Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs RCB, IPL 2025: ಟಾಸ್ ಗೆದ್ದ ಆರ್​ಸಿಬಿ: ಬಲಿಷ್ಠ ಪ್ಲೇಯಿಂಗ್ XI ಕಣಕ್ಕಿಳಿಸಿದ ರಜತ್ ಪಡೆ

KKR vs RCB Playing XI: ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಬೆಂಗಳೂರು ಪರ ಇಂದು ಓಪನರ್​ಗಳಾಗಿ ವಿರಾಟ್ ಕೊಹ್ಲಿ ಜೊತೆ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರೆ. ಕಳೆದ ಸೀಸನ್​ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ನಾಯಕನ ಪಟ್ಟ ಅಲಂಕರಿಸಿರುವ ರಜತ್ ಪಾಟಿದರ್ ಥ್ರೀ ಡೌನ್ ಆಗಿ ಬರಲಿದ್ದಾರೆ.

KKR vs RCB, IPL 2025: ಟಾಸ್ ಗೆದ್ದ ಆರ್​ಸಿಬಿ: ಬಲಿಷ್ಠ ಪ್ಲೇಯಿಂಗ್ XI ಕಣಕ್ಕಿಳಿಸಿದ ರಜತ್ ಪಡೆ
Kkr Vs Rcb Playing Xi
Follow us
Vinay Bhat
|

Updated on:Mar 22, 2025 | 7:32 PM

ಇಂಡಿಯನ್ ಪ್ರೀಮಿಯರ್ ಲೀಗ್ 18ನೇ (IPL 2025) ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಭರ್ಜರಿ ಆಗಿ ಉದ್ಘಾಟನಾ ಸಮಾರಂಭ ನಡೆದಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಡೇಡಿಯಂನಲ್ಲಿ ಮೊದಲ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಜಿಂಕ್ಯಾ ರಹಾನೆ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಜತ್ ಪಾಟಿದರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗುತ್ತಿದೆ. ಈಗಾಗಲೇ ಟಾಸ್ ಪ್ರಕ್ರಿಯೆ ಕೂಡ ನಡೆದಿದೆ. ಉಭಯ ತಂಡಗಳು ಬಲಿಷ್ಠ 11 ಆಟಗಾರರನೇ ಕಣಕ್ಕಿಳಿಸಿದೆ.

ಸದ್ಯ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಬೆಂಗಳೂರು ಪರ ಇಂದು ಓಪನರ್​ಗಳಾಗಿ ವಿರಾಟ್ ಕೊಹ್ಲಿ ಜೊತೆ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರೆ. ಕಳೆದ ಸೀಸನ್​ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ನಾಯಕನ ಪಟ್ಟ ಅಲಂಕರಿಸಿರುವ ರಜತ್ ಪಾಟಿದರ್ ಥ್ರೀ ಡೌನ್ ಆಗಿ ಬರಲಿದ್ದಾರೆ.

ವಿದೇಶಿ ಸ್ಪೋಟಕ ಬ್ಯಾಟರ್ ಲಿಯಾಮ್ ಲಿವಿಂಗ್​ಸ್ಟೋನ್ 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇವರು ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ವಿಕೆಟ್ ಕೀಪರ್ ಜವಾಬ್ದಾರಿ ಜಿತೇಶ್ ಶರ್ಮಾ ಅವರಿಗೆ ನೀಡಲಾಗಿದೆ. ಆಲ್ರೌಂಡರ್​ಗಳಾದ ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ನಂತರದ ಸ್ಥಾನದಲ್ಲಿ ಬರಲಿದ್ದಾರೆ. ಇವರು ಫಿನಿಶಿಂಗ್ ಜವಾಬ್ದಾರಿ ಕೂಡ ನಿಭಾಯಿಸಬೇಕಿದೆ.

