Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs RCB Highlights, IPL 2025: ಕೆಕೆಆರ್ ವಿರುದ್ಧ ಆರ್​ಸಿಬಿಗೆ ಸುಲಭ ಜಯ

ಪೃಥ್ವಿಶಂಕರ
|

Updated on:Mar 22, 2025 | 11:14 PM

Kolkata Knight Riders vs Royal Challengers Bengaluru Highlights in Kannada: ಐಪಿಎಲ್ 18ನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಆರಂಭ ಮಾಡಿದೆ. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಕೆಕೆಆರ್ ತಂಡ ಆರ್‌ಸಿಬಿಗೆ 175 ರನ್‌ಗಳ ಗುರಿ ನೀಡಿತ್ತು. ಆರ್‌ಸಿಬಿ ಇನ್ನೂ 22 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಸವಾಲನ್ನು ಪೂರ್ಣಗೊಳಿಸಿತು.

KKR vs RCB Highlights, IPL 2025: ಕೆಕೆಆರ್ ವಿರುದ್ಧ ಆರ್​ಸಿಬಿಗೆ ಸುಲಭ ಜಯ
Kkr Vs Rcb

ಐಪಿಎಲ್ 2025 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿಯೇ ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸಿತು. ಮಾರ್ಚ್ 22 ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ, ಕೆಕೆಆರ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 175 ರನ್‌ಗಳ ಗುರಿಯನ್ನು ನೀಡಿತು. ಆರ್‌ಸಿಬಿ ಕೇವಲ 16.2 ಓವರ್‌ಗಳಲ್ಲಿ ಈ ಗುರಿಯನ್ನು ಬೆನ್ನಟ್ಟಿತು. ಈ ಮೂಲಕ ಆರ್​ಸಿಬಿ 3 ವರ್ಷಗಳ ನಂತರ ಕೋಲ್ಕತ್ತಾ ವಿರುದ್ಧ ಜಯ ಸಾಧಿಸಿದಂತ್ತಾಗಿದೆ. ಇದಕ್ಕೂ ಮೊದಲು, ಆರ್‌ಸಿಬಿ 2022 ರ ಸೀಸನ್​ನಲ್ಲಿ ಕೆಕೆಆರ್ ತಂಡವನ್ನು ಸೋಲಿಸಿತ್ತು. ಈ ಅದ್ಭುತ ಗೆಲುವಿನೊಂದಿಗೆ ಆರ್‌ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ತನ್ನ ಖಾತೆ ತೆರೆದಿದೆ.

LIVE NEWS & UPDATES

The liveblog has ended.
  • 22 Mar 2025 10:57 PM (IST)

    KKR vs RCB: 7 ವಿಕೆಟ್‌ಗಳ ಜಯ

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2025 ರ ಆವೃತ್ತಿಯನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಬೆಂಗಳೂರು ತಂಡವು ಚಾಂಪಿಯನ್ ಕೋಲ್ಕತಾ ತಂಡವನ್ನು ಅದರ ತವರು ನೆಲದಲ್ಲಿ 7 ವಿಕೆಟ್‌ಗಳಿಂದ ಸೋಲಿಸಿ 2 ಅಂಕಗಳೊಂದಿಗೆ ಸೀಸನ್ ಆರಂಭಿಸಿದೆ. ವಿರಾಟ್ ಕೊಹ್ಲಿ 59 ರನ್ ಗಳಿಸಿ ಅಜೇಯರಾಗಿ ಉಳಿದರೆ, ಲಿಯಾಮ್ ಲಿವಿಂಗ್‌ಸ್ಟೋನ್ 5 ಎಸೆತಗಳಲ್ಲಿ 15 ರನ್ ಗಳಿಸಿ ಅಜೇಯರಾಗಿ ಮರಳಿದರು.

  • 22 Mar 2025 10:49 PM (IST)

    KKR vs RCB: ನಾಯಕ ಔಟ್

    ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಅವರ ಸ್ಫೋಟಕ ಇನ್ನಿಂಗ್ಸ್ ಅಂತ್ಯಗೊಂಡಿದೆ. ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುತ್ತಿರುವಾಗ, ಅವರು ವೈಭವ್ ಅರೋರಾಗೆ ಬಲಿಯಾದರು. ಪಾಟೀದಾರ್ 16 ಎಸೆತಗಳಲ್ಲಿ 34 ರನ್ ಗಳಿಸಿದರು.

