AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಶಾ ರವಿಕೃಷ್ಣನ್ ಕನ್ನಡದವರಲ್ಲ; ಅಚ್ಚರಿಯ ವಿಚಾರ ರಿವೀಲ್ ಮಾಡಿದ ರೌಡಿ ಬೇಬಿ

ನಿಶಾ ರವಿಕೃಷ್ಣನ್ ಅವರು ನಿಶಾ ಮಿಲನ್ ಎಂದು ಕೂಡ ಜನಪ್ರಿಯತೆ ಪಡೆದವರು. ಅವರು 2018ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಸರ್ವಮಂಗಲ ಮಾಂಗಲ್ಯೆ’ ಅವರು ನಟಿಸಿದ ಮೊದಲ ಧಾರಾವಾಹಿ. ಈ  ಧಾರಾವಾಹಿ 2018ರಿಂದ 2019ರವರೆಗೆ ಪ್ರಸಾರ ಕಂಡಿತು.

ನಿಶಾ ರವಿಕೃಷ್ಣನ್ ಕನ್ನಡದವರಲ್ಲ; ಅಚ್ಚರಿಯ ವಿಚಾರ ರಿವೀಲ್ ಮಾಡಿದ ರೌಡಿ ಬೇಬಿ
ನಿಶಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Nov 19, 2024 | 9:23 AM

Share

ನಿಶಾ ರವಿಕೃಷ್ಣನ್ ಅವರು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈ ಮೊದಲು ಅವರು ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈಗ ‘ಅಣ್ಣಯ್ಯ’ ಹೆಸರಿನ ಧಾರಾವಾಹಿ ಮಾಡುತ್ತಿದ್ದಾರೆ. ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ಆದರೆ, ಅವರು ಕನ್ನಡದವರು ಅಲ್ಲ ಎನ್ನುವ ವಿಚಾರ ನಿಮಗೆ ಗೊತ್ತೇ? ಆ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ ಕೇಳಿ.

ನಿಶಾ ರವಿಕೃಷ್ಣನ್ ಅವರು ನಿಶಾ ಮಿಲನ್ ಎಂದು ಕೂಡ ಜನಪ್ರಿಯತೆ ಪಡೆದವರು. ಅವರು 2018ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಸರ್ವಮಂಗಲ ಮಾಂಗಲ್ಯೆ’ ಅವರು ನಟಿಸಿದ ಮೊದಲ ಧಾರಾವಾಹಿ. ಈ  ಧಾರಾವಾಹಿ 2018ರಿಂದ 2019ರವರೆಗೆ ಪ್ರಸಾರ ಕಂಡಿತು. ಸ್ಟಾರ್ ಸುವರ್ಣದಲ್ಲಿ ಈ ಧಾರಾವಾಹಿ ಪ್ರಸಾರ ಕಾಣುತ್ತಿತ್ತು. 2019ರಲ್ಲಿ ಅವರಿಗೆ ಸಿಕ್ಕಿದ್ದೇ ‘ಗಟ್ಟಿಮೇಳ’ ಧಾರಾವಾಹಿ.

ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಿಶಾ ಅವರು ಅಮೂಲ್ಯ ಹೆಸರಿನ ಪಾತ್ರ ಮಾಡಿದರು. ಈ ಧಾರಾವಾಹಿ ಮೂಲಕ ರೌಡಿ ಬೇಬಿ ಎಂದೇ ಫೇಮಸ್ ಆದರು. ಕಥಾ ನಾಯಕನ ಜೊತೆಗಿನ ಕೆಮಿಸ್ಟ್ರಿ ಕಾರಣಕ್ಕೆ ಅವರು ಸಾಕಷ್ಟು ಸುದ್ದಿ ಆದರು. ಈ ಧಾರಾವಾಹಿ 2019ರಿಂದ 2024ರವರೆಗೆ ಪ್ರಸಾರ ಕಂಡಿತು. ಈ ವರ್ಷ ಧಾರಾವಾಹಿ ಪ್ರಸಾರವನ್ನು ಅಂತ್ಯ ಮಾಡಿದೆ. ಆ ಬಳಿಕ ಒಂದು ತೆಲುಗು ಧಾರಾವಾಹಿಯಲ್ಲಿ ನಟಿಸಿದ್ದರು.

ಸದ್ಯ ನಿಶಾ ಅವರು ‘ಅಮ್ಮಯ್ಯಿಗಾರು’ ಹೆಸರಿನ ತೆಲುಗು ಧಾರಾವಾಹಿ ಹಾಗೂ ‘ಅಣ್ಣಯ್ಯ’ ಹೆಸರಿನ ಕನ್ನಡದ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಅವರು ಮೂಲ ಮಲಯಾಳಿ. ನಿಶಾ ಅವರ ಕುಟುಂಬ ಮಲಯಾಳಿ ಹಿನ್ನೆಲೆ ಹೊಂದಿದೆ. ಆದರೆ, ಹುಟ್ಟಿದ್ದು ಬೆಂಗಳೂರೇ ಆಗಿದ್ದರಿಂದ ಅವರನ್ನು ಎಲ್ಲರೂ ಕನ್ನಡವರು ಎಂದು ಗುರುತಿಸುತ್ತಾರೆ. ಅಲ್ಲದೆ, ಅವರಿಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ.

ಇದನ್ನೂ ಓದಿ: ಮುದ್ದು ಮುದ್ದಾಗಿ ಪೋಸ್ ನೀಡಿದ ನಟಿ ನಿಶಾ ರವಿಕೃಷ್ಣನ್; ಇಲ್ಲಿದೆ ಫೋಟೋ ಗ್ಯಾಲರಿ

‘ಅಣ್ಣಯ್ಯ’ ಧಾರಾವಾಹಿಗೆ ಪ್ರಮೋದ್ ಶೆಟ್ಟಿ ನಿರ್ಮಾಣ ಇದೆ. ಈ ಧಾರಾವಾಹಿಯಲ್ಲಿ ಅವರು ಡಾ. ಪಾರ್ವತಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ಧಾರಾವಾಹಿ ಕೆಲವೊಮ್ಮೆ ಟಾಪ್ ಐದರಲ್ಲಿ ಸ್ಥಾನ ಪಡೆದುಕೊಳ್ಳುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:10 am, Tue, 19 November 24

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