IRE vs SA: ‘ಸೋತಾ’ಫ್ರಿಕಾ… ಇತಿಹಾಸ ರಚಿಸಿದ ಐರ್ಲೆಂಡ್

Ireland vs South Africa: ಸೌತ್ ಆಫ್ರಿಕಾ ವಿರುದ್ಧ ಇದೇ ಮೊದಲ ಬಾರಿಗೆ ಐರ್ಲೆಂಡ್ ತಂಡವು ಜಯ ಸಾಧಿಸಿದೆ. ಆಫ್ರಿಕನ್ನರ ವಿರುದ್ಧ 6 ಟಿ20 ಪಂದ್ಯಗಳನ್ನಾಡಿದ್ದ ಐರ್ಲೆಂಡ್ ತಂಡವು ಒಮ್ಮೆಯೂ ಗೆಲುವು ದಾಖಲಿಸಿರಲಿಲ್ಲ. ಇದೀಗ 7ನೇ ಪಂದ್ಯದ ಮೂಲಕ ಹೊಸ ಇತಿಹಾಸ ಬರೆಯುವಲ್ಲಿ ಐರಿಷ್ ಪಡೆ ಯಶಸ್ವಿಯಾಗಿದೆ.

IRE vs SA: 'ಸೋತಾ'ಫ್ರಿಕಾ... ಇತಿಹಾಸ ರಚಿಸಿದ ಐರ್ಲೆಂಡ್
IRE vs SA
Follow us
|

Updated on:Sep 30, 2024 | 8:14 AM

ಕೆಲ ದಿನಗಳ ಹಿಂದೆಯಷ್ಟೇ ಅಫ್ಘಾನಿಸ್ತಾನ್ ವಿರುದ್ಧ ಏಕದಿನ ಸರಣಿ ಸೋತಿದ್ದ ಸೌತ್ ಆಫ್ರಿಕಾ ತಂಡವು ಇದೀಗ ಐರ್ಲೆಂಡ್ ವಿರುದ್ಧ ಕೂಡ ಮುಗ್ಗರಿಸಿದೆ. ಅಬುಧಾಬಿಯ ಶೇಕ್ ಝಾಯದ್ ಸ್ಟೇಡಿಯಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಐರ್ಲೆಂಡ್ ತಂಡವು 10 ರನ್​ಗಳ ರೋಚಕ ಜಯ ಸಾಧಿಸಿದೆ. ಇದು ಸೌತ್ ಆಫ್ರಿಕಾ ವಿರುದ್ಧ ಐರ್ಲೆಂಡ್ ತಂಡದ ಮೊದಲ ಗೆಲುವು ಎಂಬುದು ವಿಶೇಷ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಐರ್ಲೆಂಡ್ ಪರ ನಾಯಕ ಪೌಲ್ ಸ್ಟೀರ್ಲಿಂಗ್ ಹಾಗೂ ರಾಸ್ ಅಡೈರ್ ಸ್ಪೋಟಕ ಇನಿಂಗ್ಸ್ ಆಡಿದರು. ಮೊದಲ ವಿಕೆಟ್​ಗೆ 137 ರನ್​ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ ಸೌತ್ ಆಫ್ರಿಕಾ ಬೌಲರ್​ಗಳ ಬೆಂಡೆತ್ತಿದರು.

ಈ ಹಂತದಲ್ಲಿ 52 ರನ್ ಬಾರಿಸಿದ ಪೌಲ್ ಸ್ಟೀರ್ಲಿಂಗ್ ಔಟಾದರು. ಇದಾಗ್ಯೂ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಅಡೈರ್ 58 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಶತಕ ಸಿಡಿಸಿದರು. ಆದರೆ ರಾಸ್ ಅಡೈರ್ (100) ಔಟಾಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಪರಿಣಾಮ 15 ಓವರ್​ಗಳಲ್ಲಿ 150 ರನ್​ಗಳ ಗಡಿದಾಟಿದ್ದ ಐರ್ಲೆಂಡ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 195 ರನ್​ಗಳಿಸಲಷ್ಟೇ ಶಕ್ತರಾದರು.

196 ರನ್​ಗಳ ಸವಾಲು:

ಐರ್ಲೆಂಡ್ ನೀಡಿದ 196 ರನ್​ಗಳ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಉತ್ತಮ ಬ್ಯಾಟಿಂಗ್ ಅನ್ನೇ ಪ್ರದರ್ಶಿಸಿದ್ದರು. ಅಗ್ರ ಕ್ರಮಾಂಕದ ಬ್ಯಾಟರ್​ಗಳಾದ ರಿಯಾನ್ ರಿಕೆಲ್ಟನ್ 36 ರನ್ ಬಾರಿಸಿದರೆ, ರೀಝ ಹೆಂಡ್ರಿಕ್ಸ್ (51) ಹಾಗೂ ಮ್ಯಾಥ್ಯೂ ಬ್ರೀಟ್ಝ್​ಕ್ (51) ಅರ್ಧಶತಕ ಸಿಡಿಸಿದರು.

