
IPL 2026: ಐಪಿಎಲ್ 2026ರ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡುತ್ತಿರುವ ಆಲ್-ರೌಂಡರ್ ಕೃನಾಲ್ ಪಾಂಡ್ಯ (Krunal Pandya) ತಮ್ಮ ವಿಭಿನ್ನ ಬೌಲಿಂಗ್ ಶೈಲಿಯಿಂದ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ. ಒಬ್ಬ ಸ್ಪಿನ್ನರ್ ಆಗಿದ್ದರೂ 120-125 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಮತ್ತು ವಿಮರ್ಶಕರಲ್ಲಿ ಕುತೂಹಲ ಹಾಗೂ ಅನುಮಾನಗಳನ್ನು ಮೂಡಿಸಿದೆ.
ಏಪ್ರಿಲ್ 5, 2026 ರಂದು ನಡೆದ ಸಿಎಸ್‌ಕೆ (CSK) ವಿರುದ್ಧದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬರೋಬ್ಬರಿ 126.1 ಕಿ.ಮೀ. ವೇಗದಲ್ಲಿ ಎಸೆತವೊಂದನ್ನು ಎಸೆದಿದ್ದರು. ಇದು ಸಾಮಾನ್ಯ ಮಧ್ಯಮ ವೇಗದ ಬೌಲರ್‌ಗಳ ವೇಗಕ್ಕೆ ಸಮನಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಇದು ‘ಚಕ್ಕಿಂಗ್’ (Chucking) ಇರಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ.
ಹಿಂದೆ ಮಾರ್ಲನ್ ಸ್ಯಾಮ್ಯುಯೆಲ್ಸ್ ಕೂಡ ಇದೇ ರೀತಿಯ ವೇಗದ ಎಸೆತಗಳನ್ನು ಎಸೆದಾಗ ಅವರ ಬೌಲಿಂಗ್ ಆಕ್ಷನ್ ಬಗ್ಗೆ ದೂರುಗಳು ಕೇಳಿಬಂದಿದ್ದವು.
ಐಸಿಸಿ ಮತ್ತು ಐಪಿಎಲ್ ನಿಯಮಗಳ ಪ್ರಕಾರ, ಒಬ್ಬ ಬೌಲರ್ ಚೆಂಡನ್ನು ಎಸೆಯುವಾಗ ಅವರ ಮೊಣಕೈ (Elbow) 15 ಡಿಗ್ರಿಗಿಂತ ಹೆಚ್ಚು ನೇರವಾಗಬಾರದು.
ವೇಗ ಮತ್ತು ಆಕ್ಷನ್: ಬೌಲರ್ ಎಷ್ಟೇ ವೇಗವಾಗಿ ಬೌಲಿಂಗ್ ಮಾಡಿದರೂ, ಅವರ ಮೊಣಕೈ ವಕ್ರತೆ 15 ಡಿಗ್ರಿಯ ಮಿತಿಯೊಳಗಿದ್ದರೆ ಅದು ಸಂಪೂರ್ಣವಾಗಿ ಕಾನೂನುಬದ್ಧವಾಗಿರುತ್ತದೆ.
ಅನುಮಾನ: ಕೃನಾಲ್ ಪಾಂಡ್ಯ 125 ಕ್ಕಿಂತ ವೇಗದಲ್ಲಿ ಚೆಂಡೆಸೆದಿರುವುದು ಇದೀಗ ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ಮೊಣಕೈ ವಕ್ರತೆ 15 ಡಿಗ್ರಿಯ ಮಿತಿಯೊಳಗೆ ಸ್ಪಿನ್ನರ್ಗೆ ಇಷ್ಟೊಂದು ವೇಗದಲ್ಲಿ ಚೆಂಡೆಸಲು ಸಾಧ್ಯವಾಗುವುದಿಲ್ಲ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಐಪಿಎಲ್‌ನಲ್ಲಿ ಇದೇ ಮಾದರಿಯಲ್ಲಿ ಚೆಂಡೆಸೆದಿದ್ದ ವೆಸ್ಟ್ ಇಂಡೀಸ್‌ನ ಆಲ್-ರೌಂಡರ್ ಮಾರ್ಲನ್ ಸ್ಯಾಮ್ಯುಯೆಲ್ಸ್ ಅವರ ಮೇಲೆ ನಿಷೇಧ ಹೇರಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.
2012ರ ಐಪಿಎಲ್‌ನಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ತಂಡದ ಪರ ಆಡಿದ್ದ ಸ್ಯಾಮ್ಯುಯೆಲ್ಸ್ ವಿರುದ್ಧ, ಏಪ್ರಿಲ್ 14 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ನಂತರ ಸಂಶಯಾಸ್ಪದ ಬೌಲಿಂಗ್ ಆಕ್ಷನ್ ಬಗ್ಗೆ ದೂರು ಕೇಳಿ ಬಂದಿತ್ತು.
