ನೀವು 4-0 ಅಂತರದಿಂದ ಗೆಲ್ಲಲ್ಲ, WTC ಫೈನಲ್ ಮರೆತುಬಿಡಿ: ಸುನಿಲ್ ಗವಾಸ್ಕರ್

India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಪರ್ತ್​ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಮ್ಯಾಚ್​ಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ಹೀಗಾಗಿ ಭಾರತ ತಂಡವನ್ನು ಜಸ್​​ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ.

ನೀವು 4-0 ಅಂತರದಿಂದ ಗೆಲ್ಲಲ್ಲ, WTC ಫೈನಲ್ ಮರೆತುಬಿಡಿ: ಸುನಿಲ್ ಗವಾಸ್ಕರ್
Team India - Sunil Gavaskar
Follow us
ಝಾಹಿರ್ ಯೂಸುಫ್
|

Updated on: Nov 19, 2024 | 8:58 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಆರಂಭಕ್ಕೆ ಇನ್ನುಳಿದಿರುವುದು ಕೇವಲ ದಿನಗಳು ಮಾತ್ರ. ನವೆಂಬರ್ 22 ರಿಂದ ಶುರುವಾಗಲಿರುವ 5 ಪಂದ್ಯಗಳ ಈ ಸರಣಿಯು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಸರಣಿಯನ್ನು ಭಾರತ ತಂಡವು 4-0 ಅಂತರದಿಂದ ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೇರಬಹುದು. ಆದರೆ ಆಸ್ಟ್ರೇಲಿಯಾದಲ್ಲಿ ಇಂತಹದೊಂದು ಗೆಲುವು ಅಸಾಧ್ಯ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್.

ಖಾಸಗಿ ಚಾನೆಲ್​ ಚರ್ಚೆಯಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾವನ್ನು 4-0 ಅಂತರದಿಂದ ಸೋಲಿಸುವುದು ಅಸಾಧ್ಯದ ಮಾತು. ಹೀಗಾಗಿ ಅಮೋಘ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರುವ ಕನಸನ್ನು ನೀವು ಬದಿಗಿಡಿ. ಬದಲಾಗಿ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುವುದಕ್ಕೆ ಪ್ರಯತ್ನ ಮಾಡಿ ಎಂದು ಗವಾಸ್ಕರ್ ಹೇಳಿದ್ದಾರೆ.

ಮಾತು ಮುಂದುವರೆಸಿದ ಗವಾಸ್ಕರ್, ಟೀಮ್ ಇಂಡಿಯಾ ಅಸಂಭವ ಗೆಲುವನ್ನು ತನ್ನದಾಗಿಸಿಕೊಳ್ಳುವ ಬಯಕೆಯನ್ನು ಬಿಟ್ಟು ಬಿಡುವುದು ಉತ್ತಮ. 4-0 ಅಂತರದ ಗೆಲುವಿನ ನಿರೀಕ್ಷೆ ಬಿಟ್ಟು, ಎರಡು ಅಥವಾ ಮೂರು ಪಂದ್ಯಗಳನ್ನು ಗೆದ್ದರೂ ಅದು ಗಮನಾರ್ಹ ಸಾಧನೆಯಾಗಲಿದೆ. ಈ ಮೂಲಕ ಟೀಮ್ ಇಂಡಿಯಾ ಸರಣಿ ಗೆಲುವಿನತ್ತ ಹೆಚ್ಚಿನ ಗಮನಹರಿಸಬೇಕೆಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ್ ವಿರುದ್ಧ ಆಸ್ಟ್ರೇಲಿಯಾಗೆ ದಾಖಲೆ ವಿಜಯ

ಟೀಮ್ ಇಂಡಿಯಾದ WTC ಫೈನಲ್ ಹಾದಿ:

