IPL 2023: ಪಂಜಾಬ್ ಕಿಂಗ್ಸ್ಗೆ ಬಿಗ್ ಶಾಕ್; ಸ್ಟಾರ್ ಓಪನರ್ ಔಟ್! ಮತ್ತಿಬ್ಬರಿಗೆ ಗ್ರೀನ್ ಸಿಗ್ನಲ್
IPL 2023: ಒಂದೆಡೆ, ಜಾನಿ ಬೈರ್‌ಸ್ಟೋಗೆ ಎನ್‌ಒಸಿ ನೀಡದಿದ್ದರೂ ಇಸಿಬಿ ಐಪಿಎಲ್‌ನಲ್ಲಿ ಆಡಲು ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಸ್ಯಾಮ್ ಕರನ್ಗೆ ಗ್ರೀನ್ ಸಿಗ್ನಲ್ ನೀಡಿದೆ.
ಐಪಿಎಲ್ (IPL 2023) ಆರಂಭಕ್ಕೆ ದಿನಗಣನೆ ಆರಂಭವಾದಂತೆ ಕೆಲವು ಐಪಿಎಲ್ ತಂಡಗಳಿಗೆ ಆಟಗಾರರ ಅಲಭ್ಯತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲವು ಆಟಗಾರರು ಗಾಯದ ಸಮಸ್ಯೆಯಿಂದಾಗಿ ಇಡೀ ಆವೃತ್ತಿಯಿಂದ ಹೊರಬಿದ್ದರೆ, ಇನ್ನು ಕೆಲವು ಆಟಗಾರರು ಇಂಜುರಿಯಿಂದ ಗುಣಮುಖರಾಗಿದ್ದರೂ ಕೂಡ ತಮ್ಮ ಮಂಡಳಿಗಳಿಂದ ಎನ್‌ಒಸಿ ಪಡೆಯಲಾಗದೆ ಐಪಿಎಲ್ಗೆ ಅಲಭ್ಯರಾಗುತ್ತಿದ್ದಾರೆ. ಈಗ ಅಂತಹವರ ಪಟ್ಟಿಗೆ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಜಾನಿ ಬೈರ್‌ಸ್ಟೋ (Jonny Bairstow) ಸೇರಿಕೊಂಡಿದ್ದಾರೆ. ಕೆಲವು ತಿಂಗಳುಗಳಿಂದ ಇಂಜುರಿಯಿಂದ ತಂಡದಿಂದ ಹೊರಗುಳಿದಿರುವ ಜಾನಿ ಬೈರ್‌ಸ್ಟೋ ಸದ್ಯ ಇಂಜುರಿಯಿಂದ ಚೇತರಿಸಿಕೊಂಡಿದ್ದಾರೆ. ಆದರೆ ಭವಿಷ್ಯದ ಸರಣಿಯ ಸಲುವಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬೈರ್‌ಸ್ಟೋಗೆ ಐಪಿಎಲ್ ಆಡಲು ಗ್ರೀನ್ ಸಿಗ್ನಲ್ ನೀಡಿಲ್ಲ. ಹೀಗಾಗಿ ಜಾನಿ ಬೈರ್‌ಸ್ಟೋ ಭಾಗಶಃ ಐಪಿಎಲ್ನಿಂದ ಹೊರಬೀಳುವ ಸಾಧ್ಯತೆ ಇದೆ. ಆದರೆ ಇದೇ ಇಂಗ್ಲೆಂಡ್ ಮಂಡಳಿ ಮತ್ತಿಬ್ಬರು ಆಟಗಾರರಾದ ಲಿಯಾಮ್ ಲಿವಿಂಗ್‌ಸ್ಟನ್ (Liam Livingstone) ಹಾಗೂ ಐಪಿಎಲ್ನ ಅತ್ಯಂತ ದುಬಾರಿ ಆಟಗಾರ ಸ್ಯಾಮ್ ಕರನ್ಗೆ (Sam Curran) ಐಪಿಎಲ್ ಆಡಲು ಗ್ರೀನ್ ಸಿಗ್ನಲ್ ನಿಡಿದೆ.