ಸ್ಪಿನ್ನರ್ ಆಗಿದ್ದ ಸ್ಯಾಮ್ಯುಯೆಲ್ಸ್ ಸುಮಾರು 122 ಕಿ.ಮೀ. ವೇಗದಲ್ಲಿ ಎಸೆದಿದ್ದ “ಫಾಸ್ಟರ್ ಒನ್” ಎಸೆತಗಳು ಅಂಪೈರ್‌ಗಳಾದ ಅಲೀಂ ದಾರ್ ಮತ್ತು ಬ್ರೂಸ್ ಆಕ್ಸನ್‌ಫೋರ್ಡ್ ಅವರ ಸಂಶಯಕ್ಕೆ ಕಾರಣವಾಗಿದ್ದವು.
ಈ ಫಾಸ್ಟರ್ ಎಸೆತಗಳ ಬಗ್ಗೆ ಸಂಶಯ ಮೂಡಿದ್ದ ಕಾರಣ, ಈ ಪಂದ್ಯದ ಬಳಿಕ ಮಾರ್ಲನ್ ಸ್ಯಾಮ್ಯುಯೆಲ್ಸ್ ಅವರನ್ನು ಆ ಸೀಸನ್‌ನ ಉಳಿದ ಪಂದ್ಯಗಳಲ್ಲಿ ಬೌಲಿಂಗ್ ಮಾಡದಂತೆ ನಿಷೇಧಿಸಲಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಕೃನಾಲ್ ಪಾಂಡ್ಯ ಅವರ ಎಸೆತಗಳ ವೇಗ ಕೂಡ ಚರ್ಚೆಗೀಡಾಗಿದೆ. ಅಲ್ಲದೆ ಈ ‘ವೇಗದ ಸ್ಪಿನ್ ಬೌನ್ಸರ್’ ಆಕಸ್ಮಿಕವೇನಲ್ಲ. ಈ ಹಿಂದೆ ಕೂಡ ಕೃನಾಲ್ ಇಂತಹದ್ದೇ ಎಸೆತಗಳ ಮೂಲಕ ಬ್ಯಾಟರ್ಗಳನ್ನು ತಬ್ಬಿಬ್ಬು ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಅವರ ಬೌಲಿಂಗ್ ಶೈಲಿಯ ಬಗ್ಗೆ ಪ್ರಶ್ನೆಗಳೆದ್ದಿವೆ…
ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೃನಾಲ್ ಪಾಂಡ್ಯ ಬೌಲಿಂಗ್ ಆ್ಯಕ್ಷನ್ ಬಗ್ಗೆ ದೂರು ನೀಡಿದರೆ, ಅವರು ಪರೀಕ್ಷೆಗೆ ಒಳಪಡಲಿದ್ದಾರೆ. ಅಲ್ಲಿಯವರೆಗೆ ಬೌಲಿಂಗ್ ಮಾಡಲು ಅವಕಾಶ ನೀಡುವ ಸಾಧ್ಯತೆಯಿಲ್ಲ. ಇನ್ನು ಪರೀಕ್ಷೆಗೆ ಒಳಗಾದರೆ ವೇಗದ ಸ್ಪಿನ್ ಬೌನ್ಸರ್ಗೆ ಕಡಿವಾಣ ಹಾಕಬಹುದು.
ಏಕೆಂದರೆ ಈ ಹಿಂದೆ ಐಪಿಎಲ್‌ನಲ್ಲಿ 120 ಕ್ಕಿಂತ ವೇಗದಲ್ಲಿ ಸ್ಪಿನ್ ಬೌಲಿಂಗ್ ಮಾಡಿದ್ದ ಮಾರ್ಲನ್ ಸ್ಯಾಮ್ಯುಯೆಲ್ಸ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಸಂಶಯ ಮೂಡಿದ್ದ ಕಾರಣ ಅವರಿಗೆ ಐಪಿಎಲ್‌ನಲ್ಲಿ ಬೌಲಿಂಗ್ ಬ್ಯಾನ್ ಮಾಡಲಾಗಿತ್ತು.
ಇದನ್ನೂ ಓದಿ: ಒಂದು ರನ್ ಸೋಲುಗಳೊಂದಿಗೆ ಹೀಗೊಂದು ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್
ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೃನಾಲ್ ಪಾಂಡ್ಯ 125 ಕಿ.ಮೀ ವೇಗದಲ್ಲಿ ಬೌನ್ಸರ್ ಎಸೆಯುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಈ ಚರ್ಚೆಗಳ ನಡುವೆ ಸಿಎಸ್‌ಕೆ ಮ್ಯಾನೇಜ್ಮೆಂಟ್ ಕೃನಾಲ್ ವಿರುದ್ಧ ಬಿಸಿಸಿಐಗೆ ದೂರು ನೀಡಲಿದೆಯಾ ಎಂಬುದೇ ಈಗ ಕುತೂಹಲ.
Published On - 8:39 am, Thu, 9 April 26