AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

R Ashwin: ಕಿಂಗ್ ಕೊಹ್ಲಿ ಮತ್ತೆ RCB ನಾಯಕರಾಗಲಿದ್ದಾರೆ..!

IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್.

R Ashwin: ಕಿಂಗ್ ಕೊಹ್ಲಿ ಮತ್ತೆ RCB ನಾಯಕರಾಗಲಿದ್ದಾರೆ..!
TV9 Web
| Updated By: ಝಾಹಿರ್ ಯೂಸುಫ್|

Updated on: Mar 23, 2022 | 3:29 PM

Share

ಪ್ರತಿಷ್ಠಿತ T20 ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನ 15ನೇ ಸೀಸನ್​ನ (IPL 2022) ಆರಂಭಕ್ಕೆ ದಿನಗಳು ಮಾತ್ರ ಉಳಿದಿವೆ . ಮೊದಲ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ಮುಖಾಮುಖಿಯಾಗಲಿದೆ. ಈ ಬಾರಿ ಮೆಗಾ ಹರಾಜು ನಡೆದಿರುವ ಕಾರಣ ಬಹುತೇಕ ತಂಡಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಆರ್​ಸಿಬಿ (RCB) ತಂಡದ ನಾಯಕನೇ ಬದಲಾಗಿದೆ. 2013 ರಿಂದ ಆರ್​ಸಿಬಿ ತಂಡದ ಚುಕ್ಕಾಣಿ ಹಿಡಿದಿದ್ದ ವಿರಾಟ್ ಕೊಹ್ಲಿ ಬದಲಿಗೆ ಈ ಬಾರಿ ಆರ್​ಸಿಬಿ ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್​ಸಿಬಿ ತಂಡದ ನಾಯಕರಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್.

ಈ ಬಾರಿ ಆರ್​ಸಿಬಿ ಫಾಫ್ ಡುಪ್ಲೆಸಿಸ್​ ಅವರನ್ನು ಬರೋಬ್ಬರಿ 7 ಕೋಟಿ ರೂ. ನೀಡಿ ಖರೀದಿಸಿತ್ತು. ನಿರೀಕ್ಷೆಯಂತೆ ನಾಯಕನ ಸ್ಥಾನವನ್ನೂ ಕೂಡ ನೀಡಲಾಯಿತು. ಆದರೆ ಅವರು ಎಷ್ಟು ವರ್ಷಗಳ ಕಾಲ ತಂಡದಲ್ಲಿ ಇರಲಿದ್ದಾರೆ ಎನ್ನಲಾಗುವುದಿಲ್ಲ. ಹೀಗಾಗಿಯೇ ಮುಂದಿನ ವರ್ಷವೇ ಆರ್​ಸಿಬಿ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅಶ್ವಿನ್, ಫಾಫ್ ಡುಪ್ಲೆಸಿಸ್ ಅವರ ಐಪಿಎಲ್ ವೃತ್ತಿಜೀವನ ಅಂತ್ಯದ ಹಂತದಲ್ಲಿದೆ. ಅವರು ಇನ್ನೂ ಎರಡು ಅಥವಾ ಮೂರು ವರ್ಷಗಳ ಕಾಲ ಆಡಬಹುದು. ಇದೀಗ ಆರ್‌ಸಿಬಿ ಅವರನ್ನು ನಾಯಕನನ್ನಾಗಿ ಮಾಡಿದೆ. ಇದು ಉತ್ತಮ ನಿರ್ಧಾರ. ಏಕೆಂದರೆ ಫಾಫ್ ತುಂಬಾ ಅನುಭವಿ, ಉತ್ತಮ ನಾಯಕ. ಅವರ ನಾಯಕತ್ವ ಕೌಶಲ್ಯದಲ್ಲಿ ಎಸ್‌ಎಸ್ ಧೋನಿ ಅವರನ್ನು ಕಾಣಬಹುದು.

ಆದರೆ ಈಗ ಫಾಫ್ ಡುಪ್ಲೆಸಿಸ್ ಕ್ರಿಕೆಟ್ ಕೆರಿಯರ್​ನ ಅಂತಿಮ ಹಂತದಲ್ಲಿರುವ ಕಾರಣ ಮುಂದಿನ ವರ್ಷ ಆರ್​ಸಿಬಿ ನಾಯಕ ಬದಲಾಗಬಹುದು. ಏಕೆಂದರೆ ವಿರಾಟ್ ಕೊಹ್ಲಿ ಒತ್ತಡದ ಕಾರಣದಿಂದಾಗಿ ಆರ್​ಸಿಬಿ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಇದೀಗ ಅವರು ಯಾವುದೇ ತಂಡದ ನಾಯಕತ್ವ ಹೊಂದಿಲ್ಲ. ಈ ಒಂದು ವರ್ಷ ಅವರ ಸಂಪೂರ್ಣ ಫ್ರಿಯಾಗಲಿದ್ದಾರೆ. ಆದರೆ ಡುಪ್ಲೆಸಿಸ್ ಮುಂದಿನ ವರ್ಷಗಳಲ್ಲಿ ನಿವೃತ್ತಿ ನೀಡಬಹುದು. ಹಾಗಾಗಿ ಐಪಿಎಲ್ 2023 ರಲ್ಲಿ ಆರ್​ಸಿಬಿ ಮತ್ತೆ ವಿರಾಟ್ ಕೊಹ್ಲಿಯನ್ನು ಆರ್​ಸಿಬಿ ತಂಡದ ನಾಯಕನಾಗಿ ನೇಮಿಸಲಿದೆ ಎಂದು ಅಶ್ವಿನ್ ಹೇಳಿದ್ದಾರೆ.

ಒಟ್ಟಿನಲ್ಲಿ ಫಾಫ್ ಡುಪ್ಲೆಸಿಸ್​ ಅವರ ಈ ವರ್ಷದ ಪ್ರದರ್ಶನ ಹಾಗೂ ನಾಯಕತ್ವ ಅವರನ್ನು ಆರ್​ಸಿಬಿ ತಂಡವು ಉಳಿಸಿಕೊಳ್ಳಲಿದೆಯಾ ಎಂಬುದನ್ನು ನಿರ್ಧರಿಸಲಿದೆ. ಒಂದು ವೇಳೆ ಡುಪ್ಲೆಸಿಸ್ ಬ್ಯಾಟಿಂಗ್ ಹಾಗೂ ನಾಯಕತ್ವದಲ್ಲಿ ವಿಫಲರಾದರೆ, ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ಮತ್ತೆ ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ ಪಟ್ಟ ನೀಡಿದರೂ ಅಚ್ಚರಿಪಡಬೇಕಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಲುವ್ನಿತ್ ಸಿಸೋಡಿಯಾ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

(IPL 2022: Virat Kohli Might Captain RCBFrom IPL 2023 – R Ashwin)