PBKS vs MI: ನಾಯಕನಾಗಿ ಚೊಚ್ಚಲ ಪಂದ್ಯದಲ್ಲಿ ಗೆದ್ದ ಬುಮ್ರಾ; ಪಂಜಾಬ್​ಗೆ ಸತತ 5ನೇ ಸೋಲು

MI vs PBKS IPL 2026: ಐಪಿಎಲ್ 2026ರ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ರೋಚಕ ಜಯ ಸಾಧಿಸಿತು. ಪ್ಲೇಆಫ್ ದೃಷ್ಟಿಯಿಂದ ಪಂಜಾಬ್​ಗೆ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ತಿಲಕ್ ವರ್ಮಾ ಏಕಾಂಗಿ ಹೋರಾಟದಿಂದ ಮುಂಬೈ ಗೆಲುವಿನ ದಡ ಮುಟ್ಟಿತು. ಜಸ್ಪ್ರೀತ್ ಬೂಮ್ರಾ ತಮ್ಮ ಚೊಚ್ಚಲ ನಾಯಕತ್ವದಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟರು. ಪಂಜಾಬ್ ನೀಡಿದ 201 ರನ್ ಗುರಿಯನ್ನು ಮುಂಬೈ ಅಂತಿಮ ಓವರ್‌ನಲ್ಲಿ ತಲುಪಿತು.

PBKS vs MI: ನಾಯಕನಾಗಿ ಚೊಚ್ಚಲ ಪಂದ್ಯದಲ್ಲಿ ಗೆದ್ದ ಬುಮ್ರಾ; ಪಂಜಾಬ್​ಗೆ ಸತತ 5ನೇ ಸೋಲು
Mumbai

Updated on: May 14, 2026 | 11:45 PM

ಐಪಿಎಲ್ 2026 (IPL 2026) ರ 58ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ (PBKS vs MI) ನಡುವೆ ನಡೆಯಿತು. ಈ ಪಂದ್ಯ ಪ್ಲೇಆಫ್ ದೃಷ್ಟಿಯಿಂದ ಆತಿಥೇಯ ಪಂಜಾಬ್​ಗೆ ಅತ್ಯಂತ ನಿರ್ಣಾಯಕವಾಗಿತ್ತು. ಆದರೆ ಪಂಜಾಬ್ ಗೆಲುವಿನ ಕನಸಿಗೆ ನೀರೆರೆಚಿದ ತಿಲಕ್ ವರ್ಮಾ ಏಕಾಂಗಿಯಾಗಿ ನಿಂತು ಮುಂಬೈ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಪ್ಲೇಆಫ್ ರೇಸ್​ನಿಂದ ಮುಂಬೈ ಅಧಿಕೃತವಾಗಿ ಹೊರಬಿದ್ದಿರುವುದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿತ್ತು. ಆದರೆ ಮೊಟ್ಟ ಮೊದಲ ಬಾರಿಗೆ ಮುಂಬೈ ತಂಡದ ನಾಯಕತ್ವವಹಿಸಿಕೊಂಡಿದ್ದ ಜಸ್ಪ್ರೀತ್ ಬುಮ್ರಾ ತಮ್ಮ ನಾಯಕತ್ವದ ಮೊದಲ ಪಂದ್ಯದಲ್ಲೇ ಸತತ ಸೋಲುಗಳಿಂದ ಕಂಗೆಟ್ಟಿದ್ದ ತಂಡಕ್ಕೆ ಗೆಲುವಿನ ರುಚಿ ತೋರಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 201 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಮುಂಬೈ ತಂಡ 20ನೇ ಓವರ್​ನ 5ನೇ ಎಸೆತದಲ್ಲಿ ಗೆಲುವಿನ ದಡ ಮುಟ್ಟಿತು.

