
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 8 ವಿಕೆಟ್ಗಳ ಜಯ ಸಾಧಿಸಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಡೆವೊನ್ ಬ್ರಾವೊ ಭೇಟಿಯಾಗಿದ್ದರು.
ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ಧೋನಿಯನ್ನು ಭೇಟಿಯಾಗಲು ಬಂದ ಬ್ರಾವೊನನ್ನು ಧೋನಿ ವಂಚಕ ಬಂದಿದ್ದಾನೆ ಎಂದು ಕಾಲೆಳೆದರು. ಇದಕ್ಕೆ ಮುಖ್ಯ ಕಾರಣ ಈ ಹಿಂದೆ ಬ್ರಾವೊ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆದರೆ ಈ ಬಾರಿಯ ಐಪಿಎಲ್ ಮೂಲಕ ಡೆವೊನ್ ಬ್ರಾವೊ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಭಾಗವಾಗಿದ್ದಾರೆ. ಇತ್ತ ಸಿಎಸ್ಕೆಯನ್ನು ತೊರೆದು ಕೆಕೆಆರ್ ಜೊತೆಗೂಡಿರುವ ಬ್ರಾವೊ ಇದೇ ಮೊದಲ ಬಾರಿಗೆ ಧೋನಿಯನ್ನು ಭೇಟಿಯಾಗಿದ್ದಾರೆ.
ಈ ವೇಳೆ ತನ್ನ ಮಾಜಿ ಸಹ ಆಟಗಾರನನ್ನು ವಂಚಕ ಎಂದು ಕರೆಯುವ ಮೂಲಕ ಧೋನಿ, ಬ್ರಾವೊ ಅವರ ಕಾಲೆಳೆದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
MS🫂DJ : MISS THIS VIBE! 💛✨#WhistlePodu #Yellove 🦁💛 pic.twitter.com/IlSd876zes
— Chennai Super Kings (@ChennaiIPL) April 11, 2025
ಡೆವೊನ್ ಬ್ರಾವೊ ಚೆನ್ನೈ ಸೂಪರ್ ಕಿಂಗ್ಸ್ ಪರ 130 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 127 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಬ್ರಾವೊ 2516 ಎಸೆತಗಳನ್ನು ಎಸೆದು 154 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇನ್ನು 2022 ರಲ್ಲಿ ಐಪಿಎಲ್ಗೆ ವಿದಾಯ ಹೇಳಿದ ಬ್ರಾವೊ ಆ ಬಳಿಕ ಸಿಎಸ್ಕೆ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಆಟಗಾರನ ಬ್ಯಾನ್ ಮಾಡಿದ ಪಾಕಿಸ್ತಾನ್
ಆದರೀಗ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬ್ರಾವೊ ಅವರನ್ನು 4 ತಂಡಗಳ ಮೆಂಟರ್ ಆಗಿ ನೇಮಿಸಿದೆ. ಅದರಂತೆ ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್, ಇಂಟರ್ನ್ಯಾಷನಲ್ ಟಿ20 ಲೀಗ್ (ಯುಎಇ) ನಲ್ಲಿ ಅಬುಧಾಬಿ ನೈಟ್ ರೈಡರ್ಸ್, ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್, ವೆಸ್ಟ್ ಇಂಡೀಸ್ನ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಬ್ರಾವೊ ಕಾಣಿಸಿಕೊಳ್ಳಲಿದ್ದಾರೆ.
Published On - 9:54 am, Sat, 12 April 25