IPLl 2023 Tickets: ಆರ್​​ಸಿಬಿ-ಮುಂಬೈ ಪಂದ್ಯದ ಟಿಕೆಟ್ ಬಹುತೇಕ ಸೋಲ್ಡ್ ಔಟ್: ಚಿನ್ನಸ್ವಾಮಿಯಲ್ಲಿ ಟಿಕೆಟ್ ಖರೀದಿಗೆ ಮುಗಿಬಿದ್ದ ಫ್ಯಾನ್ಸ್

RCB vs MI, IPL 2023: ಆರ್​ಸಿಬಿಯ ಅಧಿಕೃತ ವೆಬ್​ಸೈಟ್​ನಲ್ಲಿ ಆರ್​ಸಿಬಿ- ಮುಂಬೈ ಇಂಡಿಯನ್ಸ್ ಪಂದ್ಯದ ಟಿಕೆಟ್ ಮಾರಾಟ ನಡೆಯುತ್ತಿದೆ. ಆರಂಭಿಕ ಬೆಲೆ 2,310 ರೂ. ಯಿಂದ ಇದ್ದು 42,000 ರೂ. ವರೆಗಿನ ಟಿಕೆಟ್ ಖರೀದಿಗೆ ಲಭ್ಯವಿದೆ.

IPLl 2023 Tickets: ಆರ್​​ಸಿಬಿ-ಮುಂಬೈ ಪಂದ್ಯದ ಟಿಕೆಟ್ ಬಹುತೇಕ ಸೋಲ್ಡ್ ಔಟ್: ಚಿನ್ನಸ್ವಾಮಿಯಲ್ಲಿ ಟಿಕೆಟ್ ಖರೀದಿಗೆ ಮುಗಿಬಿದ್ದ ಫ್ಯಾನ್ಸ್
RCB vs MI Match Tickets
Follow us
Vinay Bhat
|

Updated on: Mar 21, 2023 | 9:58 AM

ಭಾರತದಲ್ಲಿ ಈಗಾಗಲೇ ದೇಶೀಯ ಟೂರ್ನಿಗಳ ಹಬ್ಬ ಶುರುವಾಗಿದೆ. ಸದ್ಯ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL 2023) ನಡೆಯುತ್ತಿದ್ದು ಅಂತಿಮ ಹಂತದತ್ತ ತಲುಪುತ್ತಿದೆ. ಇದಾದ ಬಳಿಕ ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL 2023) ಚಾಲನೆ ಸಿಗಲಿದೆ. ಮಾರ್ಚ್ 31 ರಂದು ಈ ಮಿಲಿಯನ್ ಡಾಲರ್ ಟೂರ್ನಿಯ ಮೊದಲ ಪಂದ್ಯ ಏರ್ಪಡಿಸಲಾಗಿದೆ. ಪ್ರತಿ ಬಾರಿ ಕಪ್ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯುವ ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2 ರಂದು ಮುಂಬೈ ಇಂಡಿಯನ್ಸ್ (RCB vs MI) ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಇದೀಗ ಈ ಪಂದ್ಯದ ಟಿಕೆಟ್ ಖರೀದಿಗೆ ಸಿಗುತ್ತಿದ್ದು ಬಹುತೇಕ ಸೋಲ್ಡ್ ಔಟ್ ಆಗಿದೆ.

ಆರ್​ಸಿಬಿಯ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಮಾರಾಟ ನಡೆಯುತ್ತಿದೆ. ಆರಂಭಿಕ ಬೆಲೆ 2,310 ರೂ. ಯಿಂದ ಇದ್ದು 42,000 ರೂ. ವರೆಗಿನ ಟಿಕೆಟ್ ಖರೀದಿಗೆ ಲಭ್ಯವಿದೆ. ಈಗಾಗಲೇ ಕೆಇಐ ಸ್ಟ್ಯಾಂಡ್, ಬೋಟ್ ಸಿ ಸ್ಟ್ಯಾಂಡ್, ಪೂಮಾ ಬಿ ಸ್ಟ್ಯಾಂಡ್, ಫ್ಯಾನ್ ಟ್ಯಾರೆಸ್ ಎನ್ ಸೇರಿದಂತೆ ಬಹುತೇಕ ಮೈದಾನದ ಎಲ್ಲ ಮೂಲೆಗಳು ಭರ್ತಿ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧಿಕೃತ ವೆಬ್​ಸೈಟ್​ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಪಂದ್ಯದಿಂದ ಪಂದ್ಯಕ್ಕೆ ಟಿಕೆಟ್ ಬೆಲೆಯಲ್ಲಿ ಬದಲಾವಣೆ ಮಾಡಲಾಗಿದೆ.

Sunil Narine: 7 ಓವರ್, 7 ಮೇಡನ್, 7 ವಿಕೆಟ್​: ಸುನಿಲ್ ನರೈನ್ ಮ್ಯಾಜಿಕ್..!

