IPL 2022: ‘ಡೆಲ್ಲಿ ಕ್ಯಾಪಿಟಲ್ಸ್​’ ತಂಡದ ಆಟಗಾರನಿಗೆ ಕೊರೋನಾ..!

IPL 2022: 'ಡೆಲ್ಲಿ ಕ್ಯಾಪಿಟಲ್ಸ್​' ತಂಡದ ಆಟಗಾರನಿಗೆ ಕೊರೋನಾ..!
DC

IPL 2022: ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಅವರ ಕುಟುಂಬದ ಸದಸ್ಯರೂ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಪಾಂಟಿಂಗ್ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು.

TV9kannada Web Team

| Edited By: Zahir PY

May 08, 2022 | 2:28 PM

ಐಪಿಎಲ್ ಸೀಸನ್​ 15 ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೊರೋನಾತಂಕ ಮುಂದುವರೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ನ ಮತ್ತೊಬ್ಬ ಸದಸ್ಯ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಡೆಲ್ಲಿ ತಂಡದ ನೆಟ್ ಬೌಲರ್​ ಒಬ್ಬರಲ್ಲಿ ಕೊರೋನಾ ಸೋಂಕು ಕಂಡು ಬಂದಿದ್ದು, ಹೀಗಾಗಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಆತನೊಂದಿಗೆ ರೂಮ್‌ಮೇಟ್‌ ಆಗಿದ್ದ ಕೆಲ ಆಟಗಾರನನ್ನೂ ಸಹ ಪ್ರತ್ಯೇಕವಾಗಿ ಇರಿಸಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಆಡಲಿದ್ದು, ಇದೀಗ ತಂಡದ ಸದಸ್ಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

ಬಿಸಿಸಿಐನ ಕೊರೋನಾ ಪ್ರೋಟೋಕಾಲ್ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಈಗ ಮತ್ತೊಮ್ಮೆ ಕೊರೋನಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅಲ್ಲಿಯವರೆಗೆ ಅವರ ಎಲ್ಲಾ ಆಟಗಾರರು ಪ್ರತ್ಯೇಕವಾಗಿ ತಮ್ಮ ಹೋಟೆಲ್ ಕೊಠಡಿಗಳಲ್ಲಿ ಇರಲಿದ್ದಾರೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಸದ್ಯ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋತಿದ್ದಾರೆ.

ಇದಕ್ಕೂ ಮೊದಲು, ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಅವರ ಕುಟುಂಬದ ಸದಸ್ಯರೂ ಕೊರೋನಾ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಪಾಂಟಿಂಗ್ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದರು. ಹಾಗೆಯೇ ಕಳೆದ ತಿಂಗಳು, ಡೆಲ್ಲಿ ತಂಡದ ಇಬ್ಬರು ವಿದೇಶಿ ಆಟಗಾರರಾದ ಟಿಮ್ ಸೀಫರ್ಟ್ ಮತ್ತು ಮಿಚೆಲ್ ಮಾರ್ಷ್ ಹಾಗೂ ಸಹಾಯಕ ಸಿಬ್ಬಂದಿ ಸೇರಿದಂತೆ ನಾಲ್ವರು ಕೊರೋನಾ ಸೋಂಕಿಗೆ ಒಳಗಾಗಿದ್ದರು.

ಐಪಿಎಲ್ 2022 ರಲ್ಲಿ 10 ತಂಡಗಳು ಆಡುತ್ತಿದ್ದರೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮಾತ್ರ ಕೊರೋನಾ ಸೋಂಕಿಗೆ ಗಮನಿಸಬೇಕಾದ ಸಂಗತಿ. ಈ ಕಾರಣದಿಂದಾಗಿ, ಅವರ ಪಂದ್ಯಗಳ ವೇಳಾಪಟ್ಟಿಯನ್ನು ಈ ಮೊದಲು ಬದಲಾಯಿಸಲಾಗಿತ್ತು. ಪುಣೆಯಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಮುಂಬೈನ ಬ್ರಬೋರ್ನ್ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೊಮ್ಮೆ ತಂಡದ ನೆಟ್​ ಬೌಲರ್​ ಸೋಂಕಿಗೆ ಒಳಗಾಗಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇದಾಗ್ಯೂ ಇಂದಿನ ಪಂದ್ಯ ನಿಗದಿಯಂತೆ ನಡೆಯುವುದು ಬಹುತೇಕ ಖಚಿತ ಎನ್ನಬಹುದು.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada