IPL 2025: RCB ಗ್ರೀನ್ ಜೆರ್ಸಿ ಪಂದ್ಯಕ್ಕೆ ಡೇಟ್ ಫಿಕ್ಸ್
IPL 2025 RCB vs RR: 2011 ರಿಂದ ಐಪಿಎಲ್ನಲ್ಲಿ ಗೋ ಗ್ರೀನ್ ಅಭಿಯಾನ ಅರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರತಿ ಸೀಸನ್ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಾ ಬಂದಿದೆ. ಅದರಂತೆ ಈ ಬಾರಿ ಆರ್ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.

IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗ್ರೀನ್ ಜೆರ್ಸಿ ಪಂದ್ಯಕ್ಕೆ ದಿನಾಂಕ ನಿಗದಿಯಾಗಿದೆ. ಅದರಂತೆ ಏಪ್ರಿಲ್ 13 ರಂದು ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ತಂಡ ಗ್ರೀನ್ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಜೈಪುರ್ನ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಗ್ರೀನ್ ಜೆರ್ಸಿ ಯಾಕೆ?
2011 ರಿಂದ ಐಪಿಎಲ್ನಲ್ಲಿ ಗೋ ಗ್ರೀನ್ ಅಭಿಯಾನ ಅರಂಭಿಸಿರುವ ಆರ್ಸಿಬಿ ಪ್ರತಿ ಸೀಸನ್ನ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಾ ಬಂದಿದೆ. ಇದರ ಮೂಲ ಉದ್ದೇಶ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು. ಅದರಲ್ಲೂ ಮರಗಳನ್ನು ಉಳಿಸಿ-ಬೆಳೆಸಿ ಎಂಬ ಸಂದೇಶ ಸಾರಲು ಆರ್ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ.
ಇದಾಗ್ಯೂ 2021 ರ ಐಪಿಎಲ್ ವೇಳೆ ಆರ್ಸಿಬಿ ಗ್ರೀನ್ ಜೆರ್ಸಿ ಬದಲಿಗೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು ಎಂಬುದು ವಿಶೇಷ. ಅಂದು ಕೊರೋನಾ ವಾರಿಯರ್ಸ್ಗೆ ಗೌರವ ಸೂಚಿಸುವ ಸಲುವಾಗಿ ಆರ್ಸಿಬಿ ಪಿಪಿಐ ಕಿಟ್ ಬಣ್ಣದ ಜೆರ್ಸಿಯಲ್ಲಿ ಕೆಕೆಆರ್ ವಿರುದ್ಧ ಪಂದ್ಯವಾಡಿತ್ತು.
ಇದೀಗ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೋ ಗ್ರೀನ್ ಅಭಿಯಾನದಡಿಯಲ್ಲಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಅದು ಸಹ ರಾಜಸ್ಥಾನ್ ರಾಯಲ್ ವಿರುದ್ಧ, ಪಿಂಕ್ ಸಿಟಿ ಜೈಪುರ್ನಲ್ಲಿ ಎಂಬುದು ವಿಶೇಷ.
RCB ಗೇಮ್ ಫರ್ ಗ್ರೀನ್:
𝐆𝐚𝐦𝐞 𝐟𝐨𝐫 𝐆𝐫𝐞𝐞𝐧! 🌏
How’s the #RCBxPuma Green Travel drip looking, fam? 😎 pic.twitter.com/JYsuOXavkr
— Royal Challengers Bengaluru (@RCBTweets) April 11, 2025
ಉಭಯ ತಂಡಗಳು ಹೀಗಿವೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ , ರಜತ್ ಪಾಟಿದಾರ್ (ನಾಯಕ) , ಸ್ವಸ್ತಿಕ್ ಚಿಕಾರಾ , ದೇವದತ್ ಪಡಿಕ್ಕಲ್ , ಜಿತೇಶ್ ಶರ್ಮಾ , ಫಿಲ್ ಸಾಲ್ಟ್ , ಮನೋಜ್ ಭಾಂಡಗೆ , ಟಿಮ್ ಡೇವಿಡ್ , ಕೃನಾಲ್ ಪಾಂಡ್ಯ , ಲಿಯಾಮ್ ಲಿವಿಂಗ್ಸ್ಟೋನ್ , ರೊಮಾರಿಯೋ ಶೆಫರ್ಡ್ , ಜೇಕಬ್ ಬೆಥೆಲ್ , ಸ್ವಪ್ನಿಲ್ ಸಿಂಗ್ , ಭುವನೇಶ್ವರ್ ಕುಮಾರ್, ಲುಂಗಿ ಎನ್ಗಿಡಿ , ಯಶ್ ದಯಾಳ್ , ರಾಸಿಖ್ ದಾರ್ ಸಲಾಂ , ಸುಯಶ್ ಶರ್ಮಾ , ಮೋಹಿತ್ ರಾಠಿ , ಅಭಿನಂದನ್ ಸಿಂಗ್.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಆಟಗಾರನ ಬ್ಯಾನ್ ಮಾಡಿದ ಪಾಕಿಸ್ತಾನ್
ರಾಜಸ್ಥಾನ್ ರಾಯಲ್ಸ್ ತಂಡ: ಯಶಸ್ವಿ ಜೈಸ್ವಾಲ್ , ಶಿಮ್ರೋನ್ ಹೆಟ್ಮೆಯರ್ , ಶುಭಂ ದುಬೆ , ವೈಭವ್ ಸೂರ್ಯವಂಶಿ , ಸಂಜು ಸ್ಯಾಮ್ಸನ್ (ನಾಯಕ) , ಧ್ರುವ್ ಜುರೆಲ್ , ಕುನಾಲ್ ಸಿಂಗ್ ರಾಥೋಡ್ , ರಿಯಾನ್ ಪರಾಗ್ , ಯುಧ್ವಿರ್ ಸಿಂಗ್ ಚರಕ್ , ನಿತೀಶ್ ರಾಣಾ , ಸಂದೀಪ್ ಶರ್ಮಾ , ತುಷಾರ್ ದೇಶಪಾಂಡೆ , ಆಕಾಶ್ ಮಧ್ವಾಳ್, ವನಿಂದು ಹಸರಂಗ , ಮಹೇಶ್ ತೀಕ್ಷಣ , ಫಝಲ್ಹಕ್ ಫಾರೂಕಿ , ಅಶೋಕ್ ಶರ್ಮಾ , ಜೋಫ್ರಾ ಆರ್ಚರ್.
Published On - 10:26 am, Sat, 12 April 25