IPL 2026: ಐಪಿಎಲ್​ನಲ್ಲಿ ಹೊಸ ನಿಯಮ

IPL 2026 New Rules: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದೊಂದಿಗೆ ಕೆಲ ನಿಯಮಗಳು ಜಾರಿಗೆ ಬರಲಿದೆ. ಆ ನಿಯಮಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

IPL 2026: ಐಪಿಎಲ್​ನಲ್ಲಿ ಹೊಸ ನಿಯಮ
Ipl 2026

Updated on: Mar 28, 2026 | 7:33 AM

IPL 2026: ಇಂಡಿಯನ್ ಪ್ರೀಮಿಯರ್​ ಲೀಗ್​ನ 19ನೇ ಆವೃತ್ತಿಗಾಗಿ ಬಿಸಿಸಿಐ (BCCI) ಕೆಲವು ಕಟ್ಟುನಿಟ್ಟಾದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಆಟಗಾರರ ಶಿಸ್ತು ಮತ್ತು ಮೈದಾನದ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಮೂಲಕ ಶಿಸ್ತು ಬದ್ಧ ಐಪಿಎಲ್ ಟೂರ್ನಿ ಆಯೋಜಿಸಲು ಪ್ಲ್ಯಾನ್ ರೂಪಿಸಿದೆ. ಇದಕ್ಕಾಗಿ ಜಾರಿ ಮಾಡಲಾಗಿರುವ ಹೊಸ ನಿಯಮಗಳ ಪಟ್ಟಿ ಈ ಕೆಳಗಿನಂತಿದೆ…