ವಾಸ್ತವವಾಗಿ, 2022 ರಲ್ಲಿ ಗಾಲ್ಫ್ ಆಡುವಾಗ ಜಾನಿ ಬೈರ್‌ಸ್ಟೋ ಕಾಲು ಮುರಿತಕ್ಕೆ ಒಳಗಾಗಿದ್ದರು. ಹೀಗಾಗಿ ಬೈರ್‌ಸ್ಟೋ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಸದ್ಯ ಇಂಜುರಿಯಿಂದ ಚೇತರಿಸಿಕೊಂಡಿರುವ ಬೈರ್‌ಸ್ಟೋ ಅಖಾಡಕ್ಕೆ ಮರಳಲು ಸಿದ್ಧರಾಗಿದ್ದಾರೆ. ಆದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಾತ್ರ ಬೈರ್‌ಸ್ಟೋಗೆ ಐಪಿಎಲ್ ಆಡಲು ಅನುಮತಿ ನೀಡಿಲ್ಲ. ವಾಸ್ತವವಾಗಿ ಈ ವರ್ಷ ಜೂನ್ 16 ರಿಂದ ಆ್ಯಶಸ್ ಸರಣಿ ಪ್ರಾರಂಭವಾಗುತ್ತಿದೆ. ಹೀಗಾಗಿ ಈ ಸರಣಿಯಲ್ಲಿ ಬೈರ್‌ಸ್ಟೋ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿರುವುದರಿಂದ ಇಸಿಬಿ, ಎನ್‌ಒಸಿ ನೀಡಿಲ್ಲ.
IPL 2023: ಶ್ರೇಯಸ್ ಔಟ್! ಯಾರಿಗೆ ಸಿಗಲಿದೆ ಕೆಕೆಆರ್ ನಾಯಕತ್ವ? ರೇಸ್ನಲ್ಲಿ 3 ಆಟಗಾರರು
ಲಿವಿಂಗ್‌ಸ್ಟನ್- ಕರನ್ಗೆ ಗ್ರೀನ್ ಸಿಗ್ನಲ್
ಒಂದೆಡೆ, ಜಾನಿ ಬೈರ್‌ಸ್ಟೋಗೆ ಎನ್‌ಒಸಿ ನೀಡದಿದ್ದರೂ ಇಸಿಬಿ ಐಪಿಎಲ್‌ನಲ್ಲಿ ಆಡಲು ಲಿಯಾಮ್ ಲಿವಿಂಗ್‌ಸ್ಟನ್ ಮತ್ತು ಸ್ಯಾಮ್ ಕರನ್ಗೆ ಗ್ರೀನ್ ಸಿಗ್ನಲ್ ನೀಡಿದೆ. ಎಡಗೈ ವೇಗದ ಬೌಲಿಂಗ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರನ್ನು ಐಪಿಎಲ್-2023 ಮಿನಿ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 18.5 ಕೋಟಿ ನೀಡಿ ಖರೀದಿಸಿತ್ತು. ಅಲ್ಲದೆ ಸ್ಫೋಟಕ ಬ್ಯಾಟರ್ ಲಿವಿಂಗ್‌ಸ್ಟನ್ ಲಭ್ಯತೆಯೂ ಪಂಜಾಬ್ಗೆ ಕೊಂಚ ನಿರಾಳತೆ ತಂದಿದೆ.
ಡಿಸೆಂಬರ್ 2022 ರಲ್ಲಿ ರಾವಲ್ಪಿಂಡಿ ಟೆಸ್ಟ್‌ನಲ್ಲಿ ಗಾಯಗೊಂಡಿದ್ದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟನ್ ಇಂಜುರಿಗೊಂಡು ತಂಡದಿಂದ ಹೊರಗುಳಿದಿದ್ದರು. ಆದರೆ ಈಗ ಫಿಟ್ ಆಗಿರುವ ಲಿವಿಂಗ್‌ಸ್ಟನ್, ಇತ್ತೀಚೆಗೆ ದುಬೈನಲ್ಲಿ ಕೌಂಟಿ ಕ್ರಿಕೆಟ್ ಕ್ಲಬ್‌ನ ಆಫ್-ಸೀಸನ್ ತರಬೇತಿಗೆ ಹಾಜರಾಗಿದ್ದರು. ಇದೀಗ ಲಿವಿಂಗ್‌ಸ್ಟನ್ ಫಿಟ್ ಆಗಿದ್ದು, ಪಂಜಾಬ್ ಶಿಬಿರ ಸೇರಲು ಸಿದ್ಧರಾಗಿದ್ದಾರೆ.
ಪಂಜಾಬ್ ಕಿಂಗ್ಸ್ ಸ್ಕ್ವಾಡ್: ಶಿಖರ್ ಧವನ್ (ನಾಯಕ), ಶಾರುಖ್ ಖಾನ್, ಪ್ರಭಾಸಿಮ್ರಾನ್ ಸಿಂಗ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ರಾಜ್ ಬಾವಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಬಲ್ತೇಜ್ ಸಿಂಗ್, ಕಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹರ್, ಸ್ಯಾಮ್ ಕರನ್, ಸಿಕಂದರ್ ರಜಾ, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್, ಮತ್ತು ಮೋಹಿತ್ ರಾಥೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Thu, 23 March 23