  • 22 Mar 2025 10:48 PM (IST)

    KKR vs RCB: 14 ಓವರ್‌ಗಳಲ್ಲಿ 138 ರನ್‌

    ಬೆಂಗಳೂರು ತಂಡದ ಇನ್ನಿಂಗ್ಸ್‌ನ 14 ಓವರ್‌ಗಳು ಪೂರ್ಣಗೊಂಡಿದ್ದು, ತಂಡವು 138 ರನ್‌ಗಳನ್ನು ಗಳಿಸಿದ್ದು, 2 ವಿಕೆಟ್‌ಗಳು ಬಿದ್ದಿವೆ. ಕೊಹ್ಲಿ ಜೊತೆ ನಾಯಕ ರಜತ್ ಪಾಟಿದಾರ್ ಇದ್ದಾರೆ, ಅವರು ನರೈನ್ ಎಸೆತದಲ್ಲಿ 91 ಮೀಟರ್ ಉದ್ದದ ಸಿಕ್ಸರ್ ಬಾರಿಸಿದರು.

  • 22 Mar 2025 10:48 PM (IST)

    KKR vs RCB: ಕೊಹ್ಲಿಯ ಅರ್ಧಶತಕ

    ವಿರಾಟ್ ಕೊಹ್ಲಿ ಅದ್ಭುತ ಅರ್ಧಶತಕದೊಂದಿಗೆ ಈ ಇನ್ನಿಂಗ್ಸ್ ಆರಂಭಿಸಿದ್ದಾರೆ. ಕೊಹ್ಲಿ 30 ಎಸೆತಗಳಲ್ಲಿ ಅಮೋಘ ಅರ್ಧಶತಕ ಗಳಿಸಿದರು. ಹರ್ಷಿತ್ ರಾಣಾ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಅರ್ಧಶತಕ ಪೂರೈಸಿದರು.

  • 22 Mar 2025 10:29 PM (IST)

    KKR vs RCB: 10 ಓವರ್‌ಗಳಲ್ಲಿ 100 ರನ್‌

    ಕೆಕೆಆರ್ ನಂತೆ, ಆರ್‌ಸಿಬಿ ಕೂಡ ತನ್ನ 10 ಓವರ್‌ಗಳಲ್ಲಿ 100 ರನ್‌ಗಳನ್ನು ಪೂರ್ಣಗೊಳಿಸಿತು. ಸಾಲ್ಟ್ ಔಟಾದ ನಂತರ ಬಂದ ದೇವದತ್ ಪಡಿಕಲ್ ಈಗ ಕೊಹ್ಲಿ ಜೊತೆ ಇನ್ನಿಂಗ್ಸ್ ವಿಸ್ತರಿಸುತ್ತಿದ್ದಾರೆ.

  • 22 Mar 2025 10:26 PM (IST)

    KKR vs RCB: ಸಾಲ್ಟ್ ಔಟ್

    ಬೆಂಗಳೂರು ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ವರುಣ್ ಚಕ್ರವರ್ತಿ ಎಸೆದ ಎಂಟನೇ ಓವರ್‌ನಲ್ಲಿ ಫಿಲ್ ಸಾಲ್ಟ್ (56) ಅವರ ಸ್ಫೋಟಕ ಇನ್ನಿಂಗ್ಸ್ ಅಂತ್ಯಗೊಂಡಿತು.

  • 22 Mar 2025 10:12 PM (IST)

    KKR vs RCB: ಸಾಲ್ಟ್ ಅರ್ಧಶತಕ

    ಫಿಲ್ ಸಾಲ್ಟ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ. ಸಾಲ್ಟ್ ತನ್ನ ಹಳೆಯ ತಂಡದ ವಿರುದ್ಧ ಸೀಸನ್​ನ ಮೊದಲ ಪಂದ್ಯದಲ್ಲಿ ಈ ಅದ್ಭುತ ಸಾಧನೆ ಮಾಡಿದ್ದಾರೆ.