ಈ ಮೂಲಕ ಐರ್ಲೆಂಡ್ ತಂಡವು 12 ಓವರ್​ಗಳಾಗುವಷ್ಟರಲ್ಲಿ 120 ರನ್​ಗಳ ಗಡಿದಾಟಿದ್ದರು. ಆದರೆ ಮೂರನೇ ವಿಕೆಟ್ ಬಳಿಕ ಸೌತ್ ಆಫ್ರಿಕಾ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 4ನೇ ಕ್ರಮಾಂಕದಿಂದ 10ನೇ ಕ್ರಮಾಂಕದವರೆಗೆ ಒಬ್ಬರೇ ಒಬ್ಬರು ಎರಡಂಕಿ ರನ್​ಗಳಿಸಲು ಸಾಧ್ಯವಾಗಲಿಲ್ಲ.

ಇದಾಗ್ಯೂ ಅಂತಿಮ ಓವರ್​ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಗೆಲ್ಲಲು 18 ರನ್​ಗಳ ಅವಶ್ಯಕತೆಯಿತ್ತು. ಆದರೆ ಗ್ರಹಾಂ ಹ್ಯೂಮ್ ಕೇವಲ 7 ರನ್​ಗಳ ನೀಡುವ ಮೂಲಕ ಸೌತ್ ಆಫ್ರಿಕಾ ತಂಡವನ್ನು 185 ರನ್​ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಐರ್ಲೆಂಡ್ ತಂಡವು 10 ರನ್​ಗಳ ರೋಚಕ ಜಯ ಸಾಧಿಸಿತು.

ಐರ್ಲೆಂಡ್ ಪ್ಲೇಯಿಂಗ್ 11: ಪಾಲ್ ಸ್ಟಿರ್ಲಿಂಗ್ (ನಾಯಕ) , ರಾಸ್ ಅಡೈರ್ , ಹ್ಯಾರಿ ಟೆಕ್ಟರ್ , ಕರ್ಟಿಸ್ ಕ್ಯಾಂಫರ್ , ನೀಲ್ ರಾಕ್ (ವಿಕೆಟ್ ಕೀಪರ್) , ಜಾರ್ಜ್ ಡಾಕ್ರೆಲ್ , ಮಾರ್ಕ್ ಅಡೇರ್ , ಫಿಯಾನ್ ಹ್ಯಾಂಡ್ , ಮ್ಯಾಥ್ಯೂ ಹಂಫ್ರೀಸ್ , ಬೆಂಜಮಿನ್ ವೈಟ್ , ಗ್ರಹಾಂ ಹ್ಯೂಮ್.

ಇದನ್ನೂ ಓದಿ: IPL 2025: ಏನಿದು RTM ಆಯ್ಕೆ: ಇದನ್ನು ಬಳಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸೌತ್ ಆಫ್ರಿಕಾ ಪ್ಲೇಯಿಂಗ್ 11: ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ , ಮ್ಯಾಥ್ಯೂ ಬ್ರೀಟ್ಝ್​ಕ್ , ಐಡೆನ್ ಮಾರ್ಕ್ರಾಮ್ (ನಾಯಕ) ಟ್ರಿಸ್ಟನ್ ಸ್ಟಬ್ಸ್ , ವಿಯಾನ್ ಮುಲ್ಡರ್ , ಪ್ಯಾಟ್ರಿಕ್ ಕ್ರುಗರ್ , ಜಾರ್ನ್ ಫಾರ್ಟುಯಿನ್ , ನ್ಕಾಬಾ ಪೀಟರ್ , ಲಿಜಾಡ್ ವಿಲಿಯಮ್ಸ್ , ಲುಂಗಿ ಎನ್​ಗಿಡಿ.

Published On - 8:10 am, Mon, 30 September 24

ಬೆಂಗಳೂರಿನಲ್ಲಿ ಮಳೆ ಆರ್ಭಟ; ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!
ಬೆಂಗಳೂರಿನಲ್ಲಿ ಮಳೆ ಆರ್ಭಟ; ಮಾನ್ಯತಾ ಟೆಕ್​ಪಾರ್ಕ್​ ವಿಡಿಯೋ ವೈರಲ್!
ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್​-ಸುರೇಶ್ ನಡುವೆ ಜಟಾಪಟಿ
ವಿಡಿಯೋ: ಸಣ್ಣ ವಿಷಯಕ್ಕೆ ಜಗದೀಶ್​-ಸುರೇಶ್ ನಡುವೆ ಜಟಾಪಟಿ
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದರ್ಶನ್ ವಿರುದ್ಧದ ಕೊಲೆ ಪ್ರಕರಣದ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತು
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಬೆಂಗಳೂರು ಮಳೆ: ನಡು ರಸ್ತೆಯಲ್ಲೇ ಸಿಲುಕಿದ ಶಾಲಾ ವಾಹನ; ಮಕ್ಕಳು ಕಂಗಾಲು
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಮಳೆಯನ್ನು ಸ್ವಾಗತಿಸುತ್ತಾ ಬಿಬಿಎಂಪಿಯ ವಾರ್ ರೂಂ ಕಡೆ ತೆರಳಿದ ಶಿವಕುಮಾರ್!
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ: ಜಗದೀಶ್​ಗೆ ಚೈತ್ರಾ ಕ್ಲಾಸ್
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ಕಾರ್ಪೊರೇಟರ್​ಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳೇ ದೊರೆಗಳು!
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ತಾಕತ್ತಿದ್ದರೆ ಜಮೀರ್ ವಿಜಯಪುರದಿಂದ ನನ್ನ ವಿರುದ್ಧ ಸ್ಪರ್ಧಿಸಲಿ: ಯತ್ನಾಳ್
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