KKR vs LSG Highlights, IPL 2024: ಲಕ್ನೋ ವಿರುದ್ಧ ಕೆಕೆಆರ್​ಗೆ 8 ವಿಕೆಟ್ ಜಯ

|

Updated on:Apr 14, 2024 | 7:07 PM

Kolkata Knight Riders Vs Lucknow Super Giants Highlights in Kannada: ಆರಂಭಿಕ ಫಿಲ್ ಸಾಲ್ಟ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಎಂಟು ವಿಕೆಟ್‌ಗಳಿಂದ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಸೋಲಿಸಿದೆ.

KKR vs LSG Highlights, IPL 2024: ಲಕ್ನೋ ವಿರುದ್ಧ ಕೆಕೆಆರ್​ಗೆ 8 ವಿಕೆಟ್ ಜಯ

ಆರಂಭಿಕ ಫಿಲ್ ಸಾಲ್ಟ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಎಂಟು ವಿಕೆಟ್‌ಗಳಿಂದ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 161 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ 15.4 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ಕೆಕೆಆರ್ ಪರ ಫಿಲ್ ಸಾಲ್ಟ್ 47 ಎಸೆತಗಳಲ್ಲಿ 14 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ ಅಜೇಯ 89 ರನ್‌ ಬಾರಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 38 ಎಸೆತಗಳಲ್ಲಿ 38 ರನ್ ಬಾರಿಸಿ ಅಜೇಯರಾಗಿ ಉಳಿದರು.

LIVE NEWS & UPDATES

The liveblog has ended.
  • 14 Apr 2024 07:06 PM (IST)

    ಕೆಕೆಆರ್​ಗೆ 8 ವಿಕೆಟ್ ಜಯ

    ಆರಂಭಿಕ ಫಿಲ್ ಸಾಲ್ಟ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಎಂಟು ವಿಕೆಟ್‌ಗಳಿಂದ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್‌ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 161 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ 15.4 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ಕೆಕೆಆರ್ ಪರ ಫಿಲ್ ಸಾಲ್ಟ್ 47 ಎಸೆತಗಳಲ್ಲಿ 14 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ ಅಜೇಯ 89 ರನ್‌ ಬಾರಿಸಿದರೆ, ನಾಯಕ ಶ್ರೇಯಸ್ ಅಯ್ಯರ್ 38 ಎಸೆತಗಳಲ್ಲಿ 38 ರನ್ ಬಾರಿಸಿ ಅಜೇಯರಾಗಿ ಉಳಿದರು.

  • 14 Apr 2024 06:53 PM (IST)

    ಸಾಲ್ಟ್-ಶ್ರೇಯಸ್ ಕ್ರೀಸ್‌ನಲ್ಲಿ

    ಕೆಕೆಆರ್‌ನ ಆರಂಭಿಕ ಬ್ಯಾಟ್ಸ್‌ಮನ್ ಫಿಟ್ ಸಾಲ್ಟ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಇಲ್ಲಿಯವರೆಗೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು, 13 ಓವರ್‌ಗಳ ಅಂತ್ಯಕ್ಕೆ ಕೆಕೆಆರ್ ಎರಡು ವಿಕೆಟ್‌ಗೆ 127 ರನ್ ಗಳಿಸಿದೆ. ಇನ್ನು ಎಂಟು ವಿಕೆಟ್‌ಗಳು ಬಾಕಿ ಇರುವಂತೆಯೇ ಕೆಕೆಆರ್‌ ಗೆಲುವಿಗೆ 42 ಎಸೆತಗಳಲ್ಲಿ 35 ರನ್‌ಗಳ ಅಗತ್ಯವಿದೆ. ಸದ್ಯ ಫಿಲ್ ಸಾಲ್ಟ್ 35 ಎಸೆತಗಳಲ್ಲಿ 58 ರನ್ ಹಾಗೂ ಶ್ರೇಯಸ್ 34 ಎಸೆತಗಳಲ್ಲಿ 36 ರನ್ ಗಳಿಸಿ ಆಡುತ್ತಿದ್ದಾರೆ.

  • 14 Apr 2024 06:29 PM (IST)

    ಅರ್ಧಶತಕ ಸಮೀಪದಲ್ಲಿ ಸಾಲ್ಟ್

    ಕೆಕೆಆರ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅರ್ಧಶತಕದ ಸಮೀಪದಲ್ಲಿದ್ದಾರೆ. ಆರಂಭಿಕ ಹಿನ್ನಡೆಯ ನಂತರ, ಸಾಲ್ಟ್ ಹಾಗೂ ಶ್ರೇಯಸ್ ಅಯ್ಯರ್ ತಂಡದ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. ಇದುವರೆಗೆ ಮೂರನೇ ವಿಕೆಟ್‌ಗೆ ಇಬ್ಬರು ಬ್ಯಾಟ್ಸ್‌ಮನ್‌ಗಳ ನಡುವೆ 39 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟವಿದೆ. ಸಾಲ್ಟ್ 24 ಎಸೆತಗಳಲ್ಲಿ 43 ರನ್ ಹಾಗೂ ಶ್ರೇಯಸ್ 22 ಎಸೆತಗಳಲ್ಲಿ 21 ರನ್ ಗಳಿಸಿ ಆಡುತ್ತಿದ್ದಾರೆ.