  • 22 Mar 2025 10:04 PM (IST)

    KKR vs RCB: ಪವರ್‌ಪ್ಲೇನಲ್ಲಿ ಆರ್‌ಸಿಬಿ 80 ರನ್

    ಪವರ್‌ಪ್ಲೇನಲ್ಲಿ ಬೆಂಗಳೂರು ಕೋಲ್ಕತ್ತಾಕ್ಕಿಂತ ವೇಗವಾಗಿ ಆಟ ಆರಂಭಿಸಿ 6 ಓವರ್‌ಗಳಲ್ಲಿ 80 ರನ್ ಗಳಿಸಿದೆ. ಆದಾಗ್ಯೂ, ಈ ಪವರ್‌ಪ್ಲೇಯ ಕೊನೆಯ ಓವರ್ ಚೆನ್ನಾಗಿತ್ತು, ಅದರಲ್ಲಿ ಹರ್ಷಿತ್ ರಾಣಾ ಕೇವಲ 5 ರನ್‌ಗಳನ್ನು ಮಾತ್ರ ನೀಡಿದರು.

  • 22 Mar 2025 09:55 PM (IST)

    KKR vs RCB: 4 ಓವರ್‌ಗಳಲ್ಲಿ 58 ರನ್‌

    ಆರ್‌ಸಿಬಿ ಸ್ಫೋಟಕ ಆರಂಭ ಪಡೆದು ಕೇವಲ 4 ಓವರ್‌ಗಳಲ್ಲಿ 58 ರನ್ ಗಳಿಸಿದೆ. ನಾಲ್ಕನೇ ಓವರ್‌ನಲ್ಲಿ, ಫಿಲ್ ಸಾಲ್ಟ್ ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ಸತತ 4 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ 21 ರನ್ ಗಳಿಸಿದರು.

  • 22 Mar 2025 09:51 PM (IST)

    KKR vs RCB: ಸ್ಫೋಟಕ ಬ್ಯಾಟಿಂಗ್

    175 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬೆಂಗಳೂರು ತಂಡವು ಬಿರುಗಾಳಿಯ ಆರಂಭವನ್ನು ಮಾಡಿದೆ. ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಒಟ್ಟಾಗಿ ಕೇವಲ 3 ಓವರ್‌ಗಳಲ್ಲಿ 37 ರನ್ ಗಳಿಸಿ ಬೌಂಡರಿಗಳ ಸುರಿಮಳೆಗೈದಿದ್ದಾರೆ. ಇಬ್ಬರೂ ಇಲ್ಲಿಯವರೆಗೆ 1 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಹೊಡೆದಿದ್ದಾರೆ.

  • 22 Mar 2025 09:40 PM (IST)

    KKR vs RCB: ಆರ್​ಸಿಬಿ ಇನ್ನಿಂಗ್ಸ್ ಆರಂಭ

    ಬೆಂಗಳೂರು ತಂಡ ಬೌಂಡರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದೆ. ಮೊದಲ ಓವರ್‌ನ ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ಬೌಂಡರಿ ಬಾರಿಸಿದರು.

  • 22 Mar 2025 09:24 PM (IST)

    KKR vs RCB: 174 ರನ್ ಟಾರ್ಗೆಟ್

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿದೆ. ಕೊನೆಯ ಓವರ್‌ನಲ್ಲಿ ಹ್ಯಾಜಲ್‌ವುಡ್ ಕೇವಲ 5 ರನ್ ನೀಡಿ 1 ವಿಕೆಟ್ ಪಡೆದರು. ಕೊನೆಯ 5 ಓವರ್‌ಗಳಲ್ಲಿ ಕೇವಲ 29 ರನ್‌ಗಳು ಮಾತ್ರ ಬಿಟ್ಟುಕೊಟ್ಟರೆ 3 ವಿಕೆಟ್‌ಗಳು ಪತನಗೊಂಡವು.

