AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: 10 ಪಟ್ಟು ಮೂಲಬೆಲೆ ಹೆಚ್ಚಿಸಿಕೊಂಡ ಇಬ್ಬರು, ಹಿಂದಿನ ಮೊತ್ತದಲ್ಲೇ ಉಳಿದ ಮತ್ತಿಬ್ಬರು

IPL 2022 Mega Auction: ದೇವದತ್ ಪಡಿಕ್ಕಲ್ ಅವರನ್ನು 2020 ರಲ್ಲಿ RCB 20 ಲಕ್ಷದ ಮೂಲ ಬೆಲೆಗೆ ಖರೀದಿಸಿತು. ಅಲ್ಲದೆ ಮೊದಲ ಸೀಸನ್​ನಲ್ಲೇ ಆರ್​ಸಿಬಿ ಪರ 15 ಪಂದ್ಯಗಳಲ್ಲಿ 473 ರನ್ ಗಳಿಸಿದ್ದರು.

IPL 2022: 10 ಪಟ್ಟು ಮೂಲಬೆಲೆ ಹೆಚ್ಚಿಸಿಕೊಂಡ ಇಬ್ಬರು, ಹಿಂದಿನ ಮೊತ್ತದಲ್ಲೇ ಉಳಿದ ಮತ್ತಿಬ್ಬರು
IPL 2022
TV9 Web
| Updated By: ಝಾಹಿರ್ ಯೂಸುಫ್|

Updated on: Jan 22, 2022 | 5:37 PM

Share

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಭಾಗವಹಿಸಲು 1214 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಹರಾಜಿಗೂ ಮುನ್ನ ಬಿಸಿಸಿಐ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಇನ್ನು ಕಳೆದ ಸೀಸನ್​ನಲ್ಲಿ ಕಡಿಮೆ ಮೊತ್ತ ಪಡೆದಿದ್ದ ಕೆಲ ಆಟಗಾರರು ಈ ಬಾರಿ ದೊಡ್ಡ ಮೊತ್ತವನ್ನು ಮೂಲಬೆಲೆಯಾಗಿ ಘೋಷಿಸಿಕೊಂಡಿದೆ. ಇನ್ನು ಕೆಲ ಆಟಗಾರರು ಕಳೆದ ಸೀಸನ್​ನಲ್ಲಿನ ಬೇಸ್ ಪ್ರೈಸ್​ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. ಅದರಂತೆ 49 ಆಟಗಾರರು 2 ಕೋಟಿ ರೂ ಮೂಲ ಬೆಲೆ ಘೋಷಿಸಿದ್ದಾರೆ. ಈ ಪಟ್ಟಿಯಲ್ಲಿ 17 ಭಾರತೀಯರಿದ್ದು, 32 ವಿದೇಶಿ ಆಟಗಾರರು ಸೇರಿದ್ದಾರೆ. ಹಾಗೆಯೇ ಈ ಪಟ್ಟಿಯಲ್ಲಿ ಆರ್​ಸಿಬಿ ತಂಡದ ಮಾಜಿ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ಹರ್ಷಲ್ ಪಟೇಲ್ ಇರುವುದು ವಿಶೇಷ. ಅಂದರೆ ಕಳೆದ ಸೀಸನ್​ನಲ್ಲಿ 20 ಲಕ್ಷ ರೂ. ಪಡೆದಿದ್ದ ಹರ್ಷಲ್ ಪಟೇಲ್ ಹಾಗೂ ದೇವದತ್ ಪಡಿಕ್ಕಲ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಅದರಂತೆ ಆರ್​ಸಿಬಿ ತಂಡದ ಈ ಇಬ್ಬರು ಮಾಜಿ ಆಟಗಾರರ ಖರೀದಿಗೆ 2 ಕೋಟಿಯಿಂದ ಬಿಡ್ಡಿಂಗ್ ಶುರುವಾಗಲಿದೆ.

