AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಕೆಕೆಆರ್ ವಿರುದ್ಧ 10 ವರ್ಷಗಳ ಇತಿಹಾಸ ಬದಲಿಸುತ್ತಾ ಆರ್​ಸಿಬಿ?

RCB vs KKR IPL 2025: ಮೇ 17 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಮತ್ತುಕೆಕೆಆರ್ ನಡುವಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. RCB ಗೆಲ್ಲುವುದರಿಂದ ಪ್ಲೇಆಫ್ ಸ್ಥಾನ ದೃಢವಾಗುತ್ತದೆ. ಆದರೆ, ಆರ್​ಸಿಬಿ ಕಳೆದ 10 ವರ್ಷಗಳಿಂದ ಕೆಕೆಆರ್ ವಿರುದ್ಧ ಚಿನ್ನಸ್ವಾಮಿಯಲ್ಲಿ ಸತತ ಸೋಲುಗಳನ್ನು ಎದುರಿಸಿದೆ. ಈ ಹಳೆಯ ದಾಖಲೆಯನ್ನು ಮುರಿಯುವುದು ಆರ್​ಸಿಬಿಗೆ ದೊಡ್ಡ ಸವಾಲಾಗಿದೆ. ಈ ಪಂದ್ಯದ ಫಲಿತಾಂಶ ಎರಡೂ ತಂಡಗಳ ಭವಿಷ್ಯವನ್ನು ನಿರ್ಧರಿಸುತ್ತದೆ.

IPL 2025: ಕೆಕೆಆರ್ ವಿರುದ್ಧ 10 ವರ್ಷಗಳ ಇತಿಹಾಸ ಬದಲಿಸುತ್ತಾ ಆರ್​ಸಿಬಿ?
Rcb Vs Kkr
ಪೃಥ್ವಿಶಂಕರ
|

Updated on: May 16, 2025 | 4:44 PM

Share

ಒಂದು ವಾರದ ವಿರಾಮದ ನಂತರ ಮೇ 17 ರಿಂದ ಐಪಿಎಲ್ 2025 (IPL 2025) ಮತ್ತೆ ಪ್ರಾರಂಭವಾಗಲಿದೆ. ಈ ದಿನ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವೆ ಪಂದ್ಯ ನಡೆಯಲಿದೆ. ಈ ಲೀಗ್ ಹಂತದ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಪ್ಲೇಆಫ್‌ನಲ್ಲಿ ಅದರ ಸ್ಥಾನ ದೃಢವಾಗುತ್ತದೆ. ಆದರೆ ಈ ಸೀಸನ್​ನಲ್ಲಿ ತವರಿನಲ್ಲಿ ಹೆಚ್ಚು ಪಂದ್ಯಗಳನ್ನು ಸೋತಿರುವ ಆರ್​ಸಿಬಿಗೆ, ತವರಿನಲ್ಲಿ ಕೆಕೆಆರ್ ವಿರುದ್ಧದ ಕಳಪೆ ದಾಖಲೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ವಾಸ್ತವವಾಗಿ 2015 ರಿಂದ ಆರ್‌ಸಿಬಿ ಈ ಮೈದಾನದಲ್ಲಿ ಕೋಲ್ಕತ್ತಾ ವಿರುದ್ಧ ನಿರಂತರವಾಗಿ ಸೋಲುತ್ತಿದೆ. ಅಂದರೆ ಶನಿವಾರ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಬೇಕಾದರೆ, ಆರ್​ಸಿಬಿ 10 ವರ್ಷಗಳ ಹಳೆಯ ಇತಿಹಾಸವನ್ನು ಬದಲಾಯಿಸಬೇಕಾಗುತ್ತದೆ.