  • 22 Mar 2025 09:15 PM (IST)

    KKR vs RCB: ಎಂಟನೇ ವಿಕೆಟ್ ಪತನ

    20ನೇ ಓವರ್‌ನಲ್ಲಿ ಕೋಲ್ಕತ್ತಾ ಪರ ಜೋಶ್ ಹ್ಯಾಜಲ್‌ವುಡ್ ಎಂಟನೇ ವಿಕೆಟ್ ಪಡೆದರು. ಹರ್ಷಿತ್ ರಾಣಾ ಔಟ್ ಆಗಿ ಪೆವಿಲಿಯನ್‌ಗೆ ಮರಳಿದರು.

  • 22 Mar 2025 09:14 PM (IST)

    KKR vs RCB: ಅಂಗ್‌ಕ್ರಿಶ್ ಅದ್ಭುತ ಸಿಕ್ಸರ್

    ಕೆಕೆಆರ್ ತಂಡದ ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ, ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದ್ದಾರೆ. ಇದರೊಂದಿಗೆ, ಕೋಲ್ಕತ್ತಾದ ಸ್ಕೋರ್ 18 ಓವರ್‌ಗಳ ನಂತರ 165 ರನ್‌ಗಳನ್ನು ತಲುಪಿದೆ.

  • 22 Mar 2025 09:04 PM (IST)

    KKR vs RCB: ಬಿಗ್ ವಿಕೆಟ್

    ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ದೊಡ್ಡ ವಿಕೆಟ್‌ಗಳನ್ನು ಕಳೆದುಕೊಂಡಿದೆ. ರಿಂಕು ಸಿಂಗ್ ನಂತರ ಆಂಡ್ರೆ ರಸೆಲ್ (4) ಕೂಡಲೆ ನಿರ್ಗಮಿಸಿದರು. ರಸೆಲ್ ಅವರನ್ನು ಸುಯಾಶ್ ಶರ್ಮಾ ಗೂಗ್ಲಿ ಮೂಲಕ ಬೌಲ್ಡ್ ಮಾಡಿದರು. ಕೆಕೆಆರ್ 6 ವಿಕೆಟ್ ಕಳೆದುಕೊಂಡಿದೆ.

  • 22 Mar 2025 09:04 PM (IST)

    KKR vs RCB: ರಿಂಕು ಸಿಂಗ್ ಔಟ್

    ರಿಂಕು ಸಿಂಗ್ (12) ಕೂಡ ಕಡಿಮೆ ರನ್ ಗಳಿಸಿ ಔಟಾದರು. ಸ್ಪಿನ್ನರ್ ಕೃನಾಲ್ ಪಾಂಡ್ಯ ತಮ್ಮ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ರಿಂಕು ಅವರನ್ನು ಔಟ್ ಮಾಡುವ ಮೂಲಕ ಕೋಲ್ಕತ್ತಾಗೆ ಐದನೇ ಹೊಡೆತ ನೀಡಿದರು. ಇದು ಕೃನಾಲ್ ಅವರ ಮೂರನೇ ವಿಕೆಟ್ ಆಗಿತ್ತು.

  • 22 Mar 2025 08:45 PM (IST)

    KKR vs RCB: ವೆಂಕಟೇಶ್ ಅಯ್ಯರ್ ಕೂಡ ಔಟ್

    ಕೋಲ್ಕತ್ತಾ ತಂಡದ ಉಪನಾಯಕ ವೆಂಕಟೇಶ್ ಅಯ್ಯರ್ ಈ ಋತುವಿನ ಮೊದಲ ಪಂದ್ಯದಲ್ಲಿ ವಿಫಲರಾಗಿದ್ದಾರೆ. ಅವರನ್ನು ಕೃನಾಲ್ ಪಾಂಡ್ಯ ಬೌಲ್ಡ್ ಮಾಡಿದರು. ಇದು ಕೋಲ್ಕತ್ತಾ ತಂಡದ ನಾಲ್ಕನೇ ವಿಕೆಟ್ ಪತನವಾಗಿದೆ.

