
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇರುವಷ್ಟೇ ಮಹತ್ವ ಐಪಿಎಲ್‌ನಲ್ಲಿ (IPL) ಆರ್‌ಸಿಬಿ ಹಾಗೂ ಸಿಎಸ್‌ಕೆ (RCB vs CSK) ನಡುವಿನ ಪಂದ್ಯಕ್ಕೆ ಇರುತ್ತದೆ. ಈ ಉಭಯ ತಂಡಗಳ ಮುಖಾಮುಖಿಯನ್ನು ನೋಡಲು ಅಭಿಮಾನಿಗಳು ವರ್ಷಗಳಿಂದ ಕಾದು ಕುಳಿತಿರುತ್ತಾರೆ. ಹಾಗೆಯೇ ಪಂದ್ಯಗಳು ನಡೆದಾಗ ಕ್ರೀಡಾಂಗಣಗಳು ತುಂಬಿ ತುಳುಕುತ್ತಿರುತ್ತವೆ. ಇದನ್ನು ಗಮನಿಸಿಯೇ ಬಿಸಿಸಿಐ, ಲೀಗ್ ಹಂತದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಎರಡು ಪಂದ್ಯಗಳನ್ನು ಆಯೋಜನೆ ಮಾಡುತ್ತದೆ. ಇದರಿಂದ ಅಭಿಮಾನಿಗಳು ಎರಡು ಬಾರಿ ಈ ತಂಡಗಳ ನಡುವಿನ ಮುಖಾಮುಖಿ ನೋಡಲು ಸಾಧ್ಯವಾಗುತ್ತದೆ. ಆದರೆ ಈ ಬಾರಿ ಅದು ಸಾಧ್ಯವಾಗುವುದಿಲ್ಲ. ಹಾಗಿದ್ದರೆ, ಈ ಬಾರಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ಲೀಗ್ ಹಂತದಲ್ಲಿ ಕೇವಲ ಒಂದು ಪಂದ್ಯ ನಡೆಯಲು ಕಾರಣವೇನು ಎಂಬುದನ್ನು ನೋಡುವುದಾದರೆ..
ಮೇಲೆ ಹೇಳಿದಂತೆ 2026 ರ ಐಪಿಎಲ್‌ನ ಲೀಗ್ ಹಂತದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಒಮ್ಮೆ ಮಾತ್ರ ಮುಖಾಮುಖಿಗಲಿವೆ. ಅದರಂತೆ ನಡೆದ ಪಂದ್ಯದಲ್ಲಿ ಆರ್‌ಸಿಬಿ, ಸಿಎಸ್‌ಕೆ ತಂಡವನ್ನು ಹೀನಾಯವಾಗಿ ಮಣಿಸಿದೆ. ಸಿಎಸ್‌ಕೆ ತಂಡದ ಪ್ರದರ್ಶನವನ್ನು ನೋಡಿದರೆ, ಈ ಸೀಸನ್ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆಗಳಿಲ್ಲ. ಒಂದು ವೇಳೆ ಸಿಎಸ್‌ಕೆ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದು ನಾಕೌಟ್ ಸುತ್ತಿಗೆ ಅರ್ಹತೆ ಪಡೆದರೆ, ಆಗ ಉಭಯ ತಂಡಗಳ ನಡುವೆ ಪಂದ್ಯ ನಡೆಯಬಹುದು. ಆದರೆ ಸಿಎಸ್‌ಕೆ ಆ ಹಂತಕ್ಕೆ ಹೋಗುವ ಸಾಧ್ಯತೆಗಳು ಗೋಚರಿಸುತ್ತಿಲ್ಲ.
ಆದಾಗ್ಯೂ ಎಲ್ಲಾ ಆಡೆತಡೆಗಳನ್ನು ನಿವಾರಿಸಿ ಸಿಎಸ್‌ಕೆ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದರೆ, ಆಗ ಆರ್‌ಸಿಬಿ ವಿರುದ್ಧ ಪಂದ್ಯವನ್ನಾಡಬಹುದಾಗಿದೆ. ಅದು ಹೇಗೆ ಎಂದರೆ, ಲೀಗ್ ಹಂತ ಮುಗಿದ ಬಳಿಕ ಅಂಕಪಟ್ಟಿಯಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಆಗ ಎರಡು ತಂಡಗಳು ಕ್ವಾಲಿಫೈಯರ್ 1 ಆಡಲಿವೆ. ಹಾಗೆಯೇ ಆರ್‌ಸಿಬಿ ಹಾಗೂ ಸಿಎಸ್‌ಕೆ ಪಾಯಿಂಟ್ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದರೆ ಆಗ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಗಲಿವೆ.
ಇದರ ಹೊರತಾಗಿ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಎರಡಲ್ಲಿ ಸ್ಥಾನ ಪಡೆದು, ಕ್ವಾಲಿಫೈಯರ್ 1 ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರೆ, ಇತ್ತ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನ ಪಡೆದು, ಎಲಿಮಿನೇಟರ್ ಗೆದ್ದು, ಕ್ವಾಲಿಫೈಯರ್ 2 ರಲ್ಲೂ ಗೆದ್ದರೆ ಆಗ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಒಂದು ವೇಳೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರ 2 ರಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್ 1 ರಲ್ಲಿ ಸೋತರೆ, ಇತ್ತ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಅಗ್ರ ಮೂರು ಅಥವಾ ನಾಲ್ಕರಲ್ಲಿ ಸ್ಥಾನ ಪಡೆದು ಎಲಿಮಿನೇಟರ್ನಲ್ಲಿ ಗೆದ್ದರೆ, ಆಗ ಉಭಯ ತಂಡಗಳು ಕ್ವಾಲಿಫೈಯರ್ 2 ರಲ್ಲಿ ಮುಖಾಮುಖಿಗಲಿವೆ.