  • 14 Apr 2024 06:10 PM (IST)

    ಪವರ್‌ಪ್ಲೇ ಅಂತ್ಯ

    ಕೆಕೆಆರ್​ನ ಪವರ್‌ಪ್ಲೇ ಮುಗಿದಿದ್ದು, ತಂಡ ಈ 6 ಓವರ್​ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 58 ರನ್ ಗಳಿಸಿದೆ.

  • 14 Apr 2024 06:05 PM (IST)

    ಮೊಹ್ಸಿನ್​ಗೆ ಎರಡನೇ ವಿಕೆಟ್

    ವೇಗದ ಬೌಲರ್ ಮೊಹ್ಸಿನ್ ಖಾನ್ ಆಂಗ್‌ಕ್ರಿಶ್ ರಘುವಂಶಿ ಅವರನ್ನು ಔಟ್ ಮಾಡುವ ಮೂಲಕ ಕೆಕೆಆರ್‌ಗೆ ಎರಡನೇ ಹೊಡೆತ ನೀಡಿದರು. ಆರು ಎಸೆತಗಳಲ್ಲಿ ಏಳು ರನ್ ಗಳಿಸಿ ರಘುವಂಶಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ ಹೊಸ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಬಂದಿದ್ದು, ಅವರೊಂದಿಗೆ ಫಿಲ್ ಸಾಲ್ಟ್ ಇದ್ದಾರೆ.

  • 14 Apr 2024 05:52 PM (IST)

    ನರೈನ್ ಔಟ್

    ಲಕ್ನೋ ನೀಡಿದ 162 ರನ್‌ಗಳ ಗುರಿಯನ್ನು ಬೆನ್ನಟ್ಟಿರುವ ಕೋಲ್ಕತ್ತಾ ತಂಡವು ಆರಂಭಿಕ ಆಟಗಾರ ಸುನಿಲ್ ನರೈನ್ ಅವರ ವಿಕೆಟ್ ಕಳೆದುಕೊಂಡಿದೆ. ಆರು ಎಸೆತಗಳಲ್ಲಿ ಆರು ರನ್ ಗಳಿಸಿ ನರೈನ್ ಔಟಾದರು. ಸದ್ಯ ಆಂಗ್ಕ್ರಿಶ್ ರಘುವಂಶಿ ಫಿಲ್ ಸಾಲ್ಟ್ ಜೊತೆಗೆ ಕ್ರೀಸ್‌ನಲ್ಲಿದ್ದಾರೆ.

  • 14 Apr 2024 05:42 PM (IST)

    ಕೆಕೆಆರ್ ಇನ್ನಿಂಗ್ಸ್ ಆರಂಭ

    ಕೋಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್ ಆರಂಭವಾಗಿದ್ದು, ಫಿಲ್ ಸಾಲ್ಟ್ ಮತ್ತು ಸುನಿಲ್ ನರೈನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

  • 14 Apr 2024 05:21 PM (IST)

    ಕೆಕೆಆರ್​ಗೆ 162 ರನ್ ಗುರಿ

    ಲಕ್ನೋ ಸೂಪರ್‌ಜೈಂಟ್ಸ್ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 161 ರನ್‌ ಕಲೆಹಾಕಿದೆ. ಲಕ್ನೋ ಪರ ನಿಕೋಲಸ್ ಪುರನ್ 32 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 4 ಬೌಂಡರಿಗಳ ನೆರವಿನಿಂದ ಗರಿಷ್ಠ 45 ರನ್ ಗಳಿಸಿದರೆ, ನಾಯಕ ಕೆಎಲ್ ರಾಹುಲ್ 27 ಎಸೆತಗಳಲ್ಲಿ 39 ರನ್ ಗಳಿಸಿದರು.

  • 14 Apr 2024 05:07 PM (IST)

    ಲಕ್ನೋ ನಿಧಾನಗತಿಯ ಬ್ಯಾಟಿಂಗ್

    ಲಕ್ನೋ ತಂಡದ ಬ್ಯಾಟಿಂಗ್ ನಿಧಾನಗತಿಯಲ್ಲಿ ಸಾಗುತ್ತಿದೆ. ಲಕ್ನೋ ತಂಡ 17 ಓವರ್‌ಗಳ ಅಂತ್ಯಕ್ಕೆ ಐದು ವಿಕೆಟ್‌ಗೆ 126 ರನ್ ಗಳಿಸಿದೆ. ಸದ್ಯ ಕೃನಾಲ್ ಪಾಂಡ್ಯ ಮತ್ತು ನಿಕೋಲಸ್ ಪುರನ್ ಕ್ರೀಸ್‌ನಲ್ಲಿದ್ದಾರೆ.