ದೇವದತ್ ಪಡಿಕ್ಕಲ್ ಅವರನ್ನು 2020 ರಲ್ಲಿ RCB 20 ಲಕ್ಷದ ಮೂಲ ಬೆಲೆಗೆ ಖರೀದಿಸಿತು. ಅಲ್ಲದೆ ಮೊದಲ ಸೀಸನ್​ನಲ್ಲೇ ಆರ್​ಸಿಬಿ ಪರ 15 ಪಂದ್ಯಗಳಲ್ಲಿ 473 ರನ್ ಗಳಿಸಿದ್ದರು. ಪಡಿಕ್ಕಲ್ ಅವರ ಪ್ರದರ್ಶನದ ಆಧಾರದ ಮೇಲೆ ಆರ್‌ಸಿಬಿ ಅರ್ಹತಾ ಸುತ್ತಿಗೆ ಪ್ರವೇಶಿಸಿತು. ಇನ್ನು ಕಳೆದ ಐಪಿಎಲ್ ನಲ್ಲೂ ದೇವದತ್ ಬ್ಯಾಟ್ ಬಿರುಸಾಗಿ ಬ್ಯಾಟ್ ಬೀಸಿದ್ದರು. 14 ಪಂದ್ಯಗಳಲ್ಲಿ ಶತಕದ ನೆರವಿನಿಂದ 411 ರನ್ ಗಳಿಸಿದ್ದರು. ಹೀಗಾಗಿ ಈ ಬಾರಿ ದೇವದತ್ ಪಡಿಕ್ಕಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದರು.

ಮತ್ತೊಂದೆಡೆ ಕಳೆದ ಸೀಸನ್​ ಐಪಿಎಲ್​ನ ಅತ್ಯಂತ ಯಶಸ್ವಿ ವೇಗಿ ಹರ್ಷಲ್ ಪಟೇಲ್ ಕೂಡ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2021 ರ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಹರ್ಷಲ್ ಪಟೇಲ್ ಅವರನ್ನು ಆರ್​ಸಿಬಿ ಕೇವಲ 20 ಲಕ್ಷ ರೂ.ಗೆ ವರ್ಗಾವಣೆ ಮಾಡಿಕೊಂಡಿತ್ತು. ಅದರಂತೆ ಕಳೆದ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ 15 ಪಂದ್ಯಗಳಲ್ಲಿ ಒಟ್ಟು 32 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ವಿನ್ನರ್ ಆಗಿದ್ದರು. ಇದೀಗ 2 ಕೋಟಿ ರೂ ಮೂಲ ಬೆಲೆಯೊಂದಿಗೆ ಹರ್ಷಲ್ ಪಟೇಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಆದರೆ ಅಚ್ಚರಿ ಎಂದರೆ ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ಪರ 5.25 ಕೋಟಿ ಪಡೆದಿದ್ದ ಶಾರೂಖ್ ಖಾನ್ ಈ ಬಾರಿ ಕೂಡ 20 ಲಕ್ಷ ರೂ. ಮೂಲ ಬೆಲೆಯೊಂದಿಗೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯಶಸ್ವಿ ವೇಗಿ ಅವೇಶ್ ಖಾನ್ ಕೂಡ ಕೇವಲ 20 ಲಕ್ಷ ರೂ. ಮೂಲ ಬೆಲೆ ಘೋಷಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಅವೇಶ್ ಖಾನ್ ಕಳೆದ ಸೀಸನ್​ನಲ್ಲಿ 24 ವಿಕೆಟ್ ಉರುಳಿಸಿದ್ದರು. ಈ ಮೂಲಕ ಐಪಿಎಲ್ 2021 ರ 2ನೇ ಯಶಸ್ವಿ ಬೌಲರ್ ಎನಿಸಿಕೊಂಡರು.

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ
ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ
ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ
ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ
ಬಿಹಾರದಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಬಿಹಾರದಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