  1. 5-0 ಅಥವಾ 4-0: ಭಾರತ ತಂಡವು ಆಸ್ಟ್ರೇಲಿಯಾವನ್ನು 5-0 ಅಥವಾ 4-0 ಅಂತರದಿಂದ ಮಣಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆಡುವುದು ಖಚಿತವಾಗಲಿದೆ. ಆದರೆ ಈ ಸರಣಿಯಲ್ಲಿ ಟೀಮ್ ಇಂಡಿಯಾ ಯಾವುದೇ ಪಂದ್ಯವನ್ನು ಸೋಲಬಾರದು. ಅಂದರೆ 5 ಮ್ಯಾಚ್​ಗಳ ಸರಣಿಯಲ್ಲಿ 4 ಜಯ ಹಾಗು 1 ಡ್ರಾ ಸಾಧಿಸುವುದು ಅನಿವಾರ್ಯ.
  2. 4-1, 3-1, 3-0: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 4-1 ಅಂತರದಿಂದ ಸರಣಿ ಗೆದ್ದರೆ ಅಥವಾ 3-1, 3-0 ಅಂತರದಿಂದ ಜಯ ಸಾಧಿಸಿದರೆ, ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ಸರಣಿಯ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಇಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾ 4-1, 3-1, 3-0 ಅಂತರದಿಂದ ಗೆದ್ದರೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಲಿದೆ.
  3. 2-0: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯಗಳಲ್ಲಿ ಜಯ ಸಾಧಿಸಿ, 3 ಮ್ಯಾಚ್​ಗಳನ್ನು ಡ್ರಾ ಮಾಡಿಕೊಂಡರೂ, ಫೈನಲ್​ ಪ್ರವೇಶಿಸಲು ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ಫಲಿತಾಂಶ ಪ್ರಮುಖ ಪಾತ್ರವಹಿಸಲಿದೆ. ಇಲ್ಲಿ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ವಿರುದ್ಧ 1 ಜಯ ಸಾಧಿಸುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಲಿದೆ. ಇದರಿಂದ ಕಿವೀಸ್ ಪಡೆಯನ್ನು ಹಿಂದಿಕ್ಕಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಬಹುದು.
  4. 3-2: ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ 3-2 ಅಂತರದಿಂದ ಜಯ ಸಾಧಿಸಿದರೆ, ಎರಡು ತಂಡಗಳ ಫಲಿತಾಂಶ ನಿರ್ಣಾಯಕವಾಗಲಿದೆ. ಅಂದರೆ ಇಲ್ಲಿ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ವಿರುದ್ಧ 1 ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಬೇಕು. ಹಾಗೆಯೇ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್​ನಲ್ಲಿ ಡ್ರಾ ಸಾಧಿಸುವುದು ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯವಾಗಲಿದೆ.
‘ಹೆಂಗ್ ಮಾತಾಡ್ತಾಳೋ ಯಪ್ಪಾ’; ಶೋಭಾ ಕೂಗಾಟ ನೋಡಿ ಹನುಮಂತ ಸೈಲೆಂಟ್
‘ಹೆಂಗ್ ಮಾತಾಡ್ತಾಳೋ ಯಪ್ಪಾ’; ಶೋಭಾ ಕೂಗಾಟ ನೋಡಿ ಹನುಮಂತ ಸೈಲೆಂಟ್
ಪತ್ನಿ ಗರ್ಭವತಿಯಾಗಿದ್ದಾಗ ಮನೆಗೆ ಅಡಿಪಾಯ ಹಾಕಬಹುದಾ? ವಿಡಿಯೋ ನೋಡಿ
ಪತ್ನಿ ಗರ್ಭವತಿಯಾಗಿದ್ದಾಗ ಮನೆಗೆ ಅಡಿಪಾಯ ಹಾಕಬಹುದಾ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ಆರ್ಥಿಕ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರ್ಥಿಕ ಯೋಗವಿದೆ
ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ವಿಚಾರಣೆ ನಂತರ ಮಾತಾಡದೆ ಕಾರಲ್ಲಿ ಹೊರಟುಹೋದ ಮಲ್ಲಿಕಾರ್ಜುನ ಸ್ವಾಮಿ
ವಿಚಾರಣೆ ನಂತರ ಮಾತಾಡದೆ ಕಾರಲ್ಲಿ ಹೊರಟುಹೋದ ಮಲ್ಲಿಕಾರ್ಜುನ ಸ್ವಾಮಿ
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್