
ದೆಹಲಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ವಿಂಡೀಸ್ ತಂಡ 390 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡದ ಗೆಲುವಿಗೆ 121 ರನ್‌ಗಳ ಟಾರ್ಗೆಟ್ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 518 ರನ್ ಕಲೆಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ 248 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಹೀಗಾಗಿ ಭಾರತ ಫಾಲೋ ಆನ್ ಹೇರಿ ವಿಂಡೀಸ್ಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಪ್ರತಿರೋಧ ಒಡ್ಡಿದ ವಿಂಡೀಸ್ ತಂಡ 390 ರನ್ ಕಲೆಹಾಕುವುದಲ್ಲದೆ, ಇನ್ನಿಂಗ್ಸ್ ಸೋಲಿನಿಂದ ಪಾರಾಗಿ, ಭಾರತಕ್ಕೆ 121 ರನ್‌ಗಳ ಟಾರ್ಗೆಟ್ ನೀಡಿದೆ.
ಮೊದಲ ದಿನದಾಟದಂತ್ಯಕ್ಕೆ 3ನೇ ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿದ್ದ ವೆಸ್ಟ್ ಇಂಡೀಸ್ ತಂಡವು ಇಲ್ಲಿಂದ ತನ್ನ ನಾಲ್ಕನೇ ದಿನದಾಟವನ್ನು ಮುಂದುವರಿಸಿ 390ರನ್‌ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಮುಗಿಸಿತು. ಅಂದರೆ ನಾಲ್ಕನೇ ದಿನದಾಟದಂದು ವಿಂಡೀಸ್ ತಂಡ ಉಳಿದ 8 ವಿಕೆಟ್ಗಳಿಂದ 217 ರನ್ ಕಲೆಹಾಕಿತು. ವಿಂಡೀಸ್ ಪರ ಜಾನ್ ಕ್ಯಾಂಪ್ಬೆಲ್ ಮತ್ತು ಶಾಯ್ ಹೋಪ್ ಶತಕ ಬಾರಿಸಿದರು. ಕ್ಯಾಂಪ್ಬೆಲ್ 115 ರನ್ ಬಾರಿಸಿದರೆ, ಹೋಪ್ 103 ರನ್ ಗಳಿಸಿ ಔಟಾದರು. ನಾಯಕ ರೋಸ್ಟನ್ ಚೇಸ್ 40 ರನ್ ಗಳಿಸಿದರೆ, ಜಸ್ಟಿನ್ ಗ್ರೀವ್ಸ್ ಅಜೇಯ 50 ರನ್ ಬಾರಿಸಿದರು. ಇದು ಗ್ರೀವ್ಸ್ ಅವರ ಟೆಸ್ಟ್ ವೃತ್ತಿಜೀವನದ ಮೊದಲ ಅರ್ಧಶತಕವಾಗಿತ್ತು.
𝐈𝐧𝐧𝐢𝐧𝐠𝐬 𝐁𝐫𝐞𝐚𝐤!
Jasprit Bumrah wraps up the innings with his 3⃣rd wicket ☝️#TeamIndia need 1⃣2⃣1⃣ runs to win the match and the series 👍
Scorecard ▶ https://t.co/GYLslRzj4G#INDvWI | @IDFCFIRSTBank pic.twitter.com/N0Z0vsZwkL
— BCCI (@BCCI) October 13, 2025
ತಂಡದ ಆರಂಭಿಕರಾದ ತೇಜನಾರಾಯಣ್ ಚಂದ್ರಪಾಲ್ 10 ರನ್ ಗಳಿಸಿ ಔಟಾದರೆ, ಅಲಿಕ್ ಅಥಾನಾಜೆ ಏಳು ರನ್, ಟೆವ್ಲಿನ್ ಇಮ್ಲಾಕ್ 12 ರನ್, ವಾರಿಕನ್ ಮೂರು ರನ್, ಆಂಡರ್ಸನ್ ಫಿಲಿಪ್ ಎರಡು ರನ್ ಗಳಿಸಿ ಔಟಾದರು. ಖಾರಿ ಪಿಯರೆ ಶೂನ್ಯಕ್ಕೆ ಔಟಾದರೆ, ಜೇಡನ್ ಸೀಲ್ಸ್ 32 ರನ್ ಬಾರಿಸಿ ಕೊನೆಯ ವಿಕೆಟ್ ರೂಪದಲ್ಲಿ ವಿಂಡೀಸ್ ಇನ್ನಿಂಗ್ಸ್ಗೆ ಅಂತ್ಯಹಾಡಿದರು. ಭಾರತದ ಪರ ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಪಡೆದರೆ, ಸಿರಾಜ್ ಎರಡು ವಿಕೆಟ್, ಜಡೇಜ ಮತ್ತು ಸುಂದರ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Mon, 13 October 25