  • 14 Apr 2024 04:51 PM (IST)

    ನರೈನ್​ಗೆ ವಿಕೆಟ್

    ಲಕ್ನೋ ಸೂಪರ್‌ಜೈಂಟ್ಸ್ ಇನ್ನಿಂಗ್ಸ್ ಸಂಪೂರ್ಣವಾಗಿ ತತ್ತರಿಸಿದ್ದು, ಆಯುಷ್ ಬದೋನಿ ಕೂಡ ಪೆವಿಲಿಯನ್‌ಗೆ ಮರಳಿದ್ದಾರೆ. ಬದೋನಿ 27 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಲಕ್ನೋ 14.4 ಓವರ್‌ಗಳಲ್ಲಿ 111 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡಿತು.

  • 14 Apr 2024 04:41 PM (IST)

    ಸ್ಟೊಯಿನಿಸ್ ಕೂಡ ಔಟ್

    ಲಕ್ನೋ ಸೂಪರ್‌ಜೈಂಟ್ಸ್‌ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಐದು ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 10 ರನ್ ಗಳಿಸಿ ಮಾರ್ಕಸ್ ಸ್ಟೊಯಿನಿಸ್ ಔಟಾಗಿದ್ದಾರೆ. ನಿಕೋಲಸ್ ಪೂರನ್ ಹೊಸ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಬಂದಿದ್ದಾರೆ.

  • 14 Apr 2024 04:32 PM (IST)

    ನಾಯಕ ರಾಹುಲ್ ಔಟ್

    ಆಲ್ ರೌಂಡರ್ ಆಂಡ್ರೆ ರಸೆಲ್ ಬೌಲಿಂಗ್​ನಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಔಟಾಗಿದ್ದಾರೆ. ರಾಹುಲ್ 27 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಇದರೊಂದಿಗೆ ರಾಹುಲ್ ಮತ್ತು ಆಯುಷ್ ಬದೋನಿ ನಡುವಿನ ಜೊತೆಯಾಟ ಮುರಿದುಬಿತ್ತು. ರಾಹುಲ್ ಔಟಾದ ನಂತರ ಮಾರ್ಕಸ್ ಸ್ಟೊಯಿನಿಸ್ ಹೊಸ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಬಂದಿದ್ದಾರೆ.

  • 14 Apr 2024 04:31 PM (IST)

    ರಾಹುಲ್-ಬಡೋನಿ ಜೊತೆಯಾಟ

    ಆರಂಭಿಕ ಹಿನ್ನಡೆಯ ನಂತರ ನಾಯಕ ಕೆಎಲ್ ರಾಹುಲ್ ಮತ್ತು ಆಯುಷ್ ಬಡೋನಿ ಲಕ್ನೋ ಸೂಪರ್‌ಜೈಂಟ್ಸ್‌ನ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಸ್ಥಿರ ಇನ್ನಿಂಗ್ಸ್‌ನ ನೆರವಿನಿಂದ ಲಕ್ನೋ ಒಂಬತ್ತು ಓವರ್‌ಗಳ ಅಂತ್ಯಕ್ಕೆ ಎರಡು ವಿಕೆಟ್‌ಗೆ 64 ರನ್ ಗಳಿಸಿದೆ.

  • 14 Apr 2024 04:15 PM (IST)

    ಲಕ್ನೋ ಪವರ್‌ಪ್ಲೇ ಅಂತ್ಯ

    ಲಕ್ನೋ ಪವರ್‌ಪ್ಲೇ ಮುಗಿದಿದ್ದು, ಆರು ಓವರ್‌ಗಳ ಅಂತ್ಯಕ್ಕೆ ತಂಡ ಎರಡು ವಿಕೆಟ್‌ಗೆ 49 ರನ್ ಗಳಿಸಿದೆ. ಸದ್ಯ ಕೆಎಲ್ ರಾಹುಲ್ 13 ಎಸೆತಗಳಲ್ಲಿ 23 ರನ್ ಹಾಗೂ ಆಯುಷ್ ಬಡೋನಿ ಆರು ಎಸೆತಗಳಲ್ಲಿ ಐದು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

  • 14 Apr 2024 04:14 PM (IST)