ಇದನ್ನೂ ಓದಿ
Image
ಆರ್​ಸಿಬಿ- ಕೆಕೆಆರ್ ಪಂದ್ಯಕ್ಕೆ ಮಳೆ ಅಡ್ಡಿ; ಪ್ರಸ್ತುತ ಹವಾಮಾನ ಹೇಗಿದೆ?
Image
ಇರ್ಫಾನ್ ಪಠಾಣ್ ವಿರುದ್ಧ ಗಂಭೀರ ಆರೋಪ..!
Image
ಧನಶ್ರೀ-ಚಾಹಲ್ ವಿಚ್ಛೇದನ ಅರ್ಜಿಯಲ್ಲಿದೆ ಶಾಕಿಂಗ್ ವಿಷಯ
Image
ಪಾಕ್ ಬ್ಯಾಟರ್​ಗಳ ಸಿಡಿಲಬ್ಬರಕ್ಕೆ ವಿಶ್ವ ದಾಖಲೆಯೇ ಧೂಳೀಪಟ

ಇನ್ನು ಬೌಲಿಂಗ್ ವಿಭಾಗಕ್ಕೆ ಬಂದರೆ ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಇಂದು ಕಣಕ್ಕಿಳಿಯುತ್ತಿಲ್ಲ. ಜೋಶ್ ಹ್ಯಾಜಲ್​ವುಡ್ ಪ್ಲೇಯಿಂಗ್ ಇಲೆವೆನ್​ನಲ್ಲಿದ್ದಾರೆ. ಯಶ್ವ ದಯಾಳ್ ಮತ್ತೋರ್ವ ವೇಗಿಯಾದರೆ ಸುಯೇಶ್ ಶರ್ಮಾ ಹಾಗೂ ರಿಶಿಕ್ ದಾರ್ ಕೂಡ ಆಡುವ ಬಳಗದಲ್ಲಿದ್ದಾರೆ. ಒಟ್ಟಾರೆ ಬೆಂಗಳೂರು ತಂಡದ ಆಡುವ ಬಳಗ ಸಾಕಷ್ಟು ಬಲಿಷ್ಠವಾಗಿರುವಂತೆ ಕಾಣುತ್ತಿದೆ.

IPL 2025 Opening Ceremony Live: ಈಡನ್ ಗಾರ್ಡನ್ಸ್‌ನಲ್ಲಿ ಉದ್ಘಾಟನಾ ಸಮಾರಂಭ

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಸುನಿಲ್ ನರೈನ್ ಮತ್ತು ಕ್ವಿಂಟನ್ ಡಿ ಕಾಕ್ ಆರಂಭಿಕರಾಗಿ ಆಡುವುದು ಖಚಿತ. ಕಳೆದ ಕೆಲವು ವರ್ಷಗಳಿಂದ ಕೆಕೆಆರ್ ಪರ ಆರಂಭಿಕ ಆಟಗಾರನಾಗಿ ನರೈನ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಸೀಸನ್​ನಲ್ಲಿ ಡಿ ಕಾಕ್ ಬ್ಯಾಟ್​ನಿಂದ ವಾವ್ ಎಂಬಂತಹ ಪ್ರದರ್ಶನ ಬಂದಿರಲಿಲ್ಲ. ಈ ಬಾರಿ ಹೊಸ ತಂಡದ ಪರ ಹೇಗೆ ಆಡುತ್ತಾರೆ ನೋಡಬೇಕಿದೆ.

ನಾಯಕ ಅಜಿಂಕ್ಯ ರಹಾನೆ ಮೂರನೇ ಕ್ರಮಾಂಕದಲ್ಲಿ ಆಡಬಹುದು. ವೆಂಕಟೇಶ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದು, ಕೆಳ ಮಧ್ಯಮ ಕ್ರಮಾಂಕದಲ್ಲಿ ಅಂಗ್‌ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್ ಮತ್ತು ರಮಣದೀಪ್ ಸಿಂಗ್ ಬ್ಯಾಟ್ ಬೀಸಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಸುನಿಲ್ ನರೈನ್ ಜೊತೆ ವರುಣ್ ಚಕ್ರವರ್ತಿ ಆಡಲಿದ್ದಾರೆ. ವೇಗದ ಬೌಲರ್​ಗಳಾಗಿ ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ಹರ್ಷಿತ್ ರಾಣಾ ಸ್ಥಾನ ಪಡೆದಿದ್ದಾರೆ.

ಆರ್​ಸಿಬಿ ಪ್ಲೇಯಿಂಗ್ XI: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ, ರಿಶಿಕ್ ದಾರ್.

ಕೆಕೆಆರ್ ಪ್ಲೇಯಿಂಗ್ 11: ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ಅಂಗ್ಕ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 pm, Sat, 22 March 25