ನಿಂಗೆ ಐತೆ ಇರು… ಖಲೀಲ್ ಅಹ್ಮದ್ಗೆ ಲೆಕ್ಕಾ ಚುಕ್ತಾ ಮಾಡಿದ ವಿರಾಟ್ ಕೊಹ್ಲಿ
Virat Kohli vs Khaleel Ahmed: ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಹಾಗೂ ಸಿಎಸ್ಕೆ ಬೌಲರ್ ಖಲೀಲ್ ಅಹ್ಮದ್ ನಡುವಣ ಜಿದ್ದಾಜಿದ್ದು ಮುಂದುವರೆದಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಶುರುವಾದ ಈ ಪೈಪೋಟಿಗೆ ವಿರಾಟ್ ಕೊಹ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉತ್ತರ ನೀಡಿದ್ದು ವಿಶೇಷ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 52ನೇ ಪಂದ್ಯದಲ್ಲಿ RCB ತಂಡದ ಓಪನರ್ ವಿರಾಟ್ ಕೊಹ್ಲಿ (Virat Kohli) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡದ ನಾಯಕ ಧೋನಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಜೇಕಬ್ ಬೆಥೆಲ್ ಬಿರುಸಿನ ಆರಂಭ ಒದಗಿಸಿದ್ದರು.
ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿಯು ಮೊದಲ ವಿಕೆಟ್ಗೆ 97 ರನ್ಗಳ ಜೊತೆಯಾಟವಾಡಿದ್ದರು. ಇದರ ನಡುವೆ ವಿರಾಟ್ ಕೊಹ್ಲಿ ಆಕರ್ಷಕ ಹೊಡೆತಗಳೊಂದಿಗೆ ಗಮನ ಸೆಳೆದಿದ್ದರು. ಅದರಲ್ಲೂ ಖಲೀಲ್ ಅಹ್ಮದ್ ಅವರ ಒಂದೇ ಓವರ್ನಲ್ಲಿ ಎರಡು ಸಿಕ್ಸರ್ ಸಿಡಿಸುವ ಮೂಲಕ ಕಿಂಗ್ ಕೊಹ್ಲಿ ಅಬ್ಬರಿಸಿದ್ದರು. ಈ ಸಿಕ್ಸರ್ಗಳೊಂದಿಗೆ ಕೊಹ್ಲಿ ಕಳೆದ ಪಂದ್ಯದಲ್ಲಿನ ಲೆಕ್ಕ ಚುಕ್ತಾ ಮಾಡಿದ್ದು ವಿಶೇಷ.
ಖಲೀಲ್ಗೆ ಖಡಕ್ ಸೂಚನೆ ನೀಡಿದ್ದ ಕೊಹ್ಲಿ:
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 8ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಬೌನ್ಸರ್ ಎಸೆದು ಖಲೀಲ್ ಅಹ್ಮದ್ ದುರುಗುಟ್ಟಿ ನೋಡಿದ್ದರು. ಈ ಪಂದ್ಯದ ಬಳಿಕ ಕೊಹ್ಲಿ ಹಾಗೂ ಖಲೀಲ್ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು. ಈ ವೇಳೆ ನಿನಗೆ ಇದೆ ಎಂಬ ಸೂಚನೆಯನ್ನು ವಿರಾಟ್ ಕೊಹ್ಲಿ ನೀಡಿದ್ದರು.
ಅದರಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದ ವೇಳೆ ಖಲೀಲ್ ಅಹ್ಮದ್ ವಿರಾಟ್ ಕೊಹ್ಲಿಗೆ ಬೌನ್ಸರ್ ಎಸೆದಿದ್ದಾರೆ. ಆದರೆ ಈ ಬಾರಿ ಕಿಂಗ್ ಕೊಹ್ಲಿ ಬೌನ್ಸರ್ಗೆ ಸಿಕ್ಸ್ ಸಿಡಿಸಿ ಪ್ರತ್ಯುತ್ತರ ನೀಡಿದರು. ಅಲ್ಲದೆ ಮರು ಎಸೆತದಲ್ಲಿ ಮತ್ತೊಂದು ಸಿಕ್ಸ್ ಅನ್ನು ಸಹ ಬಾರಿಸಿದ್ದಾರೆ. ಈ ಸಿಕ್ಸರ್ಗಳ ಮೂಲಕ ವಿರಾಟ್ ಕೊಹ್ಲಿ, ಖಲೀಲ್ ಅಹ್ಮದ್ ಜೊತೆ ಸೇಡು ತೀರಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ-ಖಲೀಲ್ ಅಹ್ಮದ್ ವಿಡಿಯೋ:
View this post on Instagram
ಈ ಸಿಕ್ಸರ್ಗಳೊಂದಿಗೆ ಲಯ ತಪ್ಪಿದ ಖಲೀಲ್ ಅಹ್ಮದ್ ಆ ಬಳಿಕ ಒಂದೇ ಓವರ್ನಲ್ಲಿ 33 ರನ್ ನೀಡಿದ್ದು ಈಗ ಇತಿಹಾಸ. ಈ 33 ರನ್ಗಳನ್ನು ಚಚ್ಚುವ ಮೂಲಕ ರೊಮಾರಿಯೊ ಶೆಫರ್ಡ್ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಗೆದ್ದು ಬೀಗಿದ ರಾಯಲ್ ಪಡೆ:
ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ಸಿಬಿ ಪರ ವಿರಾಟ್ ಕೊಹ್ಲಿ 66 ರನ್ ಬಾರಿಸಿದರೆ, ಜೇಕಬ್ ಬೆಥೆಲ್ 55 ರನ್ ಗಳಿಸಿದರು. ಇನ್ನು ರೊಮಾರಿಯೊ ಶೆಫರ್ಡ್ ಕೇವಲ 14 ಎಸೆತಗಳಲ್ಲಿ 53 ರನ್ ಚಚ್ಚಿದರು. ಈ ಮೂಲಕ ಆರ್ಸಿಬಿ ತಂಡ 20 ಓವರ್ಗಳಲ್ಲಿ 213 ರನ್ ಕಲೆಹಾಕಿತು.
ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಈ ಗುರಿಯನ್ನು ಬೆನ್ನತ್ಯಿದ ಸಿಎಸ್ಕೆ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಆರ್ಸಿಬಿ ತಂಡವು 2 ರನ್ಗಳ ರೋಚಕ ಜಯ ಸಾಧಿಸಿದೆ.
Published On - 8:05 am, Sun, 4 May 25




