ಭಾರತ-ಶ್ರೀಲಂಕಾ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ?: ಇಲ್ಲಿದೆ ಹವಾಮಾನ ವರದಿ

IND vs SL, Asia Cup Final Weather Report: ಹವಾಮಾನ ಮುನ್ಸೂಚನೆಯ ಪ್ರಕಾರ, ಏಷ್ಯಾಕಪ್ 2023 ಭಾರತ ಮತ್ತು ಶ್ರೀಲಂಕಾ ಫೈನಲ್ ಪಂದ್ಯಕ್ಕೆ ಭಾನುವಾರವೂ ಮಳೆ ಅಡ್ಡಿ ಪಡಿಸುವ ನಿರೀಕ್ಷೆಯಿದೆ. ಕೊಲಂಬೊದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ತುಂತುರು ಮಳೆ ಮತ್ತು ಸೂರ್ಯನ ಬೆಳಕು ಕಣ್ಣಾಮುಚ್ಚಾಲೆ ಆಡುತ್ತಿದೆ.

ಭಾರತ-ಶ್ರೀಲಂಕಾ ಏಷ್ಯಾಕಪ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ?: ಇಲ್ಲಿದೆ ಹವಾಮಾನ ವರದಿ
IND vs SL Asia Cup Final Weather
Follow us
|

Updated on: Sep 16, 2023 | 11:30 AM

ಏಷ್ಯಾಕಪ್ 2023 ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಸೆಪ್ಟೆಂಬರ್ 17 ಭಾನುವಾರದಂದು ಭಾರತ ಹಾಗೂ ಶ್ರೀಲಂಕಾ ನಡುನೆ ಏಷ್ಯಾಕಪ್ ಫೈನಲ್ (Asia Cup 2023 Final) ಪಂದ್ಯ ನಡೆಯಲಿದೆ. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಮ್ಯಾಚ್ ಏರ್ಪಡಿಸಲಾಗಿದೆ. 2023 ರ ಏಷ್ಯಾಕಪ್‌ನ ಪ್ರತಿಯೊಂದು ಪಂದ್ಯದ ಮೇಲೆ ಮಳೆಯ ಕರಿ ನೆರಳು ಬಿದ್ದಿದೆ. ಕೆಲ ಪಂದ್ಯ ರದ್ದಾದರೆ, ಭಾರತ-ಪಾಕ್ ಪಂದ್ಯ ಮೀಸಲು ದಿನದಂದು ನಡೆಯಿತು. ಇದೀಗ ಹವಾಮಾನ ಮುನ್ಸೂಚನೆಯ ಪ್ರಕಾರ ಇಂಡೋ-ಲಂಕಾ ಫೈನಲ್ ಪಂದ್ಯಕ್ಕೆ ಭಾನುವಾರವೂ ಮಳೆ ಅಡ್ಡಿ ಪಡಿಸುವ ನಿರೀಕ್ಷೆಯಿದೆ.

ಕೊಲಂಬೊ ಹವಾಮಾನ ಮುನ್ಸೂಚನೆ

ಕೊಲಂಬೊದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ತುಂತುರು ಮಳೆ ಮತ್ತು ಸೂರ್ಯನ ಬೆಳಕು ಕಣ್ಣಾಮುಚ್ಚಾಲೆ ಆಡುತ್ತಿದೆ. ದುರದೃಷ್ಟವಶಾತ್, ಭಾರತ ಮತ್ತು ಶ್ರೀಲಂಕಾ ಏಷ್ಯಾಕಪ್ 2023 ರ ಫೈನಲ್ ಪಂದ್ಯದ ಮೇಲೆ ಮಳೆಯು ಪರಿಣಾಮ ಬೀರುವ ಸಾಧ್ಯತೆಯಿದೆ.

ಬಾಂಗ್ಲಾ ವಿರುದ್ಧದ ಸೋಲಿನ ಬಳಿಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ನೋಡಿ

ಇದನ್ನೂ ಓದಿ
Image
ಕೊನೆಯ 10 ಓವರ್​ಗಳಲ್ಲಿ 173 ರನ್ ಚಚ್ಚಿ ವಿಶ್ವ ದಾಖಲೆ ಬರೆದ ಆಫ್ರಿಕಾ
Image
ಶೂನ್ಯ ಸುತ್ತುವುದರಲ್ಲಿ ವಿರಾಟ್ ಕೊಹ್ಲಿಯನ್ನು ಸರಿಗಟ್ಟಿದ ರೋಹಿತ್ ಶರ್ಮಾ..!
Image
ಭಾರತ-ಬಾಂಗ್ಲಾ ಪಂದ್ಯದ ನಡುವೆ ಬ್ಯಾಟಿಂಗ್ ಪ್ರ್ಯಾಕ್ಟೀಸ್​ಗೆ ಬಂದ ವಿರಾಟ್
Image
4 ಪಂದ್ಯಗಳಲ್ಲಿ 10 ಕ್ಯಾಚ್ ಕೈಚೆಲ್ಲಿದ ಟೀಂ ಇಂಡಿಯಾ!

