IND vs AUS: ಭಾರತ ಮಹಿಳಾ ತಂಡ ಪ್ರಕಟ: ಶ್ರೇಯಾಂಕಾ ಪಾಟೀಲ್ಗೆ ಇಲ್ಲ ಸ್ಥಾನ
ಭಾರತ ಟಿ20 ತಂಡದ ಖಾಯಂ ಸದಸ್ಯೆ ಶ್ರೇಯಾಂಕಾ ಪಾಟೀಲ್ 3 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದಾಗ್ಯೂ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದು, ಉಪನಾಯಕಿಯಾಗಿ ಸ್ಮೃತಿ ಮಂಧಾನ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕಳೆದ ಒಂದು ವರ್ಷದಿಂದ ತಂಡದಿಂದ ಹೊರಗುಳಿದಿದ್ದ ಹರ್ಲೀನ್ ಡಿಯೋಲ್ ಈ ಸರಣಿಗಾಗಿ ಆಯ್ಕೆಯಾಗಿದ್ದಾರೆ.
ಹರ್ಲೀನ್ ಡಿಯೋಲ್ 2023 ರ ಡಿಸೆಂಬರ್‌ನಲ್ಲಿ ಕೊನೆಯ ಬಾರಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಗೆ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ವರ್ಷದ ಬಳಿಕ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಹರ್ಲೀನ್ ಯಶಸ್ವಿಯಾಗಿದ್ದಾರೆ.
ಇನ್ನು ಟೀಮ್ ಇಂಡಿಯಾ ಟಿ20 ತಂಡದ ಖಾಯಂ ಸದಸ್ಯೆ ಕನ್ನಡತಿ ಶ್ರೇಯಾಂಕಾ ಪಾಟೀಲ್ಗೆ ಈ ಬಾರಿ ಸ್ಥಾನ ನೀಡಲಾಗಿಲ್ಲ. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶ್ರೇಯಾಂಕಾ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ತಿಳಿದು ಬಂದಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಸರಣಿಯ ಮೊದಲೆರಡು ಏಕದಿನ ಪಂದ್ಯಗಳು ಬ್ರಿಸ್ಬೇನ್‌ನ ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ ಡಿಸೆಂಬರ್ 5 ಮತ್ತು ಡಿಸೆಂಬರ್ 8 ರಂದು ನಡೆಯಲಿದ್ದು, ಡಿಸೆಂಬರ್ 11 ರಂದು ಸರಣಿಯ ಅಂತಿಮ ಪಂದ್ಯಕ್ಕಾಗಿ ಪರ್ತ್‌ನ WACA ಮೈದಾನ ಆತಿಥ್ಯವಹಿಸಲಿದೆ. ಈ ಸರಣಿಗಾಗಿ ಭಾರತ ತಂಡ ಹೀಗಿದೆ…
ಭಾರತ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರಿಯಾ ಪುನಿಯಾ, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ರಾಧಾ ಯಾದವ್, ಟಿಟಾಸ್ ಸಾಧು , ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಸೈಮಾ ಠಾಕೂರ್.
ಇದನ್ನೂ ಓದಿ: IPL 2025: ಎಲ್ಲಾ ತಂಡಗಳ ಟಾರ್ಗೆಟ್ ಜೋಸ್ ಬಟ್ಲರ್..!
ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿ ವೇಳಾಪಟ್ಟಿ:
- ಡಿಸೆಂಬರ್ 5: 1ನೇ ಏಕದಿನ – ಅಲನ್ ಬಾರ್ಡರ್ ಫೀಲ್ಡ್, ಬ್ರಿಸ್ಬೇನ್ – 9:50AM IST
- ಡಿಸೆಂಬರ್ 8: 2ನೇ ಏಕದಿನ – ಅಲನ್ ಬಾರ್ಡರ್ ಫೀಲ್ಡ್, ಬ್ರಿಸ್ಬೇನ್ – 5:15AM IST
- ಡಿಸೆಂಬರ್ 11: 3ನೇ ಏಕದಿನ – WACA ಮೈದಾನ, ಪರ್ತ್ – 9:50AM IST