ಕೆಕೆಆರ್ ವಿರುದ್ಧ ಸತತ 5 ಸೋಲು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಉತ್ತಮವಾಗಿಲ್ಲ. ಈ ಮೈದಾನದಲ್ಲಿ ಆಡಿರುವ ಕಳೆದ 5 ಪಂದ್ಯಗಳಲ್ಲಿ ಆರ್​ಸಿಬಿ ವಿರುದ್ಧ ಕೋಲ್ಕತ್ತಾ ಮೇಲುಗೈ ಸಾಧಿಸಿದೆ. 2015 ರಿಂದ, ಆರ್‌ಸಿಬಿ ತನ್ನ ತವರು ನೆಲದಲ್ಲಿ ಒಮ್ಮೆಯೂ ಕೆಕೆಆರ್ ತಂಡವನ್ನು ಸೋಲಿಸಲು ಸಾಧ್ಯವಾಗಿಲ್ಲ. ಅದೇ ಸಮಯದಲ್ಲಿ, ಈ ಮೈದಾನದಲ್ಲಿ ಎರಡೂ ತಂಡಗಳ ಒಟ್ಟಾರೆ ದಾಖಲೆಯ ಬಗ್ಗೆ ಮಾತನಾಡಿದರೆ, ಇಲ್ಲೂ ಸಹ ಆರ್‌ಸಿಬಿ ಹಿಂದುಳಿದಿದೆ. ಚಿನ್ನಸ್ವಾಮಿಯಲ್ಲಿ ಇಲ್ಲಿಯವರೆಗೆ ಉಭಯ ತಂಡಗಳ ನಡುವೆ 12 ಪಂದ್ಯಗಳು ನಡೆದಿದ್ದು, ಬೆಂಗಳೂರು ಕೇವಲ 4 ಪಂದ್ಯಗಳನ್ನು ಗೆದ್ದಿದ್ದರೆ, ಕೋಲ್ಕತ್ತಾ 8 ಪಂದ್ಯಗಳನ್ನು ಗೆದ್ದಿದೆ.

ಇದಲ್ಲದೆ, ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಉಭಯ ತಂಡಗಳ ನಡುವೆ 35 ಪಂದ್ಯಗಳು ನಡೆದಿದ್ದು, ಇದರಲ್ಲಿಯೂ ಆರ್‌ಸಿಬಿಯ ಪ್ರದರ್ಶನ ನಿರಾಶಾದಾಯಕವಾಗಿದೆ. ಕೆಕೆಆರ್ ವಿರುದ್ಧ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಆರ್​ಸಿಬಿ, 20 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆದಾಗ್ಯೂ, ಈ ಸೀಸನ್‌ನಲ್ಲಿ ರಜತ್ ಪಾಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ಅನೇಕ ಹಳೆಯ ದಾಖಲೆಗಳನ್ನು ಮುರಿದಿದೆ. ಅದು 17 ವರ್ಷಗಳ ನಂತರ ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮತ್ತು 10 ವರ್ಷಗಳ ನಂತರ ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಕೋಲ್ಕತ್ತಾ ವಿರುದ್ಧವೂ ಅದೇ ಪ್ರದರ್ಶನ ನೀಡುವ ಇರಾದೆಯಲ್ಲಿ ಆರ್​ಸಿಬಿ ಇದೆ.

IPL 2025: ಬೆಂಗಳೂರಿನಲ್ಲಿ ನಾಳೆ ಶೇ. 84 ರಷ್ಟು ಮಳೆ..! ಆರ್​ಸಿಬಿ- ಕೆಕೆಆರ್ ಪಂದ್ಯ ನಡೆಯುವುದು ಡೌಟ್

ಟೂರ್ನಿಯಲ್ಲಿ ಪರಿಸ್ಥಿತಿ ಹೇಗಿದೆ?

ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡಿದೆ. ತಂಡದ ಎಲ್ಲಾ ಆಟಗಾರರು ಫಾರ್ಮ್‌ನಲ್ಲಿದ್ದಾರೆ. ಆರ್‌ಸಿಬಿ ಇದುವರೆಗೆ 11 ಪಂದ್ಯಗಳನ್ನು ಆಡಿದ್ದು, 8 ಪಂದ್ಯಗಳನ್ನು ಗೆಲುವು ಸಾಧಿಸಿ 16 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್‌ನಲ್ಲಿ ತಂಡದ ಸ್ಥಾನ ಬಹುತೇಕ ಖಚಿತವಾಗಿದೆ. ಆದರೆ, ಇದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಮೇ 17 ರಂದು ಕೆಕೆಆರ್ ತಂಡವನ್ನು ಸೋಲಿಸಿದರೆ, ಅದರ ಪ್ಲೇಆಫ್ ಸ್ಥಾನ ದೃಢವಾಗುತ್ತದೆ. ಅದೇ ಸಮಯದಲ್ಲಿ, ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರದರ್ಶನವು ಈ ಸೀಸನ್‌ನಲ್ಲಿ ವಿಶೇಷವಾಗಿರಲಿಲ್ಲ. ಆಡಿದ 12 ಪಂದ್ಯಗಳಲ್ಲಿ ಕೇವಲ 5 ಪಂದ್ಯಗಳನ್ನು ಗೆದ್ದಿದ್ದು, 11 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಹೀಗಾಗಿ ಕೆಕೆಆರ್ ತಂಡ ಪ್ಲೇಆಫ್ ತಲುಪುವುದು ಕಷ್ಟಕರವೆನಿಸುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