ಪಂದ್ಯವು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಈ ಸಂದರ್ಭ ಮಳೆ ಬರುವ ಲಕ್ಷಣವಿಲ್ಲ. ಆದರೆ, ಸಂಜೆಯ ವೇಳೆಗೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ವೇಳೆಗೆ ಶೇ. 50ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದಾಗ್ಯೂ, ಆಟದ ಕೊನೆಯ ಭಾಗದಲ್ಲಿ ಮಳೆಯ ಪ್ರಮಾಣ ಶೇ. 68 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪಂದ್ಯದ ಮಧ್ಯೆ ಆಗಾಗ ಮಳೆ ಸುರಿಯಲಿದ್ದು, ಓವರ್‌ಗಳ ಕಡಿತಕ್ಕೆ ಕಾರಣವಾಗಬಹುದು. ದಿನವಿಡೀ ತಾಪಮಾನವು 24 ರಿಂದ 28 ಡಿಗ್ರಿಗಳವರೆಗೆ ಇರುತ್ತದೆ.

ಭಾರತ-ಶ್ರೀಲಂಕಾ ಫೈನಲ್ ಪಂದ್ಯ ಮಳೆಗೆ ರದ್ದಾದರೆ?

ಭಾರತ ಮತ್ತು ಶ್ರೀಲಂಕಾ ಏಷ್ಯಾಕಪ್ 2023 ಫೈನಲ್ ಹಣಾಹಣಿ ಭಾನುವಾರದಂದು ಮಳೆಯಿಂದ ರದ್ದಾದರೆ, ಮೀಸಲು ದಿನಕ್ಕೆ ಅವಕಾಶವಿದೆ. ಮಳೆ ಬಂದು ಪಂದ್ಯ ಅರ್ಧ ನಡೆದರೆ ಅಥವಾ ಪಂದ್ಯ ಆರಂಭವೇ ಆಗಿದಿದ್ದಲ್ಲಿ, ಮರುದಿನ (ಸೋಮವಾರ) ಮುಂದುವರೆಸುವ ಅವಕಾಶವಿದೆ. ಪಂದ್ಯ ಅರ್ಧಕ್ಕೆ ಮೊಟಕುಗೊಳಿಸಿದರೆ ಮುಂದಿನ ದಿನ ಅರ್ಧದಿಂದಲೇ ಮುಂದುವರೆಯಲಿದೆ.

ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಶ್ರೀಲಂಕಾದಲ್ಲಿ ಭಾರೀ ಮಳೆಯಾಗುತ್ತದೆ. ಹೀಗಾಗಿ ಲಂಕಾ ಕ್ರಿಕೆಟ್ ಮಂಡಳಿ ಈ ತಿಂಗಳುಗಳಲ್ಲಿ ಇಲ್ಲಿ ಯಾವುದೇ ಪಂದ್ಯಗಳನ್ನು ನಿಗದಿಪಡಿಸುವುದಿಲ್ಲ. ಆದರೆ, ಪಾಕಿಸ್ತಾನಕ್ಕೆ ತೆರಳಲು ಭಾರತಕ್ಕೆ ಸರ್ಕಾರದ ಅನುಮತಿ ಇಲ್ಲದ ಕಾರಣ ಶ್ರೀಲಂಕಾಕ್ಕೆ ತನ್ನ ನಾಡಿನಲ್ಲಿ ಏಷ್ಯಾಕಪ್ 2023 ಅನ್ನು ಆಯೋಜಿಸುವುದು ಅನಿವಾರ್ಯವಾಗಿದ್ದವು. ಈ ಕಾರಣಕ್ಕಾಗಿ ಲಂಕಾದಲ್ಲೇ ಮಳೆಯ ನಡುವೆ ಪಂದ್ಯವನ್ನು ನಡೆಸಲಾಗುತ್ತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