  • 22 Mar 2025 08:31 PM (IST)

    KKR vs RCB: ಜೋಡಿ ಆಘಾತ

    ಶತಕದ ಜೊತೆಯಾಟದ ನಂತರ ಸುನಿಲ್ ನರೈನ್ ಔಟ್ ಆಗಿದ್ದಾರೆ. ಅವರ ನಂತರ ಅಜಿಂಕ್ಯ ರಹಾನೆ ಕೂಡ ಪೆವಿಲಿಯನ್ ಸೇರಿಕೊಂಡಿದ್ದಾರೆ. ಯುವ ಬ್ಯಾಟ್ಸ್‌ಮನ್ ಅಂಗ್ರೀಶ್ ರಘುವಂಶಿ ಉಪನಾಯಕನೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 22 Mar 2025 08:28 PM (IST)

    KKR vs RCB: 100 ರನ್‌

    ರಹಾನೆ ಮತ್ತು ನರೈನ್ ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ 10 ನೇ ಓವರ್‌ನಲ್ಲಿಯೇ ಕೆಕೆಆರ್ 100 ರನ್‌ಗಳ ಗಡಿ ದಾಟಿದೆ.

  • 22 Mar 2025 08:22 PM (IST)

    KKR vs RCB: ರಹಾನೆ ಸ್ಫೋಟಕ ಅರ್ಧಶತಕ

    ಕೋಲ್ಕತ್ತಾ ನಾಯಕ ಅಜಿಂಕ್ಯ ರಹಾನೆ ಐಪಿಎಲ್ 2025 ರ ಮೊದಲ ಅರ್ಧಶತಕ ಗಳಿಸಿದ್ದಾರೆ. ರಹಾನೆ 25 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಸೀಸನ್​ಗೆ ಉತ್ತಮ ಆರಂಭ ನೀಡಿದರು.

  • 22 Mar 2025 08:18 PM (IST)

    KKR vs RCB: ರನ್ ವೇಗಕ್ಕೆ ಬ್ರೇಕ್

    ಪವರ್‌ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ನಂತರ, ಕೋಲ್ಕತ್ತಾದ ರನ್ ದರವನ್ನು ಮುಂದಿನ 2 ಓವರ್‌ಗಳಲ್ಲಿ ನಿಯಂತ್ರಿಸಲಾಗಿದೆ. ಕೋಲ್ಕತ್ತಾ ತಂಡವು ಏಳು ಮತ್ತು ಎಂಟನೇ ಓವರ್‌ಗಳಲ್ಲಿ ಕೇವಲ 14 ರನ್‌ಗಳನ್ನು ಗಳಿಸಿದೆ.

  • 22 Mar 2025 08:07 PM (IST)

    KKR vs RCB: ಪವರ್‌ಪ್ಲೇನಲ್ಲಿ ಕೆಕೆಆರ್ 60 ರನ್

    ಮೊದಲ 3 ಓವರ್ ಗಳಲ್ಲಿ ಕೇವಲ 9 ರನ್ ಗಳಿಸಿದ್ದ ಕೋಲ್ಕತ್ತಾ, ನಂತರದ 3 ಓವರ್ ಗಳಲ್ಲಿ 51 ರನ್ ಗಳಿಸಿದೆ. ಆರನೇ ಓವರ್‌ನಲ್ಲಿ ಕೋಲ್ಕತ್ತಾ 3 ಬೌಂಡರಿ ಮತ್ತು 1 ಸಿಕ್ಸರ್ ಗಳಿಸಿತು, ಅದರ ಸಹಾಯದಿಂದ ತಂಡವು ಈ ಓವರ್‌ನಲ್ಲಿ 20 ರನ್‌ಗಳು ಬಂದವು. ರಹಾನೆ ಮತ್ತು ನರೈನ್ ನಡುವೆ ಅರ್ಧಶತಕದ ಜೊತೆಯಾಟವೂ ಇತ್ತು.

  • 22 Mar 2025 07:56 PM (IST)

    KKR vs RCB: ರಹಾನೆ ಸಿಕ್ಸರ್

    ನಾಯಕ ಅಜಿಂಕ್ಯ ರಹಾನೆ ನಾಲ್ಕನೇ ಓವರ್‌ನಲ್ಲಿ ದಾಳಿ ಆರಂಭಿಸಿದರು. ರಸಿಕ್ ರಸಲ್ ದಾರ್ ಅವರ ಓವರ್‌ನಲ್ಲಿ ಅವರು ಒಂದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಆ ಓವರ್‌ನಲ್ಲಿ 16 ರನ್‌ಗಳು ಬಂದವು.

