
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಟಿ20 ಪಂದ್ಯಗಳ ಸರಣಿ ಈಗಾಗಲೇ ಶುರುವಾಗಿದೆ. ಲಕ್ನೋನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್ಗಳ ಅಂತರದಲ್ಲಿ ಭರ್ಜರಿಯಾಗಿ ಸೋಲಿಸಿತು. ನಾಯಕ ಶ್ರೇಯಸ್ ಅಯ್ಯರ್ ಶತಕ ಬಾರಿಸುವ ಮೂಲಕ ಭಾರತಕ್ಕೆ ಗೆಲವು ತಂದುಕೊಟ್ಟರು. ಇದೀಗ ರಾಂಚಿಯಲ್ಲಿ ಅಕ್ಟೋಬರ್ 09ರಂದು ನಡೆಯಲಿರುವ ಎರಡನೇ ಟಿ20 ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯವು ಅಕ್ಟೋಬರ್ 09 (ಶುಕ್ರವಾರ)ದಂದು ರಾಂಚಿಯ ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 6:30ಕ್ಕೆ ಟಾಸ್ ನಡೆಯಲಿದ್ದು, 7 ಗಂಟೆಗೆ ಪಂದ್ಯವು ಆರಂಭಗೊಳ್ಳಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟಿ20 ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ (ಸ್ಟಾರ್ ಸ್ಪೋರ್ಟ್ಸ್ 1 ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಸೇರಿದಂತೆ) ಮೂಲಕ ವೀಕ್ಷಿಸಬಹುದು.
ರಾಂಚಿಯ ಜೆಎಸ್ಸಿಎ ಮೈದಾನದ ಪಿಚ್ ಗಟ್ಟಿಯಾಗಿದ್ದು, ಸಮತಟ್ಟಾದ ಹುಲ್ಲಿನ ಹೊದಿಕೆಯನ್ನು ಹೊಂದಿದೆ. ಬ್ಯಾಟರ್ಗಳಿಗೆ ಉತ್ತಮ ಪಿಚ್ ಎಂದು ಹೇಳಲಾಗುತ್ತಿದೆ. ಆ ಮೂಲಕ ಎರಡೂ ತಂಡದ ಬ್ಯಾಟರ್ಗಳು ರನ್ ಗಳಿಸಬಹುದಾಗಿದೆ. ಹೊಸ ಬಾಲ್ ಆರಂಭದಲ್ಲಿ ಬೌಲರ್ಗಳಿಗೆ ನೆರವಾಗಬಹುದು. ರಾಂಚಿಯಲ್ಲಿ ನಡೆದಿರುವ 7 ಟಿ20 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡಗಳು ನಾಲ್ಕು ಬಾರಿ ಗೆದ್ದಿದ್ದರೆ, ಮೊದಲು ಬ್ಯಾಟ್ ಮಾಡಿದ ತಂಡಗಳು ಮೂರು ಬಾರಿ ಜಯ ಗಳಿಸಿವೆ.
ಇದನ್ನೂ ಓದಿ: ಐಸಿಸಿ ಟಿ20 ರ್ಯಾಂಕಿಂಗ್: 18 ಸ್ಥಾನ ಮೇಲೇರಿದ ಶ್ರೇಯಸ್ ಅಯ್ಯರ್..!
ಇನ್ನು ಈ ಪಿಚ್ನಲ್ಲಿ ಮೊದಲ ಇನಿಂಗ್ಸ್ನ ಸರಾಸರಿ ಮೊತ್ತ 138 ಆಗಿದ್ದರೆ, ಎರಡನೇ ಇನಿಂಗ್ಸ್ನ ಸರಾಸರಿ 111 ರನ್ ಆಗಿದೆ. ಈ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ 196/6 ರನ್ ಗಳಿಸಿರುವುದು ಭಾರತದ ಗರಿಷ್ಠ ಮೊತ್ತವಾಗಿದೆ. ನ್ಯೂಜಿಲೆಂಡ್ ತಂಡವು ಭಾರತದ ವಿರುದ್ಧ 17.2 ಓವರ್ಗಳಲ್ಲಿ 155/3 ರನ್ ಗಳಿಸುವ ಮೂಲಕ ಇಲ್ಲಿನ ಗರಿಷ್ಠ ಯಶಸ್ವಿ ಚೇಸಿಂಗ್ ಇದಾಗಿದೆ.
ಪಂದ್ಯದ ವೇಳೆ ರಾಂಚಿಯ ಹವಾಮಾನವು ಭಾಗಶಃ ಮೋಡ ಕವಿದ ವಾತಾವರಣದಿಂದ ಕೂಡಿರಲಿದೆ. ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಪಂದ್ಯಕ್ಕೆ ಅಡಚಣೆ ಉಂಟಾಗಬಹುದು. 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಸಾಧ್ಯತೆಯಿದೆ. ಗಂಟೆಗೆ 7 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗಾಳಿಯ ವೇಗ ಗರಿಷ್ಠ 15 ಕಿ.ಮೀ ವರೆಗೆ ತಲುಪಬಹುದು.
ಇದನ್ನೂ ಓದಿ: ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ಟಿ20 ತಂಡ ಪ್ರಕಟ; 4 ವರ್ಷಗಳ ಬಳಿಕ ಭುವನೇಶ್ವರ್ ಕುಮಾರ್ ಆಯ್ಕೆ
ಇನ್ನು ಮಳೆಯಾಗುವ ಸಾಧ್ಯತೆ ಶೇ. 55 ರಷ್ಟಿದ್ದು, ಸುಮಾರು 1 ಮಿ.ಮೀ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಮಳೆ ಬದಲು ಹೆಚ್ಚಾಗಿ ಮೋಡ ಕವಿದ ವಾತಾವರಣವೇ ಇರುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ) ತಿಲಕ್ ವರ್ಮಾ, ಶಿವಂ ದುಬೆ, ನಮನ್ ಧೀರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಮಯಾಂಕ್ ಯಾದವ್.
ಶಾಯ್ ಹೋಪ್ (ನಾಯಕ ಮತ್ತು ವಿಕೆಟ್ ಕೀಪರ್), ಕಮಿಲ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಶೆರ್ಫೇನ್ ರುದರ್ಫೋರ್ಡ್, ರೋಸ್ಟನ್ ಚೇಸ್, ರೊಮಾರಿಯೋ ಶೆಫರ್ಡ್, ಮ್ಯಾಥ್ಯೂ ಫೋರ್ಡ್, ಶಮರ್ ಸ್ಪ್ರಿಂಗರ್, ಅಕೀಲ್ ಹೊಸೇನ್, ಶಮರ್ ಜೋಸೆಫ್,
ಮತ್ತಷ್ಟು ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:00 am, Fri, 9 October 26