AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026: 4 ವಿಕೆಟ್ ಉರುಳಿಸಿದ ಶ್ರೇಯಾಂಕ; ವಿಂಡೀಸ್ ವಿರುದ್ಧ ಗೆದ್ದ ಟೀಂ ಇಂಡಿಯಾ

Women’s T20 World Cup 2026 Warm-up: ಮಹಿಳಾ ಟಿ20 ವಿಶ್ವಕಪ್ ಆರಂಭಕ್ಕೆ ಸಿದ್ಧವಾಗಿರುವ ಸಂದರ್ಭದಲ್ಲಿ, ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ 26 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಭಾರ್ತಿ ಫುಲ್ಮಾಲಿ ಅಜೇಯ 56 ರನ್ ಗಳಿಸಿದರೆ, ಆರಂಭಿಕರಾದ ಮಂಧಾನ ಮತ್ತು ಶಫಾಲಿ ಉತ್ತಮ ಕೊಡುಗೆ ನೀಡಿದರು. ಬೌಲಿಂಗ್‌ನಲ್ಲಿ ಶ್ರೇಯಾಂಕ ಪಾಟೀಲ್ 4 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವು ಭಾರತಕ್ಕೆ ವಿಶ್ವಕಪ್‌ಗೆ ಆತ್ಮವಿಶ್ವಾಸ ಹೆಚ್ಚಿಸಿದೆ.

T20 World Cup 2026: 4 ವಿಕೆಟ್ ಉರುಳಿಸಿದ ಶ್ರೇಯಾಂಕ; ವಿಂಡೀಸ್ ವಿರುದ್ಧ ಗೆದ್ದ ಟೀಂ ಇಂಡಿಯಾ
Ind Vs Wi Womens
ಪೃಥ್ವಿಶಂಕರ
|

Updated on: Jun 08, 2026 | 7:45 PM

Share

10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026) ಇದೇ ಜೂನ್ 12 ರಿಂದ ಆರಂಭವಾಗಲಿದೆ. ಈ ಚುಟುಕು ಸಮರಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಇತ್ತ ಎಲ್ಲಾ ತಂಡಗಳು ಕೂಡ ಟಿ20 ವಿಶ್ವಕಪ್​ಗೆ ಆತಿಥ್ಯವಹಿಸಿರುವ ಇಂಗ್ಲೆಂಡ್​ಗೆ ಬಂದಿಳಿದಿವೆ. ಈ ಪಂದ್ಯಾವಳಿ ಆರಂಭಕ್ಕೆ ನಾಲ್ಕು ದಿನಗಳು ಬಾಕಿ ಉಳಿದಿದ್ದು, ಅದಕ್ಕೂ ಮೊದಲು ಎಲ್ಲಾ ತಂಡಗಳು ಅಭ್ಯಾಸ ಪಂದ್ಯದಲ್ಲಿ ನಿರತವಾಗಿವೆ. ಅದರಂತೆ ಸೋಮವಾರ (ಜೂನ್ 8) ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ವಿಂಡೀಸ್ (India Women vs West Indies Warm-up) ತಂಡವನ್ನು 26 ರನ್​ಗಳಿಂದ ಸೋಲಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 8 ವಿಕೆಟ್‌ಗೆ 179 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 153 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

179 ರನ್ ಕಲೆಹಾಕಿದ ಟೀಂ ಇಂಡಿಯಾ

ಈ ಅಭ್ಯಾಸ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಬ್ಯಾಟಿಂಗ್ ಮಾಡಲಿಲ್ಲ. ಇದರ ಹೊರತಾಗಿಯೂ ಭಾರ್ತಿ ಫುಲ್ಮಾಲಿ ಅವರ ಅರ್ಧಶತಕದ ಇನ್ನಿಂಗ್ಸ್ ಹಾಗೂ ಆರಂಭಿಕರು ನೀಡಿದ ಉತ್ತಮ ಆರಂಭದಿಂದ ಭಾರತ ತಂಡ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ಭಾರ್ತಿ ಫುಲ್ಮಾಲಿ 40 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು. ಇದರಲ್ಲಿ 6 ಬೌಂಡರಿ ಮತ್ತು 1 ಸಿಕ್ಸ್ ಕೂಡ ಸೇರಿತ್ತು.

ಉಪನಾಯಕಿ ಸ್ಮೃತಿ ಮಂಧಾನ 23 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ 39 ರನ್ ಬಾರಿಸಿದರೆ, ಶಫಾಲಿ ವರ್ಮಾ 13 ಎಸೆತಗಳಲ್ಲಿ 29 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಆದಾಗ್ಯೂ ಜೆಮಿಮಾ ರೊಡ್ರಿಗಸ್ 7, ಕ್ರಾಂತಿ ಗೌಡ್ 4, ಶ್ರೇಯಾಂಕ ಪಾಟೀಲ್ 2, ರಾಧಾ ಯಾದವ್ 1, ಮತ್ತು ರಿಚಾ ಘೋಷ್ ರನ್ ಗಳಿಸದೆ ಬಹುಬೇಗನೇ ಪೆವಿಲಿಯನ್‌ ಸೇರಿಕೊಂಡರು. ಶ್ರೀ ಚರಣಿ 2 ರನ್ ಗಳಿಸಿ ಅಜೇಯರಾಗಿ ಉಳಿದರು. ಇತ್ತ ವೆಸ್ಟ್ ಇಂಡೀಸ್ ಪರ, ಅಫಿ ಫ್ಲೆಚರ್ 4 ವಿಕೆಟ್ ಪಡೆದರೆ, ಕರಿಷ್ಮಾ ರಾಮ್ ಹರಾಕ್, ಆಲಿಯಾ ಅಲೆನ್ ಮತ್ತು ಡಿಯಾಂಡ್ರಾ ಡಾಟಿನ್ ತಲಾ 1 ವಿಕೆಟ್ ಪಡೆದರು.

Womens T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

4 ವಿಕೆಟ್ ಉರುಳಿಸಿದ ಶ್ರೇಯಾಂಕ

ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 8 ವಿಕೆಟ್‌ಗಳಿಗೆ 153 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಡಿಯಾಂಡ್ರಾ ಡಾಟಿನ್ ಅತ್ಯಧಿಕ 49 ರನ್​ಗಳ ಇನ್ನಿಂಗ್ಸ್ ಆಡಿದರು. ಇವರ ಜೊತೆಗೆ ಶೆಮೈನ್ ಕ್ಯಾಂಪ್‌ಬೆಲ್ 25, ಶೌನಿಶಾ ಹೆಕ್ಟರ್ ಔಟಾಗದೆ 19 ಮತ್ತು ಜನಿಲ್ಲೆ ಗ್ಲಾಸ್ಗೋ 19 ರನ್ ಗಳಿಸಿದರು. ಆಲಿಯಾ ಅಲೆನ್ 13 ರನ್ ಗಳಿಸಿ ಔಟಾದರೆ, ಅಫಿ ಫ್ಲೆಚರ್ ಔಟಾಗದೆ 7 ರನ್ ಗಳಿಸಿದರು. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಶ್ರೇಯಾಂಕ ಪಾಟೀಲ್ 4 ಓವರ್​ಗಳಲ್ಲಿ 36 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರು. ರಾಧಾ ಯಾದವ್​ ಕೂಡ 3 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More