  • 22 Mar 2025 07:51 PM (IST)

    KKR vs RCB: ಬಿಗಿಯಾದ ಬೌಲಿಂಗ್

    ಆರ್‌ಸಿಬಿ ಈ ಪಂದ್ಯವನ್ನು ಬಿಗಿಯಾದ ಬೌಲಿಂಗ್‌ನೊಂದಿಗೆ ಆರಂಭಿಸಿದೆ. ಮೊದಲ ಓವರ್‌ನಲ್ಲೇ ಜೋಶ್ ಹ್ಯಾಜಲ್‌ವುಡ್ ವಿಕೆಟ್ ಪಡೆದರು. ನಂತರ ಯಶ್ ದಯಾಳ್ ಎರಡನೇ ಓವರ್‌ನಲ್ಲಿ ಕೇವಲ 1 ರನ್ ನೀಡಿದರು. ಮೂರನೇ ಓವರ್‌ನಲ್ಲಿ ಹ್ಯಾಜಲ್‌ವುಡ್ ಕೂಡ ಕೇವಲ 4 ರನ್‌ಗಳನ್ನು ನೀಡಿದರು. ಈ ರೀತಿಯಾಗಿ, ಮೊದಲ 3 ಓವರ್‌ಗಳ ನಂತರ ಕೋಲ್ಕತ್ತಾ ಕೇವಲ 9 ರನ್‌ಗಳನ್ನು ಗಳಿಸಿದೆ.

  • 22 Mar 2025 07:37 PM (IST)

    KKR vs RCB: ಡಿ ಕಾಕ್ ಔಟ್, 4/1

    ಕೆಕೆಆರ್ ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡಿದೆ. ಆರಂಭಿಕ ಡಿ ಕಾಕ್ ಓವರ್​ನ 2ನೇ ಎಸೆತದಲ್ಲೇ ಬೌಂಡರಿ ಬಾರಿಸಿದರು. ಆದರೆ ಆ ನಂತರದ ಎಸೆತದಲ್ಲಿ ಅವರಿಗೆ ಜೀವದಾನ ಸಿಕ್ಕಿತು. ಸಲುಭ ಕ್ಯಾಚ್ ಅನ್ನು ಸುಯೇಶ್ ಕೈಚೆಲ್ಲಿದ್ದರು. ಆದರೆ ಅದು ದುಬಾರಿಯಾಗಲಿಲ್ಲ. ಏಕೆಂದರೆ ನಂತರದ ಎಸೆತದಲ್ಲಿ ಡಿ ಕಾಕ್ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ಔಟಾದರು.

  • 22 Mar 2025 07:29 PM (IST)

    KKR vs RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು

    ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರಸಿಕ್ ದಾರ್ ಸಲಾಂ, ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.

    ಇಂಪ್ಯಾಕ್ಟ್ ಆಟಗಾರರು: ದೇವದತ್ ಪಡಿಕ್ಕಲ್, ಅಭಿನಂದನ್ ಸಿಂಗ್, ಮನೋಜ್ ಭಾಂಡಗೆ, ರೊಮಾರಿಯೊ ಶೆಫರ್ಡ್, ಸ್ವಪ್ನಿಲ್ ಸಿಂಗ್.

  • 22 Mar 2025 07:28 PM (IST)

    KKR vs RCB: ಕೋಲ್ಕತ್ತಾ ನೈಟ್ ರೈಡರ್ಸ್

    ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಅಂಗ್ಕ್ರಿಶ್ ರಘುವಂಶಿ, ಸುನಿಲ್ ನರೈನ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

    ಇಂಪ್ಯಾಕ್ಟ್ ಆಟಗಾರರು: ಅನ್ರಿಚ್ ನೋಕಿಯಾ, ಮನೀಶ್ ಪಾಂಡೆ, ವೈಭವ್ ಅರೋರಾ, ಅನುಕೂಲ್ ರಾಯ್, ಲವನಿತ್ ಸಿಸೋಡಿಯಾ.