ಪ್ರಭ್ಸಿಮ್ರಾನ್ ಅರ್ಧಶತಕ

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ ಆಕ್ರಮಣಕಾರಿ ಆರಂಭವನ್ನು ಪಡೆಯಿತು. ಆರಂಭಿಕ ಆಟಗಾರ ಪ್ರಭ್ಸಿಮ್ರಾನ್ ಸಿಂಗ್ 32 ಎಸೆತಗಳಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿದರು. ಪ್ರಿಯಾಂಶ್ ಆರ್ಯ 17 ಎಸೆತಗಳಲ್ಲಿ 22 ರನ್ ಬಾರಿಸಿದರು. ಕೊನೆಯಲ್ಲಿ ಅಜ್ಮತುಲ್ಲಾ ಒಮರ್‌ಜೈ 17 ಎಸೆತಗಳಲ್ಲಿ 38 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳು ಮಧ್ಯಮ ಓವರ್‌ಗಳಲ್ಲಿ ರನ್ ವೇಗ ಹೆಚ್ಚಿಸುವಲ್ಲಿ ವಿಫಲರಾದರು. ನಂತರ ವಿಷ್ಣು ವಿನೋದ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಕೊನೆಯ ಮೂರು ಓವರ್‌ಗಳಲ್ಲಿ 53 ರನ್ ಗಳಿಸಿ ತಂಡವನ್ನು 200 ರನ್​ಗಳಿಗೆ ಕೊಂಡೊಯ್ದರು.

ಶಾರ್ದೂಲ್​ಗೆ 4 ವಿಕೆಟ್

ಮುಂಬೈ ಇಂಡಿಯನ್ಸ್ ಪರ ಶಾರ್ದೂಲ್ ಠಾಕೂರ್ 4 ಓವರ್‌ಗಳಲ್ಲಿ 39 ರನ್‌ಗಳಿಗೆ 4 ವಿಕೆಟ್ ಪಡೆದರೆ, ದೀಪಕ್ ಚಾಹರ್ ಕೂಡ 2 ವಿಕೆಟ್ ಪಡೆದರು. ಕಾರ್ಬಿನ್ ಬಾಷ್ 1 ವಿಕೆಟ್ ಪಡೆದರು. ಆದಾಗ್ಯೂ, ನಾಯಕ ಜಸ್ಪ್ರೀತ್ ಬುಮ್ರಾ ಈ ಪಂದ್ಯದಲ್ಲಿಯೂ ವಿಕೆಟ್ ಪಡೆಯಲಿಲ್ಲ.

PBKS vs MI IPL 2026 Highlights: ಪಂಜಾಬ್ ವಿರುದ್ಧ ಗೆದ್ದ ಮುಂಬೈ

ಮುಂಬೈಗೆ ತಿಲಕ್ ಆಸರೆ

ಮುಂಬೈ ಇಂಡಿಯನ್ಸ್ ತಂಡವು ಕೂಡ ರನ್ ಚೇಸಿಂಗ್​ನಲ್ಲಿ ಉತ್ತಮ ಆರಂಭವನ್ನೇ ಪಡೆಯಿತು. ರಯಾನ್ ರಿಕಲ್ಟನ್ 23 ಎಸೆತಗಳಲ್ಲಿ 48 ರನ್ ಗಳಿಸಿದರೆ, ರೋಹಿತ್ ಶರ್ಮಾ 25 ರನ್​ಗಳ ಕಾಣಿಕೆ ನೀಡಿದರು. ನಂತರ ತಿಲಕ್ ವರ್ಮಾ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 33 ಎಸೆತಗಳನ್ನು ಎದುರಿಸಿದ ತಿಲಕ್ ಆರು ಬೌಂಡರಿಗಳು ಮತ್ತು ಅಷ್ಟೇ ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 75 ರನ್ ಗಳಿಸಿದರು. ಹಾಗೆಯೇ ವಿಲ್ ಜ್ಯಾಕ್ಸ್ ಜೊತೆಗೂಡಿ 5 ನೇ ವಿಕೆಟ್‌ಗೆ 56 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರಿಂದಾಗಿ ತಂಡವು 19.5 ಓವರ್‌ಗಳಲ್ಲಿ ಗುರಿ ತಲುಪಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 pm, Thu, 14 May 26

Follow Us