  • ಅಭ್ಯಾಸಕ್ಕೆ ನಿರ್ಬಂಧ: ಪಂದ್ಯ ನಡೆಯುವ ದಿನದಂದು ಮೈದಾನದಲ್ಲಿ ಯಾವುದೇ ರೀತಿಯ ಅಭ್ಯಾಸ ಅಥವಾ ವಾರ್ಮ್-ಅಪ್ ಮಾಡಲು ಅವಕಾಶವಿಲ್ಲ.
  • ನೆಟ್ಸ್ ಅಭ್ಯಾಸ: ತಂಡಗಳಿಗೆ ತಲಾ ಎರಡು ನೆಟ್ಸ್ ಮಾತ್ರ ನೀಡಲಾಗುತ್ತದೆ. ಒಂದು ತಂಡದ ಅಭ್ಯಾಸ ಮುಗಿದರೂ ಇನ್ನೊಂದು ತಂಡ ಅದನ್ನು ಬಳಸುವಂತಿಲ್ಲ.
  • ಸಿದ್ಧತೆಗೂ ನಿರ್ಬಂಧ: ಹೋಮ್ ಗ್ರೌಂಡ್‌ನಲ್ಲಿ ಮೊದಲ ಪಂದ್ಯಕ್ಕೆ ನಾಲ್ಕು ದಿನ ಮೊದಲು ಮುಖ್ಯ ಮೈದಾನದಲ್ಲಿ ಅಭ್ಯಾಸ ನಡೆಸುವಂತಿಲ್ಲ.
  • ಬಸ್ ಪ್ರಯಾಣ: ಅಭ್ಯಾಸದ ದಿನಗಳಲ್ಲಿ ಆಟಗಾರರು ಕಡ್ಡಾಯವಾಗಿ ತಂಡದ ಬಸ್ಸಿನಲ್ಲೇ ಪ್ರಯಾಣಿಸಬೇಕು. ಖಾಸಗಿ ವಾಹನಗಳ ಬಳಕೆಗೆ ನಿಷೇಧವಿದೆ.
  • ಕುಟುಂಬದವರಿಗೆ ನಿರ್ಬಂಧ: ಆಟಗಾರರ ಕುಟುಂಬದವರು ಅಥವಾ ಸ್ನೇಹಿತರು ತಂಡದ ಬಸ್ಸಿನಲ್ಲಿ ಪ್ರಯಾಣಿಸುವಂತಿಲ್ಲ ಮತ್ತು ಅಭ್ಯಾಸದ ವೇಳೆ ಮೈದಾನ ಪ್ರವೇಶಿಸುವಂತಿಲ್ಲ.
  • ಡ್ರೆಸ್ ಕೋಡ್: ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಲೀವ್‌ಲೆಸ್ ಜೆರ್ಸಿ ಮತ್ತು ಫ್ಲಾಪಿ ಹ್ಯಾಟ್  ಧರಿಸುವುದನ್ನು ನಿಷೇಧಿಸಲಾಗಿದೆ.
  • ಇಂಪ್ಯಾಕ್ಟ್ ಪ್ಲೇಯರ್: ಟೀಕೆಗಳ ನಡುವೆಯೂ ಈ ನಿಯಮವು 2027 ರವರೆಗೆ ಮುಂದುವರಿಯಲಿದೆ.
  • ಬಾಲ್ ಬದಲಾವಣೆ: ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿಯ ಪ್ರಭಾವ ತಡೆಯಲು 10 ಓವರ್‌ಗಳ ನಂತರ ಚೆಂಡನ್ನು ಬದಲಾಯಿಸಲು ಬೌಲಿಂಗ್ ತಂಡ ಮನವಿ ಮಾಡಬಹುದು.
  • ಆರೆಂಜ್ ಮತ್ತು ಪರ್ಪಲ್ ಕ್ಯಾಪ್: ಈ ಕ್ಯಾಪ್ ಹೊಂದಿರುವ ಆಟಗಾರರು ಪಂದ್ಯದ ಸಮಯದಲ್ಲಿ ಕಡ್ಡಾಯವಾಗಿ ಅದನ್ನು ಧರಿಸಬೇಕು.
  • ಬೌನ್ಸರ್ ನಿಯಮ: ಒಂದು ಓವರ್‌ನಲ್ಲಿ ಬೌಲರ್‌ಗಳು ಎರಡು ಬೌನ್ಸರ್‌ಗಳನ್ನು ಎಸೆಯುವ ನಿಯಮವು ಈ ಸೀಸನ್‌ನಲ್ಲೂ ಮುಂದುವರಿಯಲಿದೆ, ಇದು ಬ್ಯಾಟರ್ ಮತ್ತು ಬೌಲರ್ ನಡುವೆ ಸಮಾನ ಸ್ಪರ್ಧೆಯನ್ನು ನೀಡುತ್ತದೆ.
  • ಸ್ಮಾರ್ಟ್ ರಿಪ್ಲೇ ಸಿಸ್ಟಮ್: ತೀರ್ಪುಗಳಲ್ಲಿ ನಿಖರತೆ ತರಲು ಟಿವಿ ಅಂಪೈರ್ ಈಗ ಎಂಟು ಹೈ-ಸ್ಪೀಡ್ ಕ್ಯಾಮೆರಾಗಳ ನೇರ ದೃಶ್ಯಗಳನ್ನು ಪಡೆಯಲಿದ್ದಾರೆ. ಇದರಿಂದ ಸ್ಟಂಪಿಂಗ್, ರನ್ ಔಟ್ ಮತ್ತು ಕ್ಯಾಚ್‌ಗಳ ತೀರ್ಪು ಅತಿ ವೇಗವಾಗಿ ಸಿಗಲಿದೆ.
  • ಕ್ಯಾಚ್ ನಿಯಮ: ಆಟಗಾರನು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ನಂತರವೇ ಸಂಭ್ರಮಾಚರಣೆ ಮಾಡಬೇಕು, ಇಲ್ಲದಿದ್ದರೆ ಅದು ಕ್ಯಾಚ್ ಎಂದು ಪರಿಗಣಿಸಲ್ಪಡುವುದಿಲ್ಲ.

ಇದನ್ನೂ ಓದಿ: IPL 2026: ಮೊದಲ ಪಂದ್ಯಕ್ಕೆ RCB ತಂಡದ ಮೂವರು ಅಲಭ್ಯ..!

ಈ ಎಲ್ಲಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಈ ನಿಯಮಗಳನ್ನು ಮೀರಿದರೆ ದಂಡ ವಿಧಿಸುವ ಎಚ್ಚರಿಕೆಯನ್ನು ಸಹ ಬಿಸಿಸಿಐ ನೀಡಿದೆ. ಈ ಮೂಲಕ ಈ ಬಾರಿಯ ಐಪಿಎಲ್ ಅನ್ನು ಮತ್ತಷ್ಟು ಶಿಸ್ತುಬದ್ಧವಾಗಿ ಆಯೋಜಿಸಲು ಭಾರತೀಯ ಕ್ರಿಕೆಟ್ ಮಂಡಳಿ ಮುಂದಾಗಿದೆ.

 

 

Follow Us