  • 22 Mar 2025 07:18 PM (IST)

    KKR vs RCB: ಟಾಸ್ ಗೆದ್ದ ಆರ್​ಸಿಬಿ

    ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಕೆಕೆಆರ್ ಮೊದಲು ಬ್ಯಾಟಿಂಗ್ ಮಾಡಲಿದೆ.

  • 22 Mar 2025 06:49 PM (IST)

    KKR vs RCB: ಶಾರುಖ್ ಮಾತು

    ಐಪಿಎಲ್ 2025 ರ ಉದ್ಘಾಟನಾ ಸಮಾರಂಭದಲ್ಲಿ ಈಗ ಶಾರುಖ್ ಖಾನ್ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.

  • 22 Mar 2025 06:48 PM (IST)

    KKR vs RCB: ದಿಶಾ ಮತ್ತು ಕರಣ್ ಅವರಿಂದ ಪ್ರದರ್ಶನ

    ಶ್ರೇಯಾ ಘೋಷಾಲ್ ನಂತರ ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ನೃತ್ಯದ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಅವರ ನಂತರ, ಪಂಜಾಬಿ ಗಾಯಕ ಕರಣ್ ಔಜ್ಲಾ ತಮ್ಮ ಹಿಟ್ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

  • 22 Mar 2025 06:27 PM (IST)

    KKR vs RCB: ಹವಾಮಾನ ಸ್ಪಷ್ಟ

    ಕೋಲ್ಕತ್ತಾದಲ್ಲಿ ಈಗ ಹವಾಮಾನ ಸ್ಪಷ್ಟವಾಗಿದೆ. ಹೀಗಾಗಿ ಅಭಿಮಾನಿಗಳು ಇಡೀ ಪಂದ್ಯವನ್ನು ಯಾವುದೇ ಆತಂಕವಿಲ್ಲದೆ ನೋಡಬಹುದು.

  • 22 Mar 2025 06:17 PM (IST)

    KKR vs RCB: ಶ್ರೇಯಾ ಘೋಷಾಲ್ ಸಾಂಗ್

    ಐಪಿಎಲ್ 2025 ರ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಗಾಯಕಿ ಶ್ರೇಯಾ ಘೋಷಾಲ್ “ಮೇರೆ ಧೋಲ್ನಾ…” ಹಾಡಿನೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಿದ್ದಾರೆ.

  • 22 Mar 2025 06:14 PM (IST)

    KKR vs RCB: ಉದ್ಘಾಟನಾ ಸಮಾರಂಭದಲ್ಲಿ ಯಾರೆಲ್ಲಾ ಇದ್ದಾರೆ?

    ಈ ಬಾರಿಯ ಉದ್ಘಾಟನಾ ಸಮಾರಂಭವು ತುಂಬಾ ವಿಶೇಷವಾಗಿರಲಿದೆ ಏಕೆಂದರೆ ಕೋಲ್ಕತ್ತಾದ ಸಹ-ಮಾಲೀಕ ಮತ್ತು ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರು ಉದ್ಘಾಟನಾ ಸಮಾರಂಭವನ್ನು ಮಾಡರೇಟ್ ಮಾಡಲಿದ್ದಾರೆ, ಅಲ್ಲಿ ಅವರು ನಾಯಕರನ್ನು ಕರೆದು ಅವರೊಂದಿಗೆ ಮಾತನಾಡಲಿದ್ದಾರೆ. ಭಾರತದ ಅತ್ಯಂತ ಪ್ರಸಿದ್ಧ ಗಾಯಕಿ ಶ್ರೇಯಾ ಘೋಷಾಲ್ ಹಾಗೂ ನಟಿ ದಿಶಾ ಪಟಾನಿ ಪ್ರದರ್ಶನ ನೀಡಲಿದ್ದಾರೆ.

