Karnataka Squad: ಕರ್ನಾಟಕ ಟಿ20 ತಂಡ ಪ್ರಕಟ: ದೇವದತ್ ಪಡಿಕ್ಕಲ್ ಔಟ್
Karnataka Squad: ಕರ್ನಾಟಕ ತಂಡವು ಮಂಗಳವಾರ ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯವಾಡಲಿದೆ. ಇದಕ್ಕಾಗಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ.
Syed Mushtaq Ali Trophy 2022: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಭಾನುವಾರದಿಂದ ಶುರುವಾಗಲಿದೆ. ಮೊದಲ ಸುತ್ತಿನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿದ್ದು, ಆ ಬಳಿಕ ಕ್ವಾರ್ಟರ್ ಫೈನಲ್ ಪಂದ್ಯಗಳು ಶುರುವಾಗಲಿದೆ. ವಿಶೇಷ ಎಂದರೆ ಕರ್ನಾಟಕ (Karnataka Squad ), ಮುಂಬೈ, ದೆಹಲಿ, ಬೆಂಗಾಳ್ ಮತ್ತು ಹಿಮಾಚಲ ಪ್ರದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಇನ್ನು ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಪಂಜಾಬ್, ಹರ್ಯಾಣ, ವಿದರ್ಭ, ಚತ್ತೀಸ್ಗಢ್, ಕೇರಳ ಹಾಗೂ ಸೌರಾಷ್ಟ್ರ ತಂಡಗಳು ಸೆಣಸಲಿವೆ. ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ಅಕ್ಟೋಬರ್ 30 ರಂದು ನಡೆಯಲಿದ್ದು, ಕ್ವಾರ್ಟರ್ ಫೈನಲ್ ಪಂದ್ಯಗಳು ನವೆಂಬರ್ 1 ರಿಂದ ಶುರುವಾಗಲಿದೆ.
ಕರ್ನಾಟಕ ತಂಡವು ಮಂಗಳವಾರ ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕ್ವಾರ್ಟರ್ ಫೈನಲ್ ಪಂದ್ಯವಾಡಲಿದೆ. ಇದಕ್ಕಾಗಿ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದ್ದು, ತಂಡದಿಂದ ದೇವದತ್ ಪಡಿಕ್ಕಲ್ ಅವರನ್ನು ಕೈ ಬಿಡಲಾಗಿದೆ. ಜ್ವರದಿಂದ ಬಳಲುತ್ತಿರುವ ದೇವದತ್ ಪಡಿಕ್ಕಲ್ ಸ್ಥಾನದಲ್ಲಿ ರೋಹನ್ ಪಾಟೀಲ್ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಲೀಗ್ನಲ್ಲಿ ತಂಡದಲ್ಲಿ ಕಾಣಿಸಿಕೊಂಡ ಆಟಗಾರರೇ ಅವಕಾಶ ಪಡೆದಿದ್ದಾರೆ. ಅದರಂತೆ ಕರ್ನಾಟಕ ತಂಡ ಹೀಗಿದೆ.
ಕರ್ನಾಟಕ ತಂಡ:
ಮಾಯಾಂಕ್ ಅಗರ್ವಾಲ್ (ನಾಯಕ), ರೋಹನ್ ಪಾಟೀಲ್, ಮನೀಷ್ ಪಾಂಡೆ, ಎಲ್.ಆರ್. ಚೇತನ್, ಅಭಿನವ್ ಮನೋಹರ್, ಮನೋಜ್ ಭಾಂಡಗೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜಗದೀಶ್ ಸುಚಿತ್, ಲವ್ನೀತ್ ಸಿಸೋಡಿಯ, ಬಿ.ಆರ್. ಶರತ್, ವಿ. ಕೌಶಿಕ್, ವಿಜಯಕುಮಾರ್ ವೈಶಾಖ್, ಎಂ. ವೆಂಕಟೇಶ್, ವಿದ್ವತ್ ಕಾವೇರಪ್ಪ.