    ದೀಪಕ್ ಹೂಡಾ ಪೆವಿಲಿಯನ್‌ಗೆ

    ಲಕ್ನೋ ಸೂಪರ್‌ಜೈಂಟ್ಸ್‌ ಎರಡನೇ ವಿಕೆಟ್ ಕಳೆದುಕೊಂಡಿದೆ. ದೀಪಕ್ ಹೂಡಾ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕ್ಯಾಚಿತ್ತು ಪೆವಿಲಿಯನ್​ಗೆ ಮರಳಿದ್ದಾರೆ. ಹೂಡಾ 10 ಎಸೆತಗಳಲ್ಲಿ ಎಂಟು ರನ್ ಗಳಿಸಿ ಔಟಾದರು. ಹೊಸ ಬ್ಯಾಟ್ಸ್‌ಮನ್ ಆಗಿ ಆಯುಷ್ ಬಡೋನಿ ಕ್ರೀಸ್‌ಗೆ ಬಂದಿದ್ದಾರೆ.

  • 14 Apr 2024 03:45 PM (IST)

    ಕ್ವಿಂಟನ್ ಡಿ ಕಾಕ್ ಔಟ್

    ಲಕ್ನೋ ಸೂಪರ್‌ಜೈಂಟ್ಸ್ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಔಟಾಗಿದ್ದಾರೆ. ಕೋಲ್ಕತ್ತಾ ಬೌಲರ್ ವೈಭವ್ ಅರೋರಾ ಡಿ ಕಾಕ್ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಮೊದಲ ಯಶಸ್ಸನ್ನು ನೀಡಿದರು. ಎಂಟು ಎಸೆತಗಳಲ್ಲಿ 10 ರನ್ ಗಳಿಸಿ ಡಿ ಕಾಕ್ ಔಟಾದರು. ಇನ್ನು ನಾಯಕ ಕೆಎಲ್ ರಾಹುಲ್ ಜೊತೆಗೆ ದೀಪಕ್ ಹೂಡಾ ಕ್ರೀಸ್‌ನಲ್ಲಿದ್ದಾರೆ.

  • 14 Apr 2024 03:33 PM (IST)

    ಲಕ್ನೋ ಬ್ಯಾಟಿಂಗ್ ಆರಂಭ

    ಕ್ವಿಂಟನ್ ಡಿ ಕಾಕ್ ಹಾಗೂ ನಾಯಕ ಕೆಎಲ್ ರಾಹುಲ್ ಲಕ್ನೋ ಪರ ಇನ್ನಿಂಗ್ಸ್ ಆರಂಭಿಸಿದ್ದಾರೆ.

  • 14 Apr 2024 03:21 PM (IST)

    ಲಕ್ನೋ ಸೂಪರ್‌ಜೈಂಟ್ಸ್

    ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ವಿಕೆಟ್ ಕೀಪರ್, ನಾಯಕ), ದೀಪಕ್ ಹೂಡಾ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಶಮರ್ ಜೋಸೆಫ್, ಯಶ್ ಠಾಕೂರ್.

    ಇಂಪ್ಯಾಕ್ಟ್ ಪ್ಲೇಯರ್: ಅರ್ಷದ್ ಖಾನ್, ಪ್ರೇರಕ್ ಮಂಕಡ್, ಎಂ ಸಿದ್ಧಾರ್ಥ್, ಅಮಿತ್ ಮಿಶ್ರಾ, ಕೆ. ಗೌತಮ್.

  • 14 Apr 2024 03:20 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್:

    ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.

    ಇಂಪ್ಯಾಕ್ಟ್ ಪ್ಲೇಯರ್ಸ್​: ಸುಯ್ಯಾಶ್ ಶರ್ಮಾ, ಅನುಕುಲ್ ರಾಯ್, ಮನೀಶ್ ಪಾಂಡೆ, ರಹಮಾನುಲ್ಲಾ ಗುರ್ಬಾಜ್, ರಿಂಕು ಸಿಂಗ್.

  • 14 Apr 2024 03:02 PM (IST)

    ಟಾಸ್ ಗೆದ್ದ ಕೆಕೆಆರ್

    ಟಾಸ್ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • Published On - Apr 14,2024 3:01 PM

    Follow us
    ಹಲವು ದಿನಗಳ ಬಳಿಕ ದರ್ಶನ್ ಮುಖದಲ್ಲಿ ನಗು; ಜಾಮೀನು ಸಿಗುವ ಮುನ್ಸೂಚನೆಯೇ?
    ಹಲವು ದಿನಗಳ ಬಳಿಕ ದರ್ಶನ್ ಮುಖದಲ್ಲಿ ನಗು; ಜಾಮೀನು ಸಿಗುವ ಮುನ್ಸೂಚನೆಯೇ?
    ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
    ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
    ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
    ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
    ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
    ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
    ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
    ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
    ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
    ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
    72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
    72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
    ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
    ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
    ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
    ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
    ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
    ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!