  • 22 Mar 2025 05:51 PM (IST)

    KKR vs RCB: 10 ವರ್ಷಗಳ ನಂತರ ಕೋಲ್ಕತ್ತಾದಲ್ಲಿ ಉದ್ಘಾಟನಾ ಸಮಾರಂಭ

    ಋತುವಿನ ಆರಂಭಕ್ಕೂ ಮುನ್ನ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗುವುದು. ವಿಶೇಷವೆಂದರೆ 10 ವರ್ಷಗಳ ನಂತರ, ಉದ್ಘಾಟನಾ ಸಮಾರಂಭ ಮತ್ತು ಮೊದಲ ಪಂದ್ಯವನ್ನು ಕೋಲ್ಕತ್ತಾದಲ್ಲಿ ನಡೆಸಲಾಗುತ್ತಿದೆ ಏಕೆಂದರೆ 2014 ರ ನಂತರ ಕೋಲ್ಕತ್ತಾ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಐಪಿಎಲ್ ನಿಯಮಗಳ ಪ್ರಕಾರ, ಮುಂದಿನ ಸೀಸನ್ ಟ್ರೋಫಿ ಗೆದ್ದ ತಂಡದ ತವರು ಮೈದಾನದಲ್ಲಿ ಆರಂಭವಾಗುತ್ತದೆ.

  • 22 Mar 2025 04:33 PM (IST)

    KKR vs RCB: ಎರಡೂ ತಂಡಗಳ ದಾಖಲೆ ಹೇಗಿದೆ?

    ಐಪಿಎಲ್‌ನಲ್ಲಿ ಕೋಲ್ಕತ್ತಾ ಮತ್ತು ಬೆಂಗಳೂರು ತಂಡಗಳು ಇದುವರೆಗೆ 34 ಬಾರಿ ಮುಖಾಮುಖಿಯಾಗಿವೆ. ಕೋಲ್ಕತ್ತಾ ನೈಟ್ ರೈಡರ್ಸ್ 20 ಪಂದ್ಯಗಳನ್ನು ಗೆದ್ದಿದ್ದ, ಬೆಂಗಳೂರು 14 ಪಂದ್ಯಗಳನ್ನು ಗೆದ್ದಿದೆ.

  • 22 Mar 2025 04:27 PM (IST)

    KKR vs RCB: ಹವಾಮಾನ ಮುನ್ಸೂಚನೆ

    ಕೋಲ್ಕತ್ತಾದಿಂದ ಬಂದ ಒಳ್ಳೆಯ ಸುದ್ದಿ ಏನೆಂದರೆ ಮಳೆ ಸಂಪೂರ್ಣವಾಗಿ ನಿಂತಿದೆ. ಮಧ್ಯಾಹ್ನದಿಂದ ಬಿಸಿಲು ಇದೆ. ಹವಾಮಾನ ಮುನ್ಸೂಚನಾ ವೆಬ್‌ಸೈಟ್ Accuweather.com ಪ್ರಕಾರ, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿಲ್ಲ.

Published On - Mar 22,2025 4:26 PM

Follow us
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಸತೀಶ್ ಜಾರಕಿಹೊಳಿ ದೆಹಲಿಗೆ ಯಾಕೆ ಹೋಗಿದ್ದು ಅಂತ ಗೊತ್ತಿಲ್ಲ: ರಾಜಣ್ಣ
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆಕಾರರು
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ನ್ಯಾಯಾಧೀಶರ ಹನಿಟ್ರ್ಯಾಪ್​ಗೆ​ ಯತ್ನ? ರಾಜಣ್ಣ ಸ್ಪಷ್ಟನೆ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ಳು: ರಾಜಣ್ಣ
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ರನ್ಯಾ ಪ್ರಕರಣದಲ್ಲಿ ಡಿಅರ್​ಐ, ಸಿಎಂಗೆ ವರದಿ ಸಲ್ಲಿಸಿರಬಹುದು: ಪರಮೇಶ್ವರ್
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಬಿಡದಿ ರೈಲ್ವೆ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಕರೆ
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?
ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ನೀರಿನ ಸಮಸ್ಯೆ, ಎಲ್ಲಿ ಜನಪ್ರತಿನಿಧಿಗಳು?