IPL 2021: ಈ ಸಲ ಕಪ್ ನಮ್ದೆ: RCB ಹೊಸ ಆಟಗಾರರಿಂದ ವಿಶೇಷ ಸಂದೇಶ
RCB: IPL 2021ರ ದ್ವಿತಿಯಾರ್ಧ ಸೆಪ್ಟೆಂಬರ್ 19 ರಂದು ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ - ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಅಕ್ಟೋಬರ್ 15 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) ದ್ವಿತಿಯಾರ್ಧ ರಂಗೇರಲು ಇನ್ನು ಕೆಲವು ದಿನಗಳು ಮಾತ್ರ ಉಳಿದಿವೆ. ಉಳಿದ 31 ಪಂದ್ಯಗಳಿಗಾಗಿ ಈಗಾಗಲೇ ಮುಂಬೈ ಇಂಡಿಯನ್ಸ್ (Mumbai Indians), ಡೆಲ್ಲಿ ಕ್ಯಾಪಿಟಲ್ಸ್ (Delhi capitals) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆಟಗಾರರು ಯುಎಇಗೆ ಬಂದಿಳಿದಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರರು ಕೂಡ ಶೀಘ್ರದಲ್ಲೇ ದುಬೈ ವಿಮಾನ ಹತ್ತಲಿದ್ದಾರೆ. ಈ ಬಾರಿ ಆರ್‌ಸಿಬಿ ತಂಡದಲ್ಲಿ ಮೂವರು ಹೊಸ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಕಳೆದ ಬಾರಿ ತಂಡದಲ್ಲಿದ್ದ ಆ್ಯಡಂ ಝಂಪಾ ಬದಲಿಗೆ ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗ (Wanindu Hasaranga) ಡೇನಿಯಲ್ ಸ್ಯಾಮ್ಸ್ ಬದಲಿಗೆ ದುಷ್ಮಂತ ಚಮೀರಾ (Dushmantha Chameera) ಹಾಗೂ ಫಿನ್ ಅಲೆನ್ ಬದಲಿಗೆ ಟಿಮ್ ಡೇವಿಡ್ (Tim David) ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಇಬ್ಬರು ಶ್ರೀಲಂಕಾ ಆಟಗಾರರ ವೀಡಿಯೋವನ್ನು ಆರ್‌ಸಿಬಿ ಹಂಚಿಕೊಂಡಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಲು ಇಬ್ಬರು ಆಟಗಾರರು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ. ಆರ್‌ಸಿಬಿ ಬಗ್ಗೆ ಮಾತನಾಡಿರುವ ವನಿಂದು ಹಸರಂಗ, ನಾನು ಆರ್‌ಸಿಬಿ ಸೇರಲು ಉತ್ಸುಕನಾಗಿದ್ದೇನೆ. ಇದೊಂದು ಫನ್ ರೈಡ್ ಆಗಿರಲಿದೆ. ನೀವು ಕೂಡ ನಮ್ಮೊಂದಿಗೆ ಸೇರಿಕೊಳ್ಳಿ. ಹಾಗೆಯೇ ನಮ್ಮನ್ನು ಹುರಿದುಂಬಿಸಿ ಎಂದು ಶ್ರೀಲಂಕಾದ ಲೆಗ್ ಸ್ಪಿನ್ನರ್ ಹೇಳಿದ್ದಾರೆ.
ಇನ್ನು ವೀಡಿಯೋದಲ್ಲಿ ಮಾತನಾಡಿದ ದುಷ್ಮಂತ ಚಮೀರಾ, ಅಭಿಮಾನಿಗಳಿಗೆಲ್ಲರಿಗೂ ನಮಸ್ತೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬಳಗಕ್ಕೆ ಸೇರಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ . ವಿರಾಟ್, ಎಬಿಡಿ, ಮ್ಯಾಕ್ಸ್‌ವೆಲ್, ಚಹಲ್ ಮತ್ತು ಇತರ ಪ್ರತಿಭಾವಂತ ಆಟಗಾರರ ಜೊತೆಯಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ. ನಾನು ಪ್ರತಿಬಾರಿಯು ಶೇ. 100 ರಷ್ಟು ಪ್ರದರ್ಶನ ನೀಡುತ್ತೇನೆ. ಎಲ್ಲರೂ ಸುರಕ್ಷಿತರಾಗಿರಿ. ಮಾಸ್ಕ್ ಧರಿಸಿ, ಆರ್‌ಸಿಬಿಗೆ ಬೆಂಬಲ ನೀಡಿ. ಶೀಘ್ರದಲ್ಲೇ ಎಲ್ಲರನ್ನು ಭೇಟಿ ಮಾಡುತ್ತೇವೆ ಎಂದು ಚಮೀರಾ ತಿಳಿಸಿದ್ದಾರೆ.
A message from our Sri Lankan stars before they join us for the second half of #IPL2021. ?
Drop a ❤️ to welcome them to the family, 12th Man Army! #PlayBold #WeAreChallengers #NowAChallenger #ClassOf2021 pic.twitter.com/2I0PqPfFzA
— Royal Challengers Bangalore (@RCBTweets) August 24, 2021
IPL 2021ರ ದ್ವಿತಿಯಾರ್ಧ ಸೆಪ್ಟೆಂಬರ್ 19 ರಂದು ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ – ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹಾಗೆಯೇ ಫೈನಲ್ ಪಂದ್ಯವು ಅಕ್ಟೋಬರ್ 15 ರಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದನ್ನೂ ಓದಿ: ಪೆಟ್ರೋಲ್, ಡಿಸೇಲ್ ಹಾಕಬೇಕಿಲ್ಲ, ಚಾರ್ಜ್ ಕೂಡ ಮಾಡಬೇಕಿಲ್ಲ: ಇದು ಮಾರುತಿ ಸುಜುಕಿ ಹೊಸ ಕಾರು
ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!
ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!
(IPL 2021: RCB’s Wanindu Hasaranga and Dushmantha Chameera special message)