ಇನ್ನು ಈ ಸೀಸನ್ನಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವೆ ಕೇವಲ ಒಂದು ಪಂದ್ಯ ನಡೆದಿದ್ದು ಏಕೆ ಎಂಬುದನ್ನು ನೋಡುವುದಾದರೆ.. ಪ್ರತಿ ಬಾರಿಯಂತೆ ಈ ಬಾರಿಯೂ ಬಿಸಿಸಿಐ, 10 ತಂಡಗಳನ್ನು ತಲಾ 5 ತಂಡಗಳ ಎರಡು ವರ್ಚುವಲ್ ಗುಂಪುಗಳಾಗಿ ವಿಂಗಡಿಸಿದೆ. ಅದರಂತೆ ಲೀಗ್ ಹಂತದಲ್ಲಿ ನಡೆಯುವ 70 ಪಂದ್ಯಗಳಲ್ಲಿ ಪ್ರತಿಯೊಂದು ತಂಡವು ತಲಾ 14 ಪಂದ್ಯಗಳನ್ನು ಆಡುತ್ತದೆ. ಅದರಲ್ಲಿ ತಲಾ ಒಂದು ಪಂದ್ಯವನ್ನು ತನ್ನ ಗುಂಪಿನಲ್ಲಿರುವ ಇತರ 4 ತಂಡಗಳ ವಿರುದ್ಧ ಆಡಿದರೆ, ತಲಾ 2 ಪಂದ್ಯಗಳನ್ನು ಇನ್ನೊಂದು ಗುಂಪಿನಲ್ಲಿರುವ 5 ತಂಡಗಳ ವಿರುದ್ಧ ಆಡಲಿದೆ.
ಕೇವಲ 11 ಕೋಟಿಗೆ ಐವರು ಮ್ಯಾಚ್ ವಿನ್ನರ್ಸ್; ಆರ್‌ಸಿಬಿ ಲೆಕ್ಕಾಚಾರಕ್ಕೆ ಥಂಡಾ ಹೊಡೆದ ಉಳಿದ ಫ್ರಾಂಚೈಸಿಗಳು
ಇಲ್ಲಿ ಬಿಸಿಸಿಐ, ಎಲ್ಲಾ 10 ತಂಡಗಳನ್ನು ತಲಾ ಐದು ತಂಡಗಳ 2 ಗುಂಪುಗಳಾಗಿ ವಿಂಗಡಿಸಿದೆ. ಅದರಂತೆ ಗುಂಪು 1 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (5), ಕೋಲ್ಕತ್ತಾ ನೈಟ್ ರೈಡರ್ಸ್ (3), ರಾಜಸ್ಥಾನ್ ರಾಯಲ್ಸ್ (1), ರಾಯಲ್ ಚಾಲೆಂಜರ್ಸ್ ಬೆಂಗಳೂರು (1) ಮತ್ತು ಪಂಜಾಬ್ ಕಿಂಗ್ಸ್ ಗುಂಪು ಎ ನಲ್ಲಿ ಸ್ಥಾನ ಪಡೆದರೆ, ಗುಂಪು ಬಿಯಲ್ಲಿ ಮುಂಬೈ ಇಂಡಿಯನ್ಸ್ (5), ಸನ್‌ರೈಸರ್ಸ್ ಹೈದರಾಬಾದ್ (1), ಗುಜರಾತ್ ಟೈಟಾನ್ಸ್ (1), ದೆಹಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿವೆ.
ಮೇಲೆ ಹೇಳಿದಂತೆ ಆರ್‌ಸಿಬಿ ತನ್ನ ಗುಂಪಿನಲ್ಲಿರುವ ಇತರ ತಂಡಗಳ ವಿರುದ್ಧ ಅಂದರೆ, ಸಿಎಸ್‌ಕೆ,ಕೆಕೆಆರ್, ರಾಜಸ್ಥಾನ್ ಹಾಗೂ ಪಂಜಾಬ್ ವಿರುದ್ಧ ತಲಾ ಒಂದೊಂದು ಪಂದ್ಯವನ್ನು ಲೀಗ್ ಹಂತದಲ್ಲಿ ಆಡಲಿದೆ. ಇನ್ನು ಬಿ ಗುಂಪಿನಲ್ಲಿರುವ ಮುಂಬೈ, ಸನ್‌ರೈಸರ್ಸ್, ಗುಜರಾತ್, ಡೆಲ್ಲಿ ಹಾಗೂ ಲಕ್ನೋ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಹೀಗಾಗಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿರುವ ಸಿಎಸ್‌ಕೆ ಹಾಗೂ ಆರ್‌ಸಿಬಿ ಈ ಬಾರಿ ಲೀಗ್ ಹಂತದಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 pm, Mon, 6 April 26