ತಂಡ: ಶಿಖರ್ ಧವನ್ (ನಾಯಕ) , ಪೃಥ್ವಿ ಶಾ , ಇಶಾನ್ ಕಿಶನ್ (ವಿಕೆಟ್ ಕೀಪರ್) , ಸೂರ್ಯಕುಮಾರ್ ಯಾದವ್ , ಸಂಜು ಸ್ಯಾಮ್ಸನ್ , ಹಾರ್ದಿಕ್ ಪಾಂಡ್ಯ , ಕ್ರುನಾಲ್ ಪಾಂಡ್ಯ , ದೀಪಕ್ ಚಹರ್ , ಭುವನೇಶ್ವರ್ ಕುಮಾರ್ , ಯುಜ್ವೇಂದ್ರ ಚಹಲ್ , ವರುಣ್ ಚಕ್ರವರ್ತಿ, ಮನೀಶ್ ಪಾಂಡೆ , ರಾಹುಲ್ ಚಹರ್ , ಕುಲದೀಪ್ ಯಾದವ್ , ಕೃಷ್ಣಪ್ಪ ಗೌತಮ್ , ನಿತೀಶ್ ರಾಣಾ , ನವದೀಪ್ ಸೈನಿ , ರುತುರಾಜ್ ಗಾಯಕ್ವಾಡ್ , ದೇವದತ್ ಪಡಿಕ್ಕಲ್ , ಚೇತನ್ ಸಕರಿಯಾ

ಇದನ್ನೂ ಓದಿ: Viral Story: ಟ್ರಾಫಿಕ್​ ಪೊಲೀಸ್​ ಮನೆಯಲ್ಲಿ ಚಿನ್ನದ ಟಾಯ್ಲೆಟ್

ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?

(India vs Sri Lanka 2nd T20I: eight other team members identified as close contact to krunal pandya)

Published On - 5:10 pm, Tue, 27 July 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!