ಇದನ್ನೂ ಓದಿ
Image
IND vs AUS 3rd ODI: ಚೆನ್ನೈಗೆ ಆಗಮಿಸಿದ ಟೀಮ್ ಇಂಡಿಯಾ: ಬ್ಲಾಕ್ ಶರ್ಟ್​ನಲ್ಲಿರುವ ಕೊಹ್ಲಿಯ ಫೋಟೋ ವೈರಲ್
Image
IPL: ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ 2ನೇ ತಂಡ ಆರ್​ಸಿಬಿ! ಯಾವ ತಂಡಕ್ಕೆ ಯಾವ ಸ್ಥಾನ? ಇಲ್ಲಿದೆ ವಿವರ
Image
WPL 2023: ವುಮೆನ್ಸ್ ಪ್ರೀಮಿಯರ್ ಲೀಗ್​ ಪ್ಲೇಆಫ್​ಗೆ 3 ತಂಡಗಳು ಎಂಟ್ರಿ
Image
IPL 2023: ಹೊಸ ಅವತಾರದಲ್ಲಿ ಐಪಿಎಲ್​ಗೆ ಶ್ರೀಶಾಂತ್ ಕಂಬ್ಯಾಕ್

ಬರೋಬ್ಬರಿ ಮೂರು ವರ್ಷಗಳ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ ನಡೆಯುತ್ತಿರುವುದರಿಂದ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ದುಬಾರಿ ಬೆಲೆ ಇದ್ದರೂ ಅಭಿಮಾನಿಗಳು ಖರೀದಿ ಮಾಡುತ್ತಿದ್ದಾರೆ. ಬಾಕ್ಸ್‌ ಆಫೀಸ್ (ಗೇಟ್ 2 ಮತ್ತು 18ರ ಕೌಂಟರ್‌ಗಳು) ಮಾರಾಟ ಕೂಡ ಆರಂಭವಾಗಿದ್ದು ಕ್ರೀಡಾಂಗಣದ ಹೊರಗೆ ಜನರು ಸೇರಿದ್ದಾರೆ. ಆರ್​ಸಿಬಿ ಫ್ಯಾನ್ಸ್ ಮಧ್ಯಾಹ್ನದವರೆಗೂ ಬಿಸಿಲಿನಲ್ಲಿಯೇ ನಿಂತು ಟಿಕೆಟ್ ಖರೀದಿಸಿದ್ದು ವಿಶೇಷವಾಗಿತ್ತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲ್ಲ ಪಂದ್ಯದ ಟಿಕೆಟ್ ಆನ್​ಲೈನ್​ನಲ್ಲಿ ಬುಕ್ ಮಾಡಲು ಆರ್​ಸಿಬಿಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಆರ್​ಸಿಬಿ vs ಮುಂಬೈ ಟಿಕೆಟ್ ಬೆಲೆ 2310 ರೂ. ಯಿಂದ ಆರಂಭವಾಗುತ್ತದೆ. ಬಳಿಕ 3300 ರೂ., 4840 ರೂ., 6049 ರೂ., 9075 ರೂ., 10890 ರೂ., 24200 ರೂ., 42350 ರೂ. ವರೆಗೆ ಇದೆ. ಅಂತೆಯೆ ಬಾಕ್ಸ್ ಆಫೀಸ್​ನಲ್ಲಿನ ವಿವಿಧ ಗ್ಯಾಲರಿಗಳ ಟಿಕೆಟ್‌ ದರ 1,655 ರೂ. ರಿಂದ (ಜಿಎಸ್‌ಟಿ ಹೊರತುಪಡಿಸಿ) ಆರಂಭಗೊಂಡು 33,086 ರೂ. ವರೆಗೆ ಇರಲಿದೆ.

ಆರ್​ಸಿಬಿ ತಂಡಕ್ಕೆ ಕಿವೀಸ್​ನ ಸ್ಟಾರ್ ಆಟಗಾರ ಎಂಟ್ರಿ:

ಈ ಬಾರಿಯ ಹರಾಜಿನಲ್ಲಿ ಆರ್​ಸಿಬಿ ತಂಡವು ಇಂಗ್ಲೆಂಡ್ ಆಲ್​ರೌಂಡರ್ ವಿಲ್ ಜಾಕ್ಸ್ ಅವರನ್ನು 3.2 ಕೋಟಿ ರೂ. ಗೆ ಖರೀದಿಸಿತ್ತು. ಆದರೆ ಇತ್ತೀಚೆಗಷ್ಟೆ ಮುಕ್ತಾಯಗೊಂಡ ಬಾಂಗ್ಲಾದೇಶ ವಿರುದ್ಧದ ಸರಣಿಯ ವೇಳೆ ಕಾಲಿಗೆ ಗಾಯವಾಗಿದ್ದರಿಂದ ಜಾಕ್ಸ್ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಇತ್ತ ವಿಲ್ ಜಾಕ್ಸ್ ಐಪಿಎಲ್​ನಿಂದ ಹೊರಬೀಳುತ್ತಿದ್ದಂತೆ ಆರ್​ಸಿಬಿ ಫ್ರಾಂಚೈಸಿ ನ್ಯೂಜಿಲೆಂಡ್ ಆಟಗಾರ ಮೈಕೆಲ್ ಬ್ರೇಸ್​ವೆಲ್ ಜೊತೆ ಮಾತುಕತೆ ನಡೆಸಿ ತಂಡಕ್ಕೆ ಸೇರಿಸಿಕೊಂಡಿದೆ. ಈ ಬಾರಿಯ ಹರಾಜಿನಲ್ಲಿ 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಬ್ರೇಸ್​ವೆಲ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಆರ್​ಸಿಬಿ ಹೊಸ ಆಟಗಾರನನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಆರ್​​ಸಿಬಿ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಮೈಕೆಲ್ ಬ್ರೇಸ್